ಭಟ್ಕಳ: ಮಹಿಳೆ ನಾಪತ್ತೆ

Update: 2025-01-21 18:36 IST
ಭಟ್ಕಳ: ಮಹಿಳೆ ನಾಪತ್ತೆ
  • whatsapp icon

ಭಟ್ಕಳ: ತಾಲೂಕಿನ ಜಾಲಿ ಪ.ಪಂ ವ್ಯಾಪ್ತಿಯ ಅಜಾದ್ ನಗರದ 6ನೇ ಕ್ರಾಸ್ ಹಾಲಿ ಹನಿಪಾಬದ್ ನಿವಾಸಿ ಬಿಬಿಜಾನ್ ಹಸನ ಮುಲ್ಲಾ (30) ಎಂಬವರು ಕಾಣೆಯಾಗಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಜ.17 ರಂದು ಸಂಜೆ 4.30 ಗಂಟೆಗೆ ಮನೆಯಲ್ಲಿ ಅಂಗಡಿಗೆ ಹೋಗಿ ಸಾಮಾನು ತರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಚಹರೆ: ಗೋಧಿ ವರ್ಣ, ಉದ್ದನೆ ಮುಖ, ತೆಳ್ಳನೆಯ ಮೈ ಕಟ್ಟು, 5 ಅಡಿ ಎತ್ತರ, ಉರ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮ್ಯಾಕ್ಸಿ ಹಾಗೂ ಕಪ್ಪು ಬುರ್ಖಾ ಧರಿಸಿರುತ್ತಾಳೆ.

ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08385-227333, ಪಿಎಸ್‌ಐ ಭಟ್ಕಳ ಗ್ರಾಮೀಣ ಠಾಣೆ ದೂರವಾಣಿ ಸಂಖ್ಯೆ:9480805252, ಕಾರವಾರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08382-226550 ಮಾಹಿತಿ ನೀಡಬೇಕು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News