ಯಾದಗಿರಿ | ಬಿಹಾರದ ಮಹಾ ಬೋಧಿ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ ಮೇ 5 ರಂದು ಬೃಹತ್ ಪ್ರತಿಭಟನೆ

Update: 2025-04-20 21:46 IST
ಯಾದಗಿರಿ | ಬಿಹಾರದ ಮಹಾ ಬೋಧಿ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ ಮೇ 5 ರಂದು ಬೃಹತ್ ಪ್ರತಿಭಟನೆ
  • whatsapp icon

ಯಾದಗಿರಿ : ಬಿಹಾರದ ಮಹಾಬೋದಿ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲಿಸಿ,1949 ಬಿಟಿ ಆ್ಯಕ್ಟ್ ಕಾಯ್ದೆಯನ್ನು ರದ್ದು ಮಾಡಿ ಮಹಾಬೋದಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯಲ್ಲಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಮೇ. 5 ರಂದು ಬೃಹತ್ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಳಕರ್ ಹೇಳಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಬೌದ್ಧ ಬಿಕ್ಕು ಸಂಘ ಸಾನಿಧ್ಯದಲ್ಲಿ ನಡೆದ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತ ಮಂಡಳಿಯನ್ನು ಸಂಪೂರ್ಣವಾಗಿ ಬೌದ್ಧರಿಗೇ ನೀಡುವವರಿಗೆ ಪ್ರತಿಯೊಬ್ಬರು ಹೋರಾಟವನ್ನು ಕೈ ಬಿಡದೆ ಒಗ್ಗಟ್ಟಾಗಿ ಹೋರಾಡೋಣ. ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಆ ಬಣ ನಿಂದ ಈ ಬಣ ಎಂದು ಎನ್ನುವುದು ತಾರತಮ್ಯ ಬೇಡ ಎಲ್ಲರೂ ಒಗ್ಗೂಡಿಸಿ ನಾವು ತಯಾರಾಗೋಣ. ಈ ಬಿಹಾರ ಮಹಾಬೋದಿ ನಮ್ಮ ಬೌದ್ಧರ ಆಸ್ತಿ ನಾವು ಪಡೆಯಲು ಒಗ್ಗಟ್ಟು ಬಹಳ ಪ್ರಮುಖವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಬಾಬುರಾಬ್ ಬುತಾಳಿ, ಡಾ. ಭಗವಂತ ಅನವಾರ, ಪ್ರಭು ಬುಕ್ಕಲ್, ಬೌದ್ಧಚಾರಿ ನಿಂಗಪ್ಪ ಕೋಲ್ಲೂರಕರ್, ರಾಹುಲ್ ಹುಲಿಮನಿ, ಕಾಶಿನಾಥ ನಾಟೇಕಾರ್, ಸುರೇಶ್ ಬೊಮ್ಮನ್, ಪರಶುರಾಮ ಒಡೆಯರ್, ವೆಂಕಟೇಶ ಹೊಸ್ಮನಿ, ವೆಂಕಟೇಶ ಕಣಿಜಿಕರ್, ಮೈಲಾರಪ್ಪ ಅಲ್ಲಿಪುರ, ರಂಗಪ್ಪ ಚಾಮನಳ್ಳಿ, ಸದ್ದಾಮ್ ಹುಸೇನ್, ಚಂದ್ರು ಕುಮಾರ್ ಛಲವಾದಿ, ಗಿರೀಶ ಕುಮಾರ್ ಚಟ್ಟೇರಕರ್, ಸೇರಿದಂತೆ ಅನೇಕ ಬೌದ್ಧ ಉಪಾಸಕರು ಇದ್ದರು.

ಬಿಹಾರದ ಮಹಾಬೋದಿ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲಿಸಿ, 1949 BT ಆ್ಯಕ್ಟ್ ಕಾಯ್ದೆಯನ್ನು ರದ್ದು ಮಾಡಿ ಮಹಾಬೋದಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರಿಗೆ ನೀಡಲು ಪ್ರತಿಭಟನೆ ಮಾಡಲು ಮತ್ತು ಮೇ 12 ರಂದು ಸಥಾಗತ ಗೌತಮ್ ಬುದ್ಧನ ಜಯಂತಿ ಆಚರಣೆ ಕುರಿತು ಪೂರ್ವ ಭಾವಿ ಸಭೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News