ಫೆ.15ರೊಳಗೆ ವಾರಾಹಿ ಕುಡಿಯುವ ನೀರಿನ ಯೋಜನೆ ಪೂರ್ಣ: ಕುಡ್ಸೆಂಪ್ ಅಧಿಕಾರಿ

Update: 2023-11-06 16:28 GMT

ಉಡುಪಿ, ನ.6: ಉಡುಪಿ ನಗರಸಭೆಗೆ ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದು, ಫೆಬ್ರವರಿ 15ರೊಳಗೆ ಕಾಮಗಾರಿ ಪೂರ್ಣಗೊಳಿಸಿ ನಗರಕ್ಕೆ ನೀರು ಪೂರೈಸುವ ಕಾರ್ಯ ಮಾಡಲಾಗುವುದು ಎಂದು ಕುಡ್ಸೆಂಪ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಇಂದು ಉಡುಪಿ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕಳೆದ ವರ್ಷ ಪೂರ್ಣಗೊಳ್ಳಬೇಕಾದ ಯೋಜನೆಯು ಕೊರೋನಾದಿಂದ ವಿಳಂಬವಾಗಿದೆ. ಅದೇ ರೀತಿ ಪೈಪ್ ವೆಲ್ಡಿಂಗ್ ಕಾರ್ಯ ಕೂಡ ಕಾರ್ಮಿಕರ ಕೊರತೆಯಿಂದ ಸಾಧ್ಯವಾಗಿಲ್ಲ. ಅಲ್ಲದೆ ಕೆಲವೊಂದು ಕಡೆ ಪೈಪ್‌ಲೈನ್ ಖಾಸಗಿ ಭೂಮಿಯಲ್ಲಿ ಹಾದು ಹೋಗಿದ್ದು, ಅದರ ಮಾಲಕರು ಪರಿಹಾರವನ್ನು ಕೇಳು ತ್ತಿದ್ದಾರೆ. ಆದರೆ ನಮಗೆ ಪರಿಹಾರ ನೀಡಲು ಅವಕಾಶ ಇಲ್ಲ ಎಂದರು.

ಕೆಲವು ಕಡೆ ಪೈಪ್‌ಲೈನ್ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಕೆಲವು ಕಡೆ ಅರಣ್ಯ ಇಲಾಖೆ ಸಮಸ್ಯೆಗಳಿವೆ. ಈ ಸಮಸ್ಯೆ ಗಳನ್ನು 15 ದಿನಗಳಲ್ಲಿ ಪರಹರಿಸ ಲಾಗುವುದು. ಪೈಪ್‌ಲೈನ್ ಸಂಬಂಧ ಐದು ಸೇತುವೆ ಕಾಮಗಾರಿ ನಡೆಯ ಬೇಕಾ ಗಿದ್ದು, ಇದರಲ್ಲಿ ಒಂದು ಸೇತುವೆ ಪೂರ್ಣವಾಗಿದೆ. ಉಳಿದ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಈ ಬಾರಿ ಮಳೆಯ ಕೊರತೆ ಯಿಂದ ಡಿಸೆಂಬರ್‌ನಲ್ಲಿ ನೀರಿನ ಅಭಾವ ಎದುರಾಗಬಹುದು. ಆದುದರಿಂದ ಕಾಮಗಾರಿ ಆದಷ್ಟು ಶೀಘ್ರಗೊಳಿಸಬೇಕು. ಮುಂದೆ ಸಮಸ್ಯೆಯಾದರೆ ಅಧಿಕಾರಿ ಗಳೇ ಜವಾಬ್ದಾರರಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಸರಕಾರ ವಸತಿ ಇಲಾಖೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹೆರ್ಗ ಗ್ರಾಮದಲ್ಲಿ ನಿರ್ಮಿಸಲಾ ಗುತ್ತಿರುವ ವಸತಿ ಸಮುಚ್ಛಯದ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಡಿ.1ರಂದು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಮಂಡಳಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಬಾಕಿ ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು 15 ದಿನಗಳೊಳಗೆ ಕಲ್ಪಿಸಿ ಮನೆಯ ಕೀಯನ್ನು ಫಲಾನುಭವಿಗಳಿಗೆ ನೀಡಲಾಗುವುದು. ಮುಂದಿನ ಹಂತ ದಲ್ಲಿ ಮೂಲಭೂತ ಸೌರ್ಕಯ ಹಾಗೂ ರಸ್ತೆ ಕಾಮಗಾರಿಯನ್ನು ನಡೆಸಲಾಗು ವುದು ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ರಾಯಪ್ಪ, ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ವಿಪಕ್ಷ ನಾಯಕ ರಮೇಶ್ ಕಾಂಚನ್ ಮೊದ ಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News