ಯುವಕ ಆತ್ಮಹತ್ಯೆ
ಭಟ್ಕಳ: ಮಾಡಿದ ಸಾಲವನ್ನು ತೀರಿಸಲಾಗದೆ ಮಾನಸಿಕ ಒತ್ತಡದಿಂದಾಗಿ ಸಂದೀಪ ತಿಮ್ಮಯ್ಯ ನಾಯ್ಕ (ಹೆಬಳೆ, ಹೊನ್ನೆಗದ್ದೆ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಸಂದೀಪ ತಿಮ್ಮಯ್ಯ ಅವರು ರಾತ್ರಿ 7 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಲಾಡ್ಜ್‌ನಲ್ಲಿ ಪಾರ್ಟೈಮ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ದಿನದ ವೇಳೆ ತೆಂಗಿನಗುಂಡಿಯ ಖಾಸಗಿ ಸೊಸೈಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ ನಂತರ, ಶುಕ್ರವಾರ ಬೆಳಗ್ಗೆ ಲಾಡ್ಜ್‌ಗೆ ಮರಳಿದ ಅವರು ನೇಣು ಹಾಕಿಕೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 8:30 ರಿಂದ 9:30ರ ನಡುವೆ ಈ ಘಟನೆ ನಡೆದಿದ್ದು, ತಕ್ಷಣವೇ ಸ್ಥಳೀಯರು ಭಟ್ಕಳ ನಗರ ಠಾಣೆಗೆ ಮಾಹಿತಿ ನೀಡಿದರು. ಘಟನೆಯ ಹಿನ್ನೆಲೆಯಲ್ಲಿ ಮೃತನ ಸಹೋದರ ಶೇಖರ ತಿಮ್ಮಯ್ಯ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪಿ.ಎಸ್.ಐ ನವೀನ ನಾಯ್ಕ, ವಿಧಿ ವಿಜ್ಞಾನ ಅಧಿಕಾರಿಗಳಾದ ರಮೇಶ್, ಮತ್ತು ಇತರ ಸಿಬ್ಬಂದಿ ದೀಪಕ ನಾಯ್ಕ, ಮದಾರಸಾಬ ಚಿಕ್ಕೇರಿ, ದೇವು ನಾಯ್ಕ, ಕಿರಣ ಪಾಟೀಲ್ ಹಾಗೂ ವಿಜಯ ಜಾಧವ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ಸುದ್ದಿ ತಿಳಿದ ಸಚಿವ ಮಂಕಾಳ ವೈದ್ಯ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.