ಯಾದಗಿರಿ | ಬೌದ್ಧರ ಪವಿತ್ರ ಸ್ಥಳವನ್ನು ಬೌದ್ಧರಿಗೆ ಬಿಟ್ಟು ಕೊಡುವಂತೆ ಆಗ್ರಹಿಸಿ ಮೇ 5 ರಂದು ಬೃಹತ್ ಪ್ರತಿಭಟನೆ : ಕಮಲರತ್ನ ಭಂತೇಜಿ

Update: 2025-04-24 17:16 IST
Photo of Press meet
  • whatsapp icon

ಯಾದಗಿರಿ : ಬುದ್ದಗಯಾ ಮಹಾಬೋದಿ ಮಹಾವಿಹಾರದ ಬಿ.ಟಿ ಆ್ಯಕ್ಟ್ 1949 ರದ್ದು ಗೊಳಿಸಿ ಬೌದ್ಧರ ಪವಿತ್ರಸ್ಥಳವನ್ನು ಸಂಪೂರ್ಣವಾಗಿ ಬೌದ್ಧರಿಗೆ ಬಿಡುವಂತೆ ಆಗ್ರಹಿಸಿ ಮೇ 5 ರಂದು ಯಾದಗಿರಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಮಲರತ್ನ ಪೂಜ್ಯ ಭಂತಜೀ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಕಲಂ 13, 25, ಮತ್ತು 29 ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ ಆ್ಯಕ್ಟ್ 1949 ಅನ್ನು ರದ್ದು ಪಡಿಸಬೇಕು. ಬುದ್ಧಗಯಾ ಮಹಾಭೋದಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನಿಡಬೇಕೆಂದು ಒತ್ತಾಯಿಸಿದರು.

ಬಿಹಾರದಲ್ಲಿ ಅಪಾರ ಬೌದ್ಧ ಅನುಯಾಯಿಗಳು ಶಾಂತಿಯುತವಾಗಿ ಇಂದಿಗೂ 75 ದಿನಗಳಿಂದ ನಿರಂತರವಾಗಿ ಆಮರಾಣಾಂತ ಹೋರಾಟ ಮಾಡುತ್ತಿರುವ ಪ್ರಯುಕ್ತ ಯಾದಗಿರಿ ಜಿಲ್ಲೆಯಿಂದ ನಾಡಿನ ಬಿಕ್ಕು ಹಾಗೂ ಸಂಘದ ನೇತೃತ್ವ ಮತ್ತು ಸಮಸ್ತ ದಲಿತ ಸಂಘಟನೆಗಳು, ಬೌದ್ಧ ಸಂಘ ಸಂಸ್ಥೆಗಳು, ಬುದ್ಧ ವಿಹಾರದ ಸಮಿತಿಗಳು ಹಾಗೂ ಯಾದಗಿರಿ ಜಿಲ್ಲೆಯ ಬೌದ್ಧ ಉಪಾಸಕಾ ಮತ್ತು ಉಪಾಸಿಕಾ ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮೇ.5 ರಂದು ಸೋಮುವಾರ ಬೆಳಿಗ್ಗೆ 10 ಗಂಟೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್‌ ಕಚೇರಿ, ಶಾಸ್ತ್ರಿ ಸರ್ಕಲ್ ಮಾರ್ಗವಾಗಿ ಸುಭಾಷ್ ಸರ್ಕಲ್ ನಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿ ಮುಖಾಂತರ ರಾಷ್ಟಪತಿಗಳಿಗೆ ಮತ್ತು ಬಿಹಾರ ಸರ್ಕಾರಕ್ಕೆ ಬೌದ್ಧರ ಪುಣ್ಯಸ್ಥಳವನ್ನು ಬೌದ್ಧರಿಗೆ ಬಿಟ್ಟು ಕೊಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಈ ಒಂದು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲ ತಾಲೂಕುಗಳಿಂದ ಮತ್ತು ಸುತ್ತಮುತ್ತಲಿನ ಬೇರೆ ಜಿಲ್ಲೆಯ ಎಲ್ಲ ಬೌದ್ಧ ಅನುಯಾಯಿಗಳು, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾಂತಿಪೂರ್ವಕವಾಗಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮರೆಪ್ಪ ಬುಕ್ಕಲ್, ನೀಲಕಂಠ ಬಡಿಗೇರ, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಿಗೇರಿ, ಡಾ. ಭಗವಂತ ಅನವಾರ, ಮಾಳಪ್ಪ ಕಿರದಳ್ಳಿ, ಬಾಬುರಾವ್ ಬುತಾಳಿ, ನಾಗಣ್ಣ ಬಡೀಗೇರ, ಶರಣು ಎಸ್ ನಾಟೇಕಾರ್, ನಿಲ್ಲಮ್ಮ ಬಿ.ಮಲ್ಲೆ, ರಾಹುಲ್ ಹುಲಿಮನಿ, ಕಾಶಿನಾಥ ನಾಟೇಕಾರ್, ಸುರೇಶ್ ಬೊಮ್ಮನ, ಚಂದ್ರು ಕುಮಾರ್ ಛಲಾವಾದಿ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News