ಯಾದಗಿರಿ | ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ

ಸುರಪುರ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಜನರ ಹತ್ಯೆ ಮಾಡಿರುವ ಉಗ್ರರ ದಾಳಿಯನ್ನು ಖಂಡಿಸಿ, ಸುರಪುರ ನಗರದಲ್ಲಿ ಹಿಂದೂ ಸಮಾಜ ಬಾಂಧವರು ಹಾಗೂ ಯುವ ಘರ್ಜನೆ ಪಡೆ ಸುರಪುರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಮೇಣದಬತ್ತಿ ಹಿಡಿದು ಮಹಾತ್ಮ ಗಾಂಧಿ ವೃತ್ತದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಮಹಾತ್ಮ ಗಾಂಧಿ ವೃತದಲ್ಲಿ ಜಮಾವಣೆಗೊಂಡ ನೂರಾರು ಜನ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಹತರಾದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಡಾ.ಉಪೇಂದ್ರ ನಾಯಕ್ ಸುಬೇದಾರ್, ಕೇದಾರನಾಥ ಶಾಸ್ತ್ರಿ, ಸಚಿನ್ ಕುಮಾರ ನಾಯಕ, ಮಲ್ಲು ವಿಷ್ಣುಸೇನಾ, ರಾಮ್ ಸೇನಾ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಶರಣು ನಾಯಕ ಸೇರಿದಂತೆ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ನಾಯಕ, ಪ್ರಸನ್ನ ಹೆಡಗಿನಾಳ, ಮೌನೇಶ ನಾಲವಾರ, ಯಲ್ಲಪ್ಪ ನಾಯಕ,ಭೀಮಣ್ಣ ಬೇವಿನಾಳ, ವೆಂಕಟೇಶ ಕುಂಬಾರಪೇಟ, ಅಪ್ಪಣ್ಣ ಕುಲಕರ್ಣಿ, ಕಲ್ಯಾಣರಾವ್ ಕುಲಕರ್ಣಿ, ಚಂದ್ರು ಪ್ರಧಾನಿ, ಮೌನೇಶ ದೇವಿಕೇರಾ, ಮಹೇಶ ಜಾಗಿರದಾರ, ಗುರುನಾಥರಡ್ಡಿ ಶೀಲವಂತ, ಅರವಿಂದ ಬುಕ್ ಸ್ಟಾಲ್, ಮನೋಜ್ ನಾಯಕ ಬಿಚ್ಙದಕೇರಾ, ವೆಂಕಟೇಶ ಡೊಣ್ಣಿಗೇರಾ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.