ಯಾದಗಿರಿ | ʼಗೃಹ ಲಕ್ಷ್ಮೀʼ ಹಣದಿಂದ ಕಿರಾಣಿ ಅಂಗಡಿ ತೆರೆದು ಬದುಕು ಕಟ್ಟಿಕೊಂಡ ಮಹಿಳೆ
Update: 2025-04-19 13:53 IST

ಯಾದಗಿರಿ : ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಕಿರಾಣಿ ಅಂಗಡಿ ತೆರೆದು ಬದುಕುಕಟ್ಟಿಕೊಂಡಿದ್ದಾರೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಕಿರಾಣಿ ಅಂಗಡಿ ತೆರದ ಮುಮ್ಮತಾಜ್ ಬೇಗಂ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ಬಿಸಿಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ, ಸರಕಾರದ ಗೃಹ ಲಕ್ಷ್ಮಿ ಯೋಜನೆ ಹಣ ಖರ್ಚು ಮಾಡದೇ ಪ್ರತಿ ತಿಂಗಳು ಖಾತೆಗೆ ಪಾವತಿಯಾಗುತ್ತಿದ್ದ 2 ಸಾವಿರ ರೂ. ಗೃಹ ಲಕ್ಷ್ಮಿ ಹಣ ಕೂಡಿಟ್ಟು, ಇಲ್ಲಿವರಗೆ ಒಟ್ಟು 42 ಸಾವಿರ ರೂ. ಹಣದಲ್ಲಿ ಮನೆ ಜಾಗದಲ್ಲಿಯೇ ಕಿರಾಣಿ ಅಂಗಡಿ ತೆರದ ಮುಮ್ಮತಾಜ್ ಬೇಗಂ ಸ್ವಾವಲಂಬಿ ಬದುಕುಕಟ್ಟಿಕೊಂಡಿದ್ದಾರೆ.
ಮುಮ್ಮತಾಜ್ ಬೇಗಂ ಅವರು, ಪ್ರತಿ ತಿಂಗಳು ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ 2 ಸಾವಿರ ರೂ. ನೀಡುತ್ತಿರುವ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಸಲ್ಲಿಸಿದ್ದಾರೆ.