ಸುರಪುರ | ದೆಹಲಿ ರೈತರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ
ಸುರಪುರ : ದೆಹಲಿಯಲ್ಲಿ ರೈತರ ಬೇಡಿಕೆಗಳಿಗಾಗಿ ಜಗಜೀತ್ಸಿಂಗ್ ದಲಾವಾಲ ಅವರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ತಾಲ್ಲೂಕಿನ ರುಕ್ಮಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸುರಪುರ ತಾಲ್ಲೂಕು ಘಟಕ ದಿಂದ ಬೆಂಬಲಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಶಿವಶರಣಪ್ಪ ಸಾಹುಕಾರ ಹೈಯಾಳ ಮಾತನಾಡಿ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಎನ್ಡಿಎ ಸರಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಇದರಿಂದಾಗಿ ರೈತರು ಕೃಷಿಯಿಂದ ಹಿಂದೆ ಸರಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ರೈತರು ಬೆಳೆದ ಬೆಳೆಗೆ ರೈತರೆ ಬೆಲೆ ನಿಗದಿಪಡಿಸುವಂತಾಗಬೇಕು, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಜೊತೆಗೆ ಎಲ್ಲಾ ಬೆಳೆಗೂ ಬೆಂಬಲ ಬೆಲೆ ನೀಡಬೇಕು, ಸರಕಾರ ದಿಂದ ಎಲ್ಲಾ ಬೆಳೆಗಳ ಖರೀದಿಸುವಂತಾಗಬೇಕು ಆದರೆ ರೈತರು ಯಾವುದೇ ಬೇಡಿಕೆ ಸಲ್ಲಿಸಿದರು.
ಸರಕಾರ ಈಡೇರಿಸದೆ ಇರುವುದರಿಂದ ಬೇಸತ್ತು ದೆಹಲಿಯಲ್ಲಿ ರೈತ ನಾಯಕ ಜಗಜೀತ್ಸಿಂಗ್ ದಲಾವಾಲ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರಕಾರ ಕೂಡಲೇ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಇಂದು ನಾವೆಲ್ಲರೂ ದೆಹಲಿ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿ ಬೆಂಬಲ ವ್ಯಕ್ತಪಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಒಕ್ಕೂಟದಿಂದಲೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಮರಿಲಿಂಗಪ್ಪ, ಉಪಾಧ್ಯಕ್ಷ ಹುಲಗಪ್ಪ ಕವಡಿಮಟ್ಟಿ ಅಡ್ಡೊಡಗಿ, ದೇವೆಂದ್ರಪ್ಪ ಬನಗೊಂಡಿ, ರಾಜೇಸ್ರೆಡ್ಡಿ, ತಿರುಪತಿ ಅಂಬಿಗೇರ, ಚಂದ್ರಪ್ಪ ಠಾಣಗುಂದಿ, ತಿರುಪತಿ ಠಾಣಗುಂದಿ, ಬಸವರಾಜ ಸಾಲೆಗಾರ್, ಬಲಭೀಮ್ ಠಾಣಗುಂದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.