ಯಾದಗಿರಿ | ಜಾಲಿಕಂಟಿ ತೆರವು ಮಾಡಿ ಮುಂದಾಗುವ ಅನಾಹುತ ತಪ್ಪಿಸಲು ಉಮೇಶ್‌ ಮುದ್ನಾಳ್‌ ಆಗ್ರಹ

Update: 2025-04-03 17:51 IST
ಯಾದಗಿರಿ | ಜಾಲಿಕಂಟಿ ತೆರವು ಮಾಡಿ ಮುಂದಾಗುವ ಅನಾಹುತ ತಪ್ಪಿಸಲು ಉಮೇಶ್‌ ಮುದ್ನಾಳ್‌ ಆಗ್ರಹ
  • whatsapp icon

ಶಹಾಪುರ : ತಾಲೂಕಿನ ವ್ಯಾಪ್ತಿಗೆ ಬರುವ ಕರಕಳ್ಳಿ ಗ್ರಾಮದ ಕ್ಯಾನಲ್ ಬಲ ಭಾಗದಿಂದ ಚಂದಾಪೂರ ಗ್ರಾಮಕ್ಕೆ ಹೋಗುವ ರಸ್ತೆ ಅಕ್ಕಪಕ್ಕದಲ್ಲಿ ಜಾಲಿಕಂಟಿಗಳು ಬೆಳೆದು ನಿಂತಿದ್ದು, ರೈತರ ಎತ್ತಿನ ಗಾಡಿಗೆ, ವಾಹನ ಸವಾರರಿಗೆ ಕಣ್ಣಿಗೆ ತಗುಲುವ ಸಂಭವವಿದ್ದು, ಕೂಡಲೇ ಜಾಲಿಕಂಟಿಗಳನ್ನು ಕಟಿಂಗ್ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ್‌ ಆಗ್ರಹಿಸಿದ್ದಾರೆ.

ಈ ಕುರಿತು ಸ್ಥಳಕ್ಕೆ ಬೇಟಿ ನೀಡಿ ಪತ್ರಿಕಾ ಹೇಳಿಕೆ ನೀಡಿರುವ ಅವರು, 30 ಫಿಟ್ಇ ರುವ ರಸ್ತೆ 6 ಫೀಟ್ ಗೆ ಬಂದು ನಿಂತಿದೆ. ಶಹಾಪೂರ ಮತಕ್ಷೇತ್ರ ವ್ಯಾಪ್ತಿಗೆ ಬರುವ ತಾಲೂಕಾಡಳಿತ ಕಚೇರಿಯಿಂದ ಸುಮಾರು 15 ಕಿ.ಮೀ ಅಂತರದಲ್ಲಿರುವ ಈ ರಸ್ತೆ ಅಕ್ಕಪಕ್ಕದಲ್ಲಿ ಜಂಗಲ್ ಕಟ್ಟಿಂಗ್ ಮಾಡದೆ ಇರುವುದ್ದರಿಂದ ಜಾಲಿಕಂಟಿಗಳು ರಸ್ತೆ ಮೇಲೆ ಎಡೆ ಚಾಚಿ ನಿಂತು ಸಾರ್ವಜನಿಕರು ಸರಳ ಸಂಚಾರಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ರಸ್ತೆ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಮಾಡದೆ ಇರುವುದರಿಂದ ಸಾರ್ವಜನಿಕರ ಗೋಳು ಹೇಳ ತೀರದಾಗಿದೆ ಎಂದು ದೂರಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕುಂಭಕರಣ ನಿದ್ದೆ ಮಾಡುತ್ತಿದ್ದು, ತಕ್ಷಣ ಅವರಿಗೆ ಚಾಟಿ ಏಟು ಬಿಸಿಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News