ಮನೆಗೆ ನುಗ್ಗಿ ಸೊತ್ತು ಕಳವು

Update: 2023-11-02 16:32 GMT

ಪಡುಬಿದ್ರಿ, ನ.1: ಇನ್ನಾ ಗ್ರಾಮದ ಮಠದಕೆರೆಯಲ್ಲಿರುವ ಮನೆಯೊಂದಕ್ಕೆ ಅ.31ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ರಾಧು ಎಂಬವರ ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕೋಣೆಯ ಕಪಾಟಿನಲ್ಲಿದ್ದ 33,000ರೂ. ನಗದು, ಒಟ್ಟು 4ಸಾವಿರ ರೂ. ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News