ಉಡುಪಿ: ರಥಬೀದಿಯಲ್ಲಿ ವಿವಾಹಪೂರ್ವ ಫೋಟೊಶೂಟ್‌ಗೆ ನಿಷೇಧ

ಸಾಂದರ್ಭಿಕ ಚಿತ್ರ
ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಆಸುಪಾಸು ಹಾಗೂ ರಥಬೀದಿಯಲ್ಲಿ ವಿವಾಹಪೂರ್ವ (ಪ್ರಿ ವೆಡ್ಡಿಂಗ್) ಪೋಟೊಶೂಟ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪರ್ಯಾಯ ಶ್ರೀಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
ದೇವಸ್ಥಾನ ಹಾಗೂ ರಥಬೀದಿಗೆ ಅದರದೇ ಆದ ಪಾವಿತ್ರ್ಯವಿರುತ್ತದೆ. ಆದರೆ ಇಂಥ ಚಿತ್ರೀಕರಣಗಳ ಸಂದರ್ಭದಲ್ಲಿ ಭಕ್ತರಿಗೆ ಮುಜುಗುರವಾಗುವ ಸನ್ನಿವೇಶ ಎದುರಾಗುತ್ತಿದೆ. ಹೀಗಾಗಿ ಇಂಥ ಪೋಟೊ ಶೂಟ್‌ಗಳನ್ನು ಇನ್ನು ಮುಂದೆ ರಥಬೀದಿ ಆಸುಪಾಸಿನಲ್ಲಿ ನಡೆಸುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಥಬೀದಿಯಲ್ಲಿ ಈಗ ಪ್ರತಿದಿನ ಎಂಬಂತೆ ಉತ್ಸವಗಳು ನಡೆಯುತ್ತವೆ. ಭಕ್ತರು ಇದನ್ನು ಶೃದ್ಧೆಯ ತಾಣವಾಗಿ ಗೌರವಿಸುತ್ತಾರೆ. ಹೀಗಾಗಿ ಇದು ಪವಿತ್ರ. ಇಂಥ ಜಾಗದಲ್ಲಿ ಮುಜುಗುರ ಉಂಟಾಗುವ ರೀತಿ ಪೋಟೊ ತೆಗೆಯಲಾಗುತ್ತಿದೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಿವಾಹ ಪೂರ್ವ ಪೋಟೊ, ವೀಡಿಯೋ ಶೂಟಿಂಗ್‌ಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಪುತ್ತಿಗೆ ಮಠದ ಅಧಿಕಾರಿಗಳು ತಿಳಿಸಿದ್ದಾರೆ.