ಯಾದಗಿರಿ | ವಿಶೇಷ ಚೇತನರ ಸೇವೆ ಮಾಡುವ ಕಾರ್ಯ ಶ್ಲಾಘನೀಯ : ತಹಶೀಲ್ದಾರ್ ಹುಸೇನ್ ಸಾಬ್

Update: 2024-11-21 12:47 GMT

ಯಾದಗಿರಿ : ಎಪಿಡಿ ಸಂಸ್ಥೆಯಿಂದ ವಿಶೇಷ ಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಣಾ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಹುಸೇನ್ ಸಾಬ್ ಅಪ್ಪಾಸಾಬ ಸರ್ಕಾವಸ್ ಅವರು ಮಾತನಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ಎಪಿಡಿ ಸಂಸ್ಥೆಯು ವಿಶೇಷ ಚೇತನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೀಗಾಗಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಮಾಶಾಸನ, ಯುಡಿ ಐಡಿ ಕಾರ್ಡ್ ಬಗ್ಗೆ ವಿಚಾರಿಸಿದರು. ಪ್ರತಿ ಇಲಾಖೆಯಲ್ಲಿ ಶೇ.5 ಅನುದಾನವನ್ನು ಮಿಸಲಿಡಲಾಗಿರುತ್ತದೆ ಅದನ್ನು ಸದ್ಭಳಕೆ ಮಾಡುವಂತೆ ಇಲಾಖೆಯ ಮುಖ್ಯಸ್ಥರಿಗೆ ತಿಳಿಸುತ್ತೇನೆ ಎಂದು ಹೇಳಿದರು.

ಸುರಪುರ ತಾಲೂಕಿನ ಸಂಯೋಜಕರಾದ ಗಿರೀಶ್ ಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಪಿಡಿ ಸಂಸ್ಥೆಯು 65 ವರ್ಷಗಳಿಂದ ವಿಕಲ ಚೇತನರೊಂದಿಗೆ ಕಾರ್ಯವನ್ನು ನಿರ್ವಹಿಸುತ್ತಿದೆ. ಸಾಧನಾ ಸಲಕರಣೆಗಳನ್ನು ಬಳಕೆ ಮಾಡಿಕೊಂಡು, ವಿಕಲಚೇತನರು ಕೂಡ ಸಮಾಜದಲ್ಲಿ ಸಾಮ್ಯಾನರಂತೆ ಜೀವನ ಮಾಡಬೇಕು ಎಂದು ಹೇಳಿದರು.

ಒಟ್ಟು 23 ವಿಕಲಚೇನರಿಗೆ ರೋಲೇಟರ, ಕ್ಯಾಲಿಪರ್, ಸ್ಟಿಕ್, ವಾಕರ್, ಸ್ಯಾಂಡಲ್ , ಹ್ಯಾಂಡ್ ಸ್ಪ್ಲಿಂಟ್, ಸ್ಟ್ಯಾಂಡಿಂಗ್ ಪ್ರೇಮ್ ಮತ್ತು ಕಾರ್ನರ್ ಚೆಯರ್ ಮುಂತಾದ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಫೀಜಿಯೋ ಥೆರಪಿಸ್ಟ್ ಮಂಜುನಾಥ್, ಸಮುದಾಯ ಸಂಯೋಜಕರಾದ ಮಾಂತೇಶ ಕುಂಬಾರ, ಲಕ್ಷ್ಮೀ ಹಾಲರ್ , ನಾಗರಾಜ್ ಬುರ್ಲಿ, ಸಹವರ್ತಿಗಳಾದ ಶಿವರಾಜ, ನಿತೇಶ, ಪದ್ಮಾವತಿ ಮತ್ತು ಗಂಗಿಮಾಳಮ್ಮ ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News