ಮಾಜಿ ಕಬಡ್ಡಿ ಆಟಗಾರ ಅಬು ಫೈಸಲ್ ಮೊಹ್ತಿಶಾಂ ನಿಧನ

Update: 2025-01-29 22:04 IST
ಮಾಜಿ ಕಬಡ್ಡಿ ಆಟಗಾರ ಅಬು ಫೈಸಲ್ ಮೊಹ್ತಿಶಾಂ ನಿಧನ
  • whatsapp icon

ಭಟ್ಕಳ:  ಮಾಜಿ ಕಬಡ್ಡಿ ಆಟಗಾರ ಹಾಗೂ ಕಾಸ್ಮೋಸ್ ಸ್ಪೋರ್ಟ್ಸ್ ಸೆಂಟರ್‌ನ ಪ್ರಮುಖ ಸದಸ್ಯ ಅಬು ಫೈಸಲ್ ಮೊಹ್ತಿಶಾಂ (46) ಅವರು ಮಂಗಳವಾರ ರಾತ್ರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಅಬು ಫೈಸಲ್ ತಮ್ಮ ಕ್ರಿಡಾ ಜೀವನದಲ್ಲಿ ಶಿಸ್ತಿನಿಂದ ಹಾಗೂ ಕ್ರೀಡಾ ಮನೋಭಾವದೊಂದಿಗೆ ಮಿಂಚಿದ ಆಟಗಾರರಾಗಿ ದ್ದರು. ಕೇವಲ ಉತ್ತಮ ಕಬಡ್ಡಿ ಆಟಗಾರನಾಗಿಯೇ ಅಲ್ಲ, ಅನೇಕ ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕನಾಗಿ, ಅವರ ಭವಿಷ್ಯ ರೂಪಿಸಲು ಸಹಾಯ ಮಾಡಿದ್ದರು. ಕ್ರೀಡೆಯ ಜೊತೆಗೆ ಸಮಾಜಸೇವೆಗೂ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದ ಅವರು, ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದರು.

ಬುಧವಾರ ಸಂಜೆ ಅವರ ಪಾರ್ಥಿವ ಶರೀರವನ್ನು ಭಟ್ಕಳಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಹಾಗೂ ಹಲವು ಸಂಘಟನೆಗಳು ಗೌರವ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News