ಯಾದಗಿರಿ: ಸಮಯಕ್ಕೆ ಬಾರದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2024-12-03 06:35 GMT

ಯಾದಗಿರಿ: ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆಬರುವುದಿಲ್ಲ, ನಮಗೆ ಸರಿಯಾಗಿ ಪಾಠ ಹೇಳುವುದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಶಾಲೆಯ ಆರಂಭದ ವೇಳೆಗೆ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.

ವಡಿಗೇರಾ ತಾಲ್ಲೂಕಿನ ಸಮೀಪದ ಕೊಂಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು,  ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದುವರೆಗೂ ಮುಗಿಸ­ಬೇಕಾದ ಪಾಠ­ಗಳನ್ನು ಮುಗಿಸಿಲ್ಲ. ಶಿಕ್ಷಕರು ತಮ್ಮ ವಿಷಯಗಳನ್ನು ಸರಿಯಾಗಿ ಬೋಧಿಸು­ತ್ತಿಲ್ಲ.  ಹೀಗಾದರೆ ನಾವು ಹೇಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿ ಬೇಜವಾಬ್ದಾರಿ ತೋರುತ್ತಿರುವ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಒತ್ತಾಯಿಸಿದರು.

ಶಾಲೆಯಲ್ಲಿ 258 ವಿದ್ಯಾರ್ಥಿಗಳು ಓದುತ್ತಿದ್ದು, ಕೇವಲ ಒಬ್ಬರು ಖಾಯಂ ಶಿಕ್ಷಕರು ಹಾಗೂ ನಾಲ್ವರು ಅತಿಥಿ ಶಿಕ್ಷಕರ ಮೂಲಕ ಈ ಶಾಲೆ ನಡೆಯುತ್ತಿದೆ. ಹೀಗಾಗಿ ಗ್ರಾಮೀಣ ಮಕ್ಕಳಾದ ನಾವು ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ ಎಂದು ಅಳಲನ್ನು ತೋಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News