ಹೊಸಪೇಟೆ: ಗುಡುಗು ಸಹಿತ ಭಾರೀ ಮಳೆ; ಜನ ಜೀವನ ಅಸ್ತವ್ಯಸ್ತ
Update: 2024-10-18 05:32 GMT
ಹೊಸಪೇಟೆ :ವಿಜಯನಗರದಲ್ಲಿ ರಾತ್ರಿಯಿಡೀ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಎಂಪಿ ಪ್ರಕಾಶ್ ನಗರ, ಮತ್ತು ಕೆಎಸ್ಸಾರ್ಟಿಸಿ ಕಾಲೋನಿಯ ರಸ್ತೆಗಳೆಲ್ಲ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ.
ಮೂರು ದಿನದಿಂದ ಸತತವಾಗಿ ಮೋಡ ಕವಿದ ವಾತಾವರಣ ಮತ್ತು ಜಿಟಿ,ಜಿಟಿ ಮಳೆಯಿಂದ ಜನಜೀವನ ಸಂಪೂರ್ಣ ಹದಗೆಟ್ಟಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಎಂಪಿ. ಪ್ರಕಾಶ್ ನಗರ ನಿವಾಸಿಗಳು ಆಗ್ರಹಿಸಿದ್ದಾರೆ.