ಯಾದಗಿರಿ | ಪರಿಷತ್ ಅಧ್ಯಕ್ಷ ಸದಾಶಿವರೆಡ್ಡಿ ಮೇಲಿನ ಹಲ್ಲೆಗೆ ವಕೀಲರ ಸಂಘ ಖಂಡನೆ

ಸುರಪುರ : ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಸದಾಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ನಗರದ ತಹಶೀಲ್ದಾರ್ ಕಚೇರಿ ಮುಂದೆ ತಾಲೂಕು ವಕೀಲರ ಸಂಘದಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ಘಟನೆಯ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕರು, ಸದಾಶಿವರೆಡ್ಡಿ ಅವರು ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಈಗ ಭಾರತೀಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮೇಲೆ ಕಳೆದ 16ನೇ ತಾರಿಕು ತಮ್ಮ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಭೀಕರ ಹಲ್ಲೆ ನಡೆಸಲಾಗಿದೆ.
ಈ ಘಟನೆಯನ್ನು ನಮ್ಮ ವಕೀಲರ ಸಂಘ ಇಂದು ಕೈಗೆ ಕೆಂಪು ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ನಂತರ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮಾನಂದ ಕವಲಿ,ಉಪಾಧ್ಯಕ್ಷ ಹೆಚ್.ವಾಯ್ ಕಟ್ಟಿಮನಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ.ಮಂಗಿಹಾಳ, ನಂದಕುಮಾರ ಕನ್ನೆಳ್ಳಿ, ಸಂತೋಷ ಗಾರಂಪಳ್ಳಿ, ಹಿರಿಯ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಬಿ.ಹೆಚ್.ಕಿಲೆದಾರ, ಯಂಕಾರೆಡ್ಡಿ ಹವಲ್ದಾರ್,ಎಸ್. ಮನಿಸರಾಜ, ವಿ.ಸಿ.ಪಾಟೀಲ್, ಸಂಗಣ್ಣ ಬಾಕಲಿ, ಗೋಪಾಲ ತಳವಾರ, ಸಂಗಮೇಶ ಪಾಟೀಲ್, ಚನ್ನಪ್ಪ ಹೂಗಾರ, ನಾಗರೆಡ್ಡಿ, ಎಲ್.ಹೆಚ್.ಸೇಡಂ, ಎಮ್.ಎಸ್.ಹಿರೇಮಠ, ಮನೋಹರ ಕುಂಟೋಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.