ಹೊಸಪೇಟೆ | ಸಾಮೂಹಿಕ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ
Update: 2025-04-18 20:26 IST

ಹೊಸಪೇಟೆ : ನಗರದ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿ ವತಿಯಿಂದ ಅಂಜುಮನ್ ಆಸ್ಪತ್ರೆಯ ಅವರಣದಲ್ಲಿ ನಗರದ ಹಾಗೂ ಗ್ರಾಮೀಣ ಭಾಗದ ಮುಸ್ಲಿಂ ಭಾಂದವರ 140ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಮುಂಜಿಗೆ ಒಳಗಾದ ಎಲ್ಲಾ ಮಕ್ಕಳಿಗೂ ಜೌಷಧ ಹಾಗೂ ಪೌಷ್ಟಿಕಾಹಾರದ ಕಿಟ್ ನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ,ಹಬೀಬುಲ್ಲ, ಡಾ.ಖಲೀಮುಲ್ಲಾ, ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಫೈರೋಜ್ ಖಾನ್, ಕಾರ್ಯದರ್ಶಿಗಳಾದ ಮುಹಮ್ಮದ್ ಅಬೂಬ್ಬಕರ್ ಅಶ್ರಫಿ, ಸಹಕಾರ್ಯದರ್ಶಿಗಳಾದ ಮುಹಮ್ಮದ್ ದರ್ವೇಶ್, ಸದ್ಯಸರಾದ ಸದ್ದಾಂ ಹುಸೇನ್ ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದರು.