ಹಿರಿಯ ಸಾಧಕರ ವಿಚಾರಧಾರೆಗಳು ಮಕ್ಕಳಿಗೆ ದಾರಿದೀಪ: ಡಾ.ಅಶೋಕ ಕಾಮತ್

Update: 2023-11-11 16:00 GMT

ಪಟ್ಲ (ಉಡುಪಿ), ನ.11: ನಮ್ಮ ಪರಿಸರದಲ್ಲಿರುವ ಹಿರಿಯ ಸಾಧಕರ ಅನುಭವಪೂರಿತ ಮಾತುಗಳನ್ನು ಕೇಳುವ, ಅವರ ಬಗ್ಗೆ ಓದಿ ತಿಳಿದುಕೊಳ್ಳುವ ಮನ:ಸ್ಥಿತಿಯನ್ನು ಮಕ್ಕಳು ಎಳವೆಯಲ್ಲಿಯೇ ಬೆಳೆಸಿಕೊಂಡಾಗ ಅವರ ಭವಿಷ್ಯ ಉಜ್ವಲವಾ ಗುತ್ತದೆ ಎಂದು ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಅಶೋಕ ಕಾಮತ್ ಹೇಳಿದ್ದಾರೆ.

ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಇವರ ಆಶ್ರಯದಲ್ಲಿ ಪಟ್ಲ ಯು.ಎಸ್.ನಾಯಕ್ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜರಗಿದ ‘ಸಂಸ್ಕೃತಿ ಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇಂದಿನ ವಿದ್ಯಾರ್ಥಿಗಳು ಶುದ್ಧ ಓದು, ಶುದ್ಧ ಬರಹದ ಬಗ್ಗೆ ವಿಶೇಷ ಗಮನ ಹರಿಸುವಂತೆ ಕಿವಿಮಾತು ಹೇಳಿದ ಅಶೋಕ ಕಾಮತ್, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಇಂತಹ ಕಾರ್ಯಕ್ರಮ ಸ್ತುತ್ಯರ್ಹ. ಇಂತಹ ಕಾರ್ಯಕ್ರಮದಿಂದ ಪಟ್ಲದಂಥ ಗ್ರಾಮೀಣ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸತ್‌ಪ್ರೇರಣೆ ದೊರೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಟ್ರಸ್ಟ್ ವತಿಯಿಂದ ಜಿಲ್ಲೆಯ ಹಿರಿಯ ಲೇಖಕಿ, ಕವಯಿತ್ರಿ ಇಂದಿರಾ ಹಾಲಂಬಿ ಅವರಿಗೆ ‘ಸಂಸ್ಕೃತಿ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಂದಿರಾ ಹಾಲಂಬಿ, ‘ಮಾತೃಭಾಷಾ ಶಿಕ್ಷಣ ಮಗುವಿನ ಸರ್ವ ತೋಮುಖ ವಿಕಾಸಕ್ಕೆ ಅಡಿಪಾಯವಿದ್ದಂತೆ. ಹೀಗಾಗಿ ನಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ದೊರೆಯು ವಂತಾಗಬೇಕು ’ ಎಂದರ ಲ್ಲದೇ, ಸ್ವರಚಿತ ಕವನಗಳನ್ನು ವಾಚಿಸಿದರು.

ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ವಿಶ್ವಸ್ಥ ಪ್ರೊ.ಮುರಳೀಧರ ಉಪಾಧ್ಯ ಮಕ್ಕಳನ್ನು ಉದ್ದೇಶಿಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು.

ಪಡುಬಿದ್ರಿ ಗಣಪತಿ ಪ್ರೌಢ ಶಾಲೆಯ ಶಿಕ್ಷಕ ಡಾ.ರಾಘವೇಂದ್ರ ರಾವ್ ಇವರು ಮಕ್ಕಳಿಗೆ ರಾಮಾಯಣದ ಆಧಾದ ಮೇಲೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟು, ರಾಮಾಯಣದಲ್ಲಿರುವ ಜೀವನಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ಸನ್ಮಾನಿತರ ಕುರಿತು ವಿದ್ಯಾರ್ಥಿನಿ ಸೀತಾ ಅಭಿನಂದನಾ ಮಾತುಗಳ ನ್ನಾಡಿದಳು. ಸ್ಪರ್ಧಾ ವಿಜೇತರಿಗೆ ಬಹು ಮಾನಗಳನ್ನು ವಿತರಿಸಲಾಯಿತು. ಡಾ. ಮುದ್ದಣ್ಣ ಬಾಂದೇಲ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಶ್ರೀಕಾಂತ ಪ್ರಭು ಸ್ವಾಗತಿಸಿ, ಶಿಕ್ಷಕ ಶಾಂತಪ್ಪ ಮೂಲಂಗಿ ವಂದಿಸಿದರು. ಎಚ್.ಎನ್.ನಟರಾಜ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News