ಯಾದಗಿರಿ | ಬರದ ನಾಡಲ್ಲಿ ಬಂಗಾರದಂಥ ಕಲ್ಲಂಗಡಿ ಬೆಳೆ ತೆಗೆದ ರೈತರಿಗೆ ಜಿಲ್ಲಾಡಳಿತ ಸನ್ಮಾನಿಸಲಿ : ಉಮೇಶ್ ಮುದ್ನಾಳ್

ಯಾದಗಿರಿ : ಬರದ ನಾಡು ಯಾದಗಿರಿ ತಾಲೂಕಿನ ಅರಕೇರಿ (ಬಿ) ಗ್ರಾಮದ ರೈತ ಜಗದೀಶ ರಂತಹ ಅನೇಕ ರೈತರು ಸುಮಾರು ಐದು ಆರು ವರ್ಷಗಳಿಂದ ಬರಡು ಭೂಮಿಯಲ್ಲಿ ಫಲವತ್ತಾದ ಕಲ್ಲಂಗಡಿ ಬೆಳೆ ತೆಗೆದಿದ್ದಾರೆ. ಬರಡು ಭೂಮಿಯಲ್ಲಿ ನೀರಿನ ಕೊರತೆ ಎದುರಾಗದಂತೆ ನೋಡಿಕೊಂಡು ಉತ್ತಮ ಫಸಲು ತೆಗೆದಿದ್ದಾರೆ. ಪ್ರತಿ ಎಕರೆಗೆ 150 ರಿಂದ 200 ಕ್ವಿಂಟಾಲ್ ನಷ್ಟು ಕಲ್ಲಂಗಡಿ ಫಸಲು ತೆಗೆದು ಸಾಧನೆಗೈದಿದ್ದಾರೆ. ಜಿಲ್ಲಾಡಳಿತ ಇಂಥಹ ರೈತರನ್ನ ಗುರುತಿಸಿ ಅವರನ್ನ ಸನ್ಮಾನಿಸಿ ಸತ್ಕರಿಸಬೇಕು ಎಂದು ಅಂತ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.
ಕೆಲವು ರೈತರು ಕಲ್ಲಂಗಡಿ ಬೆಳೆದು ಬಿಸಿಲಿನ ಹೊಡೆತಕ್ಕೆ ಕೈ ಸುಟ್ಟುಕೊಂಡಿದ್ದಾರೆ. ನೀರಿನ ಮೂಲಗಳು ಬತ್ತಿ ಹೋಗಿದ್ದರಿಂದ ಸಾಕಷ್ಟು ರೈತರು ಅಪಾರ ಪ್ರಮಾಣದ ಹಾನಿಗೊಳಗಾಗಿದ್ದಾರೆ. ಆದರೆ ಅರಕೇರಿ (ಬಿ) ಗ್ರಾಮದ ರೈತರು ನೀರಿನ ಕೊರತೆ ಎದುರಾಗದ ಹಾಗೇ ಕಾಪಾಡಿಕೊಂಡು ಅಧಿಕ ಲಾಭಗಳಿಸಿದ್ದಾರೆ. ಹಾನಿಗೊಳಗಾದ ಜಮೀನಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ಉಮೇಶ್ ಮುದ್ನಾಳ್ ಆಗ್ರಹಿಸಿದರು.
ಖುದ್ದು ಕಲ್ಲಂಗಡಿ ಬೆಳೆದ ರೈತರ ಜಮೀನಿಗೆ ಭೇಟಿ ನೀಡಿದ ಉಮೇಶ್ ಮುದ್ನಾಳ್, ಬರಡು ಭೂಮಿಯಲ್ಲಿ ಉತ್ತಮ ಫಸಲು ತೆಗೆದ ರೈತರನ್ನ ಜಿಲ್ಲಾಡಳಿತ ಗುರುತಿಸಿ ಪ್ರೋತ್ಸಾಹಿಸಲಿ. ಜಿಲ್ಲಾಡಳಿತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರನ್ನ ಗುರುತಿಸಿದರೆ ಉತ್ಸಾಹದಿಂದ ಸಾಕಷ್ಟು ಉತ್ತಮ ಫಸಲು ತೆಗೆಯುವಲ್ಲಿ ರೈತರು ಮುಂದಾಗುತ್ತಾರೆ ಎಂದರು.