ಯಾದಗಿರಿ | ಗ್ಯಾಸ್ ಸಿಲಿಂಡರ್ ಸ್ಫೋಟ: ಗುಡಿಸಲು ಬೆಂಕಿಗಾಹುತಿ
Update: 2025-04-26 14:54 IST
ಯಾದಗಿರಿ: ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಗುಡಿಸಲು ಬೆಂಕಿಗಾಹುತಿಯಾದ ಘಟನೆ ಯಾದಗಿರಿ ಜಿಲ್ಲೆಯ ದುರ್ಗಾನಗರದಲ್ಲಿ ನಡೆದಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ಮನೆಯಲ್ಲಿದ್ದ ದವಸ, ಧಾನ್ಯ, ನಗದು ಸೇರಿ ಇತರೆ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ದುರ್ಗಾ ನಗರದ ನಿವಾಸಿ ಮಲ್ಲಯ್ಯ ಪೂಜಾರಿ ಅವರು ಹೊಸ ಮನೆ ಕಟ್ಟುತ್ತಿದ್ದರಿಂದ ಗುಡಿಸಲಿನಲ್ಲಿ ಮಲ್ಲಯ್ಯನ ಕುಟುಂಬ ವಾಸವಿದ್ದರು ಎಂದು ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.