ಹೊಸಪೇಟೆ | ಅಂತರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ ನಿರ್ಮೂಲನಾ ದಿನಾಚರಣೆ

Update: 2024-11-25 09:31 GMT

ಹೊಸಪೇಟೆ : ವಿಜಯನಗರ ತಾಲೂಕು ಕಾನೂನು ಸೇವಾ, ಹೊಸಪೇಟೆ ವಕೀಲರ ಸಂಘ, ಹೊಸಪೇಟೆ ಕಂದಾಯ ಇಲಾಖೆ, ಅರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯನಗರ ಇವರ ಸಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ಹೇಮಲತಾ .ಬಿ.ಹುಲ್ಲೂರ ಅವರು, ʼದೌರ್ಜನಕ್ಕೆ ಒಳಗಾಗಿರುವ ಮಹಿಳೆಯರಿಗೋಸ್ಕರ ಕಾನೂನಿನಲ್ಲಿ ಸೆಕ್ಷನ್‌ಗಳನ್ನು ಜಾರಿ ಮಾಡಲಾಗಿದೆ. ನೊಂದ ಮಹಿಳೆಯರು ಕಾನೂನು ಮೊರೆಹೋಗಿ ತಮ್ಮ ಕಷ್ಟವನ್ನು ನಿವಾರಿಸಿಕೊಳ್ಳಬೇಕು. ನೊಂದ ಮಹಿಳೆಯರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಕಾನೂನು ಯಾವತ್ತಿಗೂ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರ ಜೊತೆಯಲ್ಲಿ ಇರುತ್ತದೆʼ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನ್ಯಾ.ವಿವೇಕಾನಂದ ಪಿ.ಕೆ, ನ್ಯಾ.ಪ್ರಶಾಂತ್ ನಾಗಲಾಪುರ್, ನ್ಯಾ.ಚೈತ್ರ ಜೆ, ವಿಜಯನಗರ ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ವಿಜಯನಗರ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ, ಡಾ.ಸಿಂಧುಸಾ, ಸಿಂಧು ಅಂಗಡಿ, ಸುಭದ್ರಾದೇವಿ, ಹೊಸಪೇಟೆ ಗ್ರಾಮೀಣ ಠಾಣಾ ಪಿಎಸ್‌ಐ ನಾಗರತ್ನ, ಮರಿಯಮ್ಮನಹಳ್ಳಿ ಠಾಣೆ ಪಿಎಸ್‌ಐ ಬೀಬಿ ಮರಿಯಮ್, ಸ್ಮಿತಾ ಬರಡೆ ಉಪಸ್ಥಿತರಿದ್ದರು.

Delete Edit

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News