ವಿಜಯನಗರ: ಹಳ್ಳಕ್ಕೆ ಉರುಳಿದ ಕೆಎಸ್ಸಾರ್ಟಿಸಿ ಬಸ್; ಓರ್ವ ಮೃತ್ಯು
Update: 2024-10-25 04:25 GMT
ಹರಪನಹಳ್ಳಿ : (ವಿಜಯನಗರ) ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಸತ್ತೂರು ಗ್ರಾಮದ ಬಳಿ ಗುರುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕರಿಬಸಪ್ಪರ ಹನುಮಕ್ಕ (45) ಎಂದು ಗುರುತಿಸಲಾಗಿದೆ. ದಾವಣಗೆರೆ ಸಮೀಪ ಮೇಳ್ಳೆಕಟ್ಟೆಗೆಯಿಂದ ಹರಪನಹಳ್ಳಿ ಕಡೆಗೆ ಹೋಗುವ ಕೆಎಸ್ಸಾರ್ಟಿಸಿ ಬಸ್ ಅಪಘಾತಕ್ಕೊಳಗಾಗಿದ್ದು, ಚಾಲಕನ ಅಜಾರೂಕತೆಯಿಂದ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಗಾಯಾಳುಗಳನ್ನು ದಾವಣಗೆರೆಯ ಚಿಕೆಟೇರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.