ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮ ದೇಶಕ್ಕೆ ವರದಾನ: ಗಂಟಿಹೊಳೆ

ಕುಂದಾಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ಇದರ ಚಿತ್ತೂರು ಗ್ರಾಮ ಶಾಖೆ ಎರಡನೇ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಚಾರಣೆಯನ್ನು ರವಿವಾರ ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮ ದೇಶಕ್ಕೆ ವರದಾನ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಯ ಸಂವಿಧಾನವನ್ನು ಅಂಬೇಡ್ಕರರಿಂದ ಮಾತ್ರ ರಚಿಸಲು ಸಾದ್ಯವಾಗಿದೆ. ಇಂತಹ ಮಹಾನ್ ಗ್ರಂಥ ಪ್ರತಿಯೊಬ್ಬ ಭಾರತೀಯರ ಜೀವನಾಡಿಯಾಗಿದೆ. ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿ, ಸಂಘಟನೆಯು ಉಡುಪಿ ಜಿಲ್ಲೆಯಲ್ಲಿ ಏಳು ತಾಲೂಕಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು 250ಕ್ಕೂ ಹೆಚ್ಚು ಗ್ರಾಮ ಶಾಖೆ ಹೊಂದಿ ಜಿಲ್ಲೆಯಲ್ಲಿ ಬಲಿಷ್ಠ ಸಂಘಟನೆಯಾಗಿದೆ ಎಂದು ತಿಳಿಸಿದರು.
ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಚಿತ್ತೂರು ಗ್ರಾಪಂ ಅಧ್ಯಕ್ಷ ರವಿರಾಜ್ ಶೆಟ್ಟಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಮುದಾಯದ ಸಾಧಕ ರವಿಚಂದ್ರನ್, ಹಿರಿಯ ಹೋರಾಟಗಾರ ಸೂರ ನೈಕಂಬ್ಳಿ, ಊರ್ಮನೆ ಟೀಮ್ ಕೊರ್ಗಿ ಅವರನ್ನು ಸನ್ಮಾನಿಸಲಾಯಿತು.
ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪರಿಸರವಾದಿ ಡಾ. ಅಥುಲ್ ಕುಮಾರ್ ಶೆಟ್ಟಿ, ವನದುರ್ಗೆ ದೇವಸ್ಥಾನದ ಆಡಳಿತ ಮುಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಾಕಿ ಗೀತಾ ಸುರೇಶ್ ಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ನಾಗೂರು, ಸಮಿತಿ ಸದಸ್ಯರುಗಳಾದ ಸುರೇಶ್ ಕುಮಾರ್, ಭಾಸ್ಕರ ಕೆರ್ಗಾಲ್ ಬಾರ್ಕೂರು, ಗೋಪಾಲಕೃಷ್ಣ ನಾಡ, ತಾಲೂಕು ಸಂಘಟನಾ ಸಂಚಾಲಕರುಗಳಾದ ಉದಯ್ ಕುಮಾರ್ ಕೋಳೂರ, ಭಾಸ್ಕರ ಕುಂಟೋಳಿ, ಅಶೋಕ ಮೊಳಹಳ್ಳಿ, ಚಂದ್ರ ಉಳ್ಳೂರು, ಸತೀಶ್ ರಾಮನಗರ, ಪ್ರಶಾಂತ್ ಹೈಕಾಡಿ, ಮಹಿಳಾ ಸಂಘಟನಾ ಸಂಚಾಲಕಿ ಭವಾನಿ, ನಾಗರತ್ನಾ ಭಾಸ್ಕರ್ ನಾಯ್ಕ ಸಿದ್ದಾಪುರ, ಸುಶೀಲಾ, ಪ್ರಮುಖರಾದ ಸತೀಶ್ ಯಡ್ತರೆ, ರಾಜು ಮೊಳಹಳ್ಳಿ, ಅಣ್ಣಪ್ಪ ಆಲೂರು, ಉಮೇಶ್ ಅಮಾಸೆಬೈಲು, ಉಮೇಶ್ ಹಿಜಾಣ ಮೊದಲಾದವರಿದ್ದರು.
ಆರ್.ಪಿ.ಪವನಕುಮಾರ್ ಹೋರಾಟದ ಗೀತೆ ಹಾಡಿದರು. ಶ್ರೀನಿಧಿ ನೈಕಂಬ್ಳಿ ಸಂವಿಧಾನ ಪೀಟಿಕೆ ವಾಚಿಸಿದರು. ಚಂದನ ಕುಂಟೋಳಿ ಸ್ವಾಗತಿಸಿದರು. ಚೈತ್ರ ಸತೀಶ್ ಯಡ್ತರೆ, ಧೀಕ್ಷತ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಸಂಘಟನಾ ಸಂಚಾಲಕ ಶ್ರೀಕಾಂತ್ ಹಿಜಾಣ ವಂದಿಸಿದರು.