ಉಡುಪಿ | ನಾರಾಯಣ ಗುರುಗಳ ಸಂದೇಶ ಸರ್ವಕಾಲಿಕ ಸತ್ಯ: ದಿವಾಕರ ಶೆಟ್ಟಿ

ಉಡುಪಿ : ಸಮಾಜದಲ್ಲಿರುವ ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆದುಹಾಕಿ ಸಂಘಟಿತ ಸಮಾಜ ನಿರ್ಮಾಣಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳು ನಾಡಿಗೆ ನೀಡಿದ ’ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ತತ್ವ ಸಂದೇಶ ಸರ್ವಕಾಲಿಕ ಸತ್ಯವಾಗಿದೆ ಎಂದು ಕೊಡವೂರು ಶ್ರೀಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಕೆ.ದಿವಾಕರ ಶೆಟ್ಟಿ ತೋಟದಮನೆ ಹೇಳಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮೂಡುಬೆಟ್ಟು-ಮಧ್ವನಗರ ಇದರ ವತಿಯಿಂದ ಮೂಡುಬೆಟ್ಟು ಶ್ರೀನಾಗದೇವರ ಸನ್ನಿದಿಯ ಬಳಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಶಿಲಾನ್ಯಾಸವನ್ನು ನೆರವೇರಿಸಿ, ಧಾರ್ಮಿಕ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಾಜಿ ಶಾಸಕ ಕೆ.ರಘುಪತಿ ಭಟ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮೂಡುಬೆಟ್ಟು-ಮಧ್ವನಗರ ಅಧ್ಯಕ್ಷ ಮಧ್ವನಗರ ಶಂಕರ ಪೂಜಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯರಾದ ಶ್ರೀಶ ಭಟ್, ವಿಜಯ ಕೊಡವೂರು, ಕಲಾ ಜಗತ್ತು ಮುಂಬೈ ಸಂಸ್ಥಾಪಕ ವಿಜಯ ಕುಮಾರ್ ಶೆಟ್ಟಿ, ಕಂಗನಬೆಟ್ಟು ಶ್ರೀಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ, ಬಿಲ್ಲವರ ಸೇವಾ ಸಂಘ ಮುನಿಯಾಲು ಅಧ್ಯಕ್ಷ ಎಸ್.ಟಿ.ಕುಂದರ್, ಬಿಲ್ಲವರ ಸೇವಾ ಸಂಘ ಬನ್ನಂಜೆ-ಉಡುಪಿ ಅಧ್ಯಕ್ಷ ಮಾಧವ ಬನ್ನಂಜೆ, ಬಿಲ್ಲವ ಸೇವಾ ಸಂಘ ಅಂಬಲಪಾಡಿ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಮಾಜಿ ನಗರಸಭಾ ಸದಸ್ಯ ರವಿ ಅಮೀನ್ ಬನ್ನಂಜೆ, ಶ್ರೀರಾಮ ಕ್ಷೇತ್ರ ಐಟಿಐ ತಾಂತ್ರಿಕ ವಿದ್ಯಾಲಯ ಬಿಲ್ಲಾಡಿ ಅಧ್ಯಕ್ಷ ಓಬು ಪೂಜಾರಿ ಪಂದುಬೆಟ್ಟು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ಜಿಲ್ಲಾ ಸಂಚಾಲಕ ರಘುನಾಥ್ ಮಾಬಿಯಾನ್, ಭಗವತಿ ತೀಯಾ ಸಮಾಜ ಮೂಡುಬೆಟ್ಟು ಅಧ್ಯಕ್ಷ ಶಂಕರ ಬೆಲ್ಚಡ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಸಂಜೀವ ಸುವರ್ಣ ಉಪಸ್ಥಿತರಿದ್ದರು.
ರಮೇಶ್ ಶೆಟ್ಟಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸು ಸನಿಲ್ ವಂದಿಸಿದರು. ಮಹಿಳಾ ಸದಸ್ಯರಿಂದ ಭಜನಾ ಸೇವೆ ನಡೆಯಿತು.