ವಿಜಯನಗರ | ರೈತರು ಬೆಳೆದ ಬಿಳಿ ಜೋಳಕ್ಕೆ ಬೆಂಬಲ ಬೆಲೆ ನಿಗಧಿ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್
Update: 2025-04-21 18:08 IST

ಎಂ.ಎಸ್.ದಿವಾಕರ್
ವಿಜಯನಗರ(ಹೊಸಪೇಟೆ) : 2024-25 ನೇ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳ ಅನ್ವಯ ಎಫ್‌ಎಕ್ಯೂ ಗುಣಮಟ್ಟದ ಬಿಳಿಜೋಳ (ಹೈಬ್ರಿಡ್) ಮತ್ತು ಬಿಳಿಜೋಳ (ಮಾಲ್ದಂಡಿ) ಆಹಾರ ಧಾನ್ಯವನ್ನು ರೈತರಿಂದ ನೇರವಾಗಿ ಖರೀದಿಸಲು, ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು. ಪ್ರತಿ ಕ್ವಿಂಟಲ್‌ಗೆ ಬಿಳಿಜೋಳ(ಹೈಬ್ರೀಡ್) 3,371 ರೂ. ಹಾಗೂ ಬಿಳಿಜೋಳ(ಮಾಲ್ದಂಡಿ) 3,421 ರೂ. ರಂತೆ ಖರೀದಿಸಲಾಗುವುದು.
ಈಗಾಗಲೇ ಮುಂಗಾರು ಋತುವಿನಲ್ಲಿ ಬೆಳೆದಿರುವ ಆಹಾರ ಧಾನ್ಯವನ್ನು ಆಯಾ ನೋಂದಣಿ ಖರೀದಿ ಕೇಂದ್ರಗಳಲ್ಲೇ ಧಾನ್ಯಗಳನ್ನು ಖರೀದಿಸಲಾಗುವುದು. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.