ಯಾದಗಿರಿ | ನೆಲ, ಜಲ ಹೋರಾಟದ ಜೊತೆಗೆ ಸಂಸ್ಕೃತಿ, ಸಾಹಿತ್ಯ ಪ್ರತಿಭಾ ಪುರಸ್ಕಾರಗಳು ನೀಡುವ ಕರವೇ ಕಾರ್ಯ ಶ್ಲಾಘನೀಯ : ಸಿದ್ದಲಿಂಗಶ್ರೀ

ಯಾದಗಿರಿ : ಜೀವನದಲ್ಲಿ ಯಶಸ್ಸು ಕಾಣಲು ಛಲ, ಗುರಿ, ಸಾಧಿಸುವ ಹಂಬಲ ಇರಬೇಕು ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್ಪಿ ಭರತಕುಮಾರ್ ತಳವಾರ್ ಅಭಿಪ್ರಾಯಪಟ್ಟರು.
ನಗರದ ಕಸಾಪ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿರುವ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ನೇರಡಗಂ ಮ.ನಿ.ಪ್ರ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯನ್ನೇ ತಪಸ್ಸಾಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಕೇವಲ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಟ ಮಾಡುವುದಷ್ಟೇ ಅಲ್ಲ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಸಾಮಾಜಿಕವಾಗಿ ಕಾರ್ಯಕ್ರಮಗಳು ಆಯೋಜಿಸುತ್ತಾ ಬರುತ್ತಿದ್ದು, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವ ಪ್ರತಿಭಾ ಪುರಸ್ಕಾರ ಆಯೋಜಿಸುವ ಮೂಲಕ ಕನ್ನಡ ತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಅತಿಥಿಗಳು ಸೂಚಿಸಿದ ಕೆಲ ಅಗತ್ಯ ಕ್ರಮಗಳನ್ನು ಆರಂಭಿಕ ಹಂತದಲ್ಲಿ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಕನ್ನಡಾಂಬೆ ಭಾವಚಿತ್ರ ಪೂಜೆಯನ್ನು ನೆರವೇರಿಸಿದ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ಅನಪೂರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಕುಳಗೇರಿ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಎಸ್. ಮಾಲಿಪಾಟೀಲ್, ಭಾರೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಚಂದ್ರಕಾಂತ ಪೂಜಾರಿ ಮಾತನಾಡಿದರು. ಲೀಡ್ ಬ್ಯಾಂಕ್‌ನ ರಾಜ್ ಕುಮಾರ ವೇದಿಕೆ ಮೇಲಿದ್ದರು.
ಇದೇ ವೇಳೆ ಪಿಯುಸಿಯಲ್ಲಿ ಗರಿಷ್ಟ ಅಂಕಪಡೆದ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಸ್ವಾಗತಿಸಿ, ನಿರೂಪಿಸಿದರು.
ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಯಮುನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್,ಪ್ರಕಾಶ ಪಾಟೀಲ್ ಜೈಗ್ರಾಮ್, ಸಾಹೇಬಗೌಡ ನಾಯಕ, ಶರಣಪ್ಪ ದಳಪತಿ, ಶರಣು ಸಾಹುಕಾರ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಸಿದ್ದಪ್ಪ ಕೊಯಿಲೂರ, ಭೀಮರಾಯ ಕೋಳಿ, ಸಿದ್ದಪ್ಪ ಕ್ಯಾಸಪನಳ್ಳಿ, ಸುರೇಶ ಬೆಲಗುಂದಿ, ಮಲ್ಲಿಕಾರ್ಜುನ ಕನ್ನಡಿ, ಕಾಶಿನಾಥ ನಾನೇಕ, ಲಿಂಗಾರಡ್ಡಿ, ನಾಗು ತಾಂಡೂರಕರ್, ವಿಜಯ ರಾಠೋಡ,ಸೈದಪ್ಪ ಗೌಡಗೇರಾ, ಸುಭಾಸ ಯರಗೋಳ, ಮಂಜು ನಾಯ್ಕೋಡಿ, ಶರಣು ಬಂದಳ್ಳಿ, ಯಲ್ಲು ಚಾಮನಳ್ಳಿ, ನಾಗು ಕುಂಬಾರ ಇನ್ನಿತರರು ಇದ್ದರು.