ಯಾದಗಿರಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ದಲಿತ ಸೇನೆಯಿಂದ ಪ್ರತಿಭಟನೆ

Update: 2025-04-17 21:57 IST
ಯಾದಗಿರಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ದಲಿತ ಸೇನೆಯಿಂದ ಪ್ರತಿಭಟನೆ
  • whatsapp icon

ಸುರಪುರ : ದೇವಾಪುರ ಗ್ರಾಮದಲ್ಲಿನ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಜಾಗ ಖಾಸಗಿಯವರು ಒತ್ತುವರಿ ಮಾಡಿದ್ದು, ಒತ್ತುವರಿ ತಡೆಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.

ತಾಲೂಕಿನ ದೇವಾಪುರ ಗ್ರಾಮದಲ್ಲಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ದಲಿತ ಸೇನೆ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ಸುಮಾರು 18 ವರ್ಷಗಳ ಹಿಂದೆ ಈ ಶಾಲೆ ನಿರ್ಮಾಣಕ್ಕೆ ಸೂಗಪ್ಪ ಗುಳಗಿ ಎನ್ನುವವರು ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ. ಆದರೆ ಈಗ ಅದೇ ಜಾಗವನ್ನು ಖಾಸಗಿಯವರು ಶಾಲೆ ಸುತ್ತಮುತ್ತಲ ಜಾಗ ಕಬಳಿಸುತ್ತಿದ್ದಾರೆ. ಒತ್ತುವರಿ ತಡೆಯುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸ್ಥಳಕ್ಕೆ ಉಪ ತಹಶೀಲ್ದಾರ್ ಮಲ್ಲಯ್ಯ ದಂಡು ಹಾಗೂ ಬಿಸಿಯೂಟದ ತಾಲೂಕು ಸಹಾಯಕ ನಿರ್ದೇಶಕ ಪಂಡೀತ್ ನಿಂಬೂರ ಆಗಮಿಸಿ ಮೂರು ತಿಂಗಳುಗಳ ಕಾಲಾವಕಾಶ ತೆಗೆದುಕೊಂಡು ಭೂಮಿ ಒತ್ತುವರಿ ತೆರವುಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ, ತಾಲೂಕು ಅಧ್ಯಕ್ಷ ಮಹಾದೇವ ಚಲುವಾದಿ,ಜಿಲ್ಲಾ ಉಪಾಧ್ಯಕ್ಷ ಮರಿಲಿಂಗ ಗುಡಿಮನಿ ಹುಣಸಿಹೊಳೆ, ಸಂತೋಷ ಜೈನಾಪುರ, ಜೆಡಿಎಸ್ ಮುಖಂಡ ಉಸ್ತಾದ್ ವಜಾಹತ್ ಹುಸೇನ್, ಶರಣಬಸವ ಎಂ,ಲೊಕೇಶ ವಸ್ತಾರಿ,ಭೀಮರಾಯ ಎಮ್ಮೇರ, ತಿರುಪತಿ ಚಿತ್ತಾಪುರ, ಭೀಮರಾಯ ಹೆಚ್,ದುರುಗೇಶ ತಳವಾರ, ಶ್ರವಣಕುಮಾರ ಕಟ್ಟಿಮನಿ, ಎಮ್.ಡಿ.ಯಾಸಿರ್, ಶಿವರಾಜ,ಬಸವರಾಜ ಎತ್ತಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News