ಕೂಡ್ಲಿಗಿ: ಟ್ರ್ಯಾಕ್ಟರ್ ಪಲ್ಟಿ; ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ
Update: 2025-04-26 09:00 IST

ಹೊಸಪೇಟೆ: ಕಲ್ಲು ತುಂಬಿದ ಟ್ರಾಕ್ಟರ್ ಪಲ್ಟಿ ಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಹರ್ಲಾಪುರ ಗ್ರಾಮದಿಂದ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮಕ್ಕೆ ಕಲ್ಲು ಕಂಬಗಳನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಇಬ್ಬರ ಮೇಲೆ ಕಲ್ಲುಗಳು ಬಿದ್ದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗಂಭೀರ ಗಾಯಗೊಂಡ ಇಬ್ಬರನ್ನು ಹೆದ್ದಾರಿ ಸಹಾಯಕರ ತಂಡ, ಟೋಲ್ ಸಿಬ್ಬಂದಿ ಹಾಗೂ ಪೊಲೀಸರು ಕೂಡ್ಲಿಗಿ ಆಸ್ಪತ್ರೆಗೆ ಗೆ ದಾಖಲಿಸಿದ್ದಾರೆ.