ಯಾದಗಿರಿ | ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಕ್ರಮಕ್ಕೆ ಮನವಿ

ಸುರಪುರ : ಪೈಗಂಬರರ ವಿರುದ್ಧ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ಒಕ್ಕೂಟದಿಂದ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರವಾದಿ ಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗಿದ್ದು, ಅಲ್ಲದೆ ಸಮಾಜದಲ್ಲಿ ಕೋಮುಗಲಭೆ ಹಬ್ಬಿಸಲು ಶಾಸಕರು ಈ ರೀತಿಯ ಹೇಳಿಕೆ ನೀಡಿದ್ದು, ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಡೀ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಗಫೂರ ನಗನೂರಿ, ಖಾಜಾ ಖಲೀಲ ಅಹ್ಮದ್ ಅರಕೇರಿ, ಖಾಲಿದ್ ಅಹ್ಮದ್ ತಾಳಿಕೋಟೆ, ಅಹ್ಮದ್ ಪಠಾಣ್, ಅಬ್ದುಲ್ ಮಜೀದ್, ಶೇಖ್ ಮಹಿಬೂಬ್ ಒಂಟಿ, ಶೇಖ್ ಲಿಯಾಖತ್ ಹುಸೇನ್ ಉಸ್ತಾದ್, ಮುಹಮ್ಮದ್ ಇಸ್ತಿಯಾಕ್ ಹುಸೇನ ಸವಾರ, ಅಬ್ದುಲ್ ಅಲೀಂ ಗೋಗಿ, ಶಕೀಲ್ ಅಹ್ಮದ್ ಖುರೇಶಿ, ಅಬೀದ್ ಹುಸೇನ್ ಪಗಡಿ, ಮುಹಮ್ಮದ್ ರಿಯಾಜ್ ಇಲಕಲ್, ಮುಹಮ್ಮದ್ ಖಮರುದ್ದಿನ್, ನಾಸಿರ್ ಹುಸೇನ ಕುಂಡಾಲೆ, ಸೈಯದ್ ಇದ್ರಿಸ್ ದಖನಿ, ಸೈಯ್ಯದ್ ಬಕ್ತಿಯಾರ್ ಅಹ್ಮದ್, ಮುಹಮ್ಮದ್ ಜಾಫರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.