ಡಿ.29 ರಂದು ಯಾದಗಿರಿ ಜಿಲ್ಲಾ ಉತ್ಸವ

Update: 2024-12-28 14:03 GMT

ಯಾದಗಿರಿ: ಇಲ್ಲಿನ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕವು ಡಿ.29 ರಂದು ಸಂಜೆ 5ಕ್ಕೆ ಪಂಪ ಮಹಾಕವಿ ಮಂಟಪದಲ್ಲಿ ಸುವರ್ಣ ಕರ್ನಾಟಕ ಮಹೋತ್ಸವದ ನಿಮಿತ್ಯ ನಮ್ಮ ಯಾದಗಿರಿ ಜಿಲ್ಲಾ ಉತ್ಸವ ಹಾಗೂ ಕುವೆಂಪು ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ್ ಹಾಗೂ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮಗ್ಗಂಪುರ ಹೇಳಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಲವಾರದ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸುವರು. ಯೋಗಗುರು ವೈದ್ಯ ಚನ್ನಬಸವಣ್ಣ ನೇತೃತ್ವ ವಹಿಸುವರು, ಶಾಸಕ ಚನ್ನಾರಡ್ಡಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಡಿಸಿ ಡಾ.ಸುಶೀಲಾ, ಹಿರಿಯ ಮುಖಂಡ ಹಣಮೇಗೌಡ ಬೀರನಕಲ್ಸ್ ಹಾಗೂ ಬೆಂಗಳೂರಿನ ಡಿಎಸ್ ಮಾಕ್ಸ್ ನ ಚಂದ್ರಶೇಖರ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿಜೆಪಿ ಮುಖಂಡ ಮಹೇಶ ರಡ್ಡಿ ಮುನ್ನಾಳ್‌, ಡಿಡಿಯು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಣ್ಣ ಮೇಟಿ, ಎಸ್ ಪಿ ಪ್ರಥ್ವಿಕ್ ಶಂಕರ್ ಜ್ಯೋತಿ ಬೆಳಗಿಸುವರು. ಬಸ್ಸು ಗೌಡ ಬಿಳಾರ್, ಮಹಾರಾಜ್ ದಿಗ್ಗಿ, ಎಂ.ಹಳ್ಳಿ ಕೋಟಿ, ಅನಿಲ ಕುಮಾರ್ ಹೇಡಗಿಮದ್ರಿ ಸೇರಿದಂತೆಯೇ ಪಕ್ಷಗಳ ಮುಖಂಡರು, ಸಾಹಿತಿಗಳು, ವಿಶೇಷ ವಿವಿಧ ರಾಜಕೀಯ ಅಧಿಕಾರಿಗಳು, ಕಲಾವಿದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅವರು ಹೇಳಿದರು.

ಇದೇ ವೇಳೆ ಕ್ಷಯರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ಕಿಟ್ಟಗಳ ವಿತರಣೆ ಹಾಗೂ ಚಲನಚಿತ್ರ ನಟ, ನಟಿಯರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ರಾಜಕುಮಾರ ಸಾಹುಕಾರ, ಶಿವರಾಜ್ ಗುತ್ತೇದಾ‌ರ್, ಈಶಪ್ಪ ಕಪ್ಪನೋರ್, ಮಾರುತಿ ಮುದ್ದಾಳ್‌, ದಶರಥ ಶೆಟ್ಟಿಕರ್, ಬಸ್ಸು ಮುಂಡರಗಿ, ನವಾಜ್ ಖಾದರಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News