ತ್ರಾಸಿ: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2023-07-19 16:02 GMT

ಫಿರ್ ಸಾಬ್ ನದಾಫ

ಗಂಗೊಳ್ಳಿ, ಜು.19: ತ್ರಾಸಿ ಬೀಚ್‌ನಲ್ಲಿ ಅಲೆಯ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಗದಗದ ಮೂಲದ ಕಾಪು ನಿವಾಸಿ ಫಿರ್ ಸಾಬ್ ನದಾಫ(21) ಎಂಬವರ ಮೃತದೇಹವು ಜು.19ರಂದು ಬೆಳಗ್ಗೆ ಗುಜ್ಜಾಡಿ ಗ್ರಾಮದ ಸನ್ಯಾಸಿ ಬಲ್ಲೆ ಎಂಬಲ್ಲಿ ಪತ್ತೆಯಾಗಿದೆ.

ಗದಗ ಜಿಲ್ಲೆಯ ಸಿರಾಜ್ ಎಂಬವರು ಲಾರಿಯನ್ನು ಚಲಾಯಿಸಿಕೊಂಡು ಕಾಪುವಿಗೆ ಬಂದಿದ್ದು, ಇವರೊಂದಿಗೆ ಫೀರ್‌ಸಾಬ್ ಹಾಗೂ ಸಿದ್ದಪ್ಪ ಜು.18 ರಂದು ಊರಿಗೆ ಹೊರಟಿದ್ದರು. ದಾರಿ ಮಧ್ಯೆ ಮಧ್ಯಾಹ್ನ ತ್ರಾಸಿ ಬೀಚ್ ಬಳಿ ಲಾರಿ ನಿಲ್ಲಿಸಿ, ಇವರೆಲ್ಲ ಕಲ್ಲುಗಳ ಮೇಲೆ ನಿಂತು ಫೋಟೋ ತೆಗೆಯುತ್ತಿದ್ದರು.

ಈ ವೇಳೆ ಸಮುದ್ರದ ಅಲೆ ಅಪ್ಪಳಿಸಿದ್ದು, ಇದರಿಂದ ಫೀರ್ ಸಾಬ್ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದರು. ಮೃತದೇಹಕ್ಕಾಗಿ ಮಂಗಳವಾರ ತಡರಾತ್ರಿ ತನಕ ಹುಡುಕಾಟ ನಡೆಸಲಾಗಿತ್ತು. ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ ಆಪತ್ಬಾಂಧವ ಅಂಬುಲೆನ್ಸ್ ಕಾರ್ಯಕರ್ತರು, ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News