ಸಂಸ್ಥೆಯ ಉತ್ತಮ ಕಾರ್ಯಶೀಲತೆಗಾಗಿ ತಂತ್ರಜ್ಞಾನ ಬಳಕೆ ಅವಶ್ಯ: ಶ್ರೀಧರ ಮೊಯ್ಲಿ

Update: 2023-10-30 18:00 IST
ಸಂಸ್ಥೆಯ ಉತ್ತಮ ಕಾರ್ಯಶೀಲತೆಗಾಗಿ ತಂತ್ರಜ್ಞಾನ ಬಳಕೆ ಅವಶ್ಯ: ಶ್ರೀಧರ ಮೊಯ್ಲಿ
  • whatsapp icon

ಹಿರಿಯಡ್ಕ: ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಹಿರಿಯಡಕ ಉಪಸಂಘದ ಕಂಪ್ಯೂಟರ್ ವಿಭಾಗವನ್ನು ಸಂಘ ಮಂಗಳೂರು ಅಧ್ಯಕ್ಷ ಶ್ರೀಧರ ಮೊಯ್ಲಿ ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಸ್ಥೆಯ ಉತ್ತಮ ಕಾರ್ಯಶೀಲತೆಗಾಗಿ ತಂತ್ರಜ್ಞಾನದ ಬಳಕೆ ಅವಶ್ಯ. ನೂತನ ಕಾರ್ಯ ಕಾರಿ ಸಮಿತಿಯ ಈ ಹೊಸ ಹೆಜ್ಜೆ ಅಭಿನಂದನೀಯ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಹಿರಿಯಡಕ ಉಪಸಂಘದ ಅಧ್ಯಕ್ಷ ಎಚ್.ರಾಜೇಂದ್ರ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೆಲ್ಕಂಗ್ರೂಪ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ಪ್ರಾಧ್ಯಾಪಕ ರಾಘವೇಂದ್ರ ಜಿ. ಮಾತನಾಡಿದರು.

ಸಂಘದ ಲೆಕ್ಕ ಪರಿಶೋಧಕ ಎಚ್.ಗಣೇಶ್ ಪ್ರಸ್ತಾವಿಕವಾಗಿ ಮಾತನಾಡಿ ದರು. ಜ್ಯೋತಿ ಕುಮಾರ ದೇವಾಡಿಗ ಸ್ವಾಗತಿಸಿ ದರು. ಜೊತೆ ಕಾರ್ಯದರ್ಶಿ ಮನ್ಮಥ ದೇವಾಡಿಗ ವಂದಿಸಿದರು. ಶತ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News