ಯಾದಗಿರಿ | ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ : ಡಾ.ಮಹೇಶ ಬಿರಾದಾರ

Update: 2025-04-25 17:33 IST
ಯಾದಗಿರಿ | ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ : ಡಾ.ಮಹೇಶ ಬಿರಾದಾರ
  • whatsapp icon

ಯಾದಗಿರಿ : ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಲೇರಿಯಾ ರೋಗ ಹರಡದಂತೆ ಮುಂಜಾಗೃತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಗಳಾದ ಡಾ.ಮಹೇಶ ಬಿರಾದಾರ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲೇರಿಯಾ ಎಂಬ ಪರಾವಲಂಬಿ ಸೋಂಕು ಹೆಣ್ಣು (ಅನಾಫಿಲಿಸ್) ಸೊಳ್ಳೆಯಿಂದ ಹರಡುತ್ತದೆ ಮತ್ತು ಇದು ತೀವ್ರವಾದ, ಕೆಲವೊಮ್ಮೆ ಮಾರಕ ಕಾಯಿಲೆಗೆ ಕಾರಣವಾಗಬಹುದು. ಪ್ಲಾಸ್ಮೋಡಿಯಂ ಪರಾವಲಂಬಿಗಳು ಸಂಕೀರ್ಣ ಜೀವನ ಚಕ್ರವನ್ನು ಪಡೆದುಕೊಳ್ಳುತ್ತವೆ, ಆವರ್ತಕ ಜ್ವರಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ರೋಗಿಗಳು ಚಿಕಿತ್ಸೆಯ ನಂತರ ಮಲೇರಿಯಾ ಲಕ್ಷಣಗಳಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ, ಆದರೆ ಚಿಕಿತ್ಸೆ ವಿಳಂಬವಾದರೆ ತೀವ್ರ ಮಲೇರಿಯಾ ರಕ್ತಹೀನತೆ, ಸೆರೆಬ್ರಲ್ ಮಲೇರಿಯಾ, ಕೋಮಾ ಅಥವಾ ಸಾವು ಮುಂತಾದ ತೀವ್ರ ತೊಡಕುಗಳು ಸಂಭವಿಸಬಹುದು ಎಂದು ತಿಳಿಸಿದರು.

ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಮಲೇರಿಯಾದಿಂದ ಮುಕ್ತರಾಗಿ, ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ಸೊಳ್ಳೆ ಪರದೆ ಬಳಸಿ ಮಲೇರಿಯಾ ಓಡಿಸಿ, ಸ್ವಯಂ ರಕ್ಷಣಾ ವಿಧಾನ ಅನುಸರಿಸಿ ಮಲೇರಿಯಾದಿಂದ ಮುಕ್ತಿಹೊಂದಿ, ನೀರು ನಿಲ್ಲದಂತೆ ಸಹಕರಿಸಿ, ನಿಂತ ನೀರು ಸೊಳ್ಳೆಗಳ ತವರು, ಲಾರ್ವಹಾರಿ ಮಿನುಗಳಿಂದ ಸೊಳ್ಳೆ ಉತ್ಪತ್ತಿ ತಡೆಗಟ್ಟಿ, ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾದೆ. ಸಾರ್ವಜನಿಕರು ಮಲೇರಿಯಾ ರೋಗ ಹರಡದಂತೆ ಮುಂಜಾಗೃತ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಮುಬಾಸ್ಸಿರ ಅಹ್ಮದ ಸಾಜೀದ್‌ ಅವರು ಮಾತನಾಡಿ, ವಿಶ್ವ ಮಲೇರಿಯಾ ದಿನವು ಎ.25 ರಂದು ಆಚರಿಸಲಾಗುವ ಜಾಗತಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿದ್ದು, ಮಲೇರಿಯಾವನ್ನು ಎದುರಿಸಲು ಮತ್ತು ನಿರ್ಮೂಲನೆ ಮಾಡಲು ಅಗತ್ಯವಾದ ಕ್ರಮವನ್ನು ಉತ್ತೇಜಿಸಲು ವಿವಿಧ ಸ್ಥಳೀಯ ಮತ್ತು ಸರ್ಕಾರಿ ಆರೋಗ್ಯ ಅಧಿಕಾರಿಗಳು ಮತ್ತು ನೀತಿ ನಿರೂಪಕರಿಗೆ ಜಾಗತಿಕ ಕರೆಯಾಗಿದೆ ಎಂದರು.

ಜಾಗೃತಿ ಜಾಥಾ ಕಾರ್ಯಕ್ರಮವು ಗಾಂಧಿ ಚೌಕದಿಂದ ಆರಂಭವಾಗಿ ಪ್ರಮುಖ ಬೀದಿಗಳ ಮುಖಾಂತರ ಸಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಗಳಾದ ಕಾರ್ಯಾಲಯದ ಆವರಣದಲ್ಲಿ ಕೊನೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿಗಳಾದ ಶಾಂತಿಲಾಲ್, ನ.ಆ.ಪಾ ಕೇಂದ್ರದ ವೈದ್ಯಾಧಿಕಾರಿಯಾದ ಡಾ.ವಿನುತಾ, ಕಚೇರಿ ಅಧೀಕ್ಷಕರಾದ ಅನಿತಾ, ತಾಲೂಕು ಆಶಾ ಮೆಂಟರ್ ಮಧುಲತಾ, ಹೀರಿಯ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಹಿರಾಲಾಲ್ ಚೌವ್ಹಾಣ, ಆರೋಗ್ಯ ನಿರಕ್ಷಣಾಧಿಕಾರಿಗಳಾದ ಖುರ್ಶೀದ್, ಉಮೇಶ್, ಕಾಳಪ್ಪ ಪತ್ತಾರ, ಸಂತೋಶ್ ಜಾದವ್, ರವಿಬಂಡಿ, ಎಮ್‌ಟಿಎಸ್ ಖಲಿಮುದ್ದಿನ್, ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆಕ್ಸಫರ್ಡ ಪ್ಯಾರಾಮೆಡಿಕಲ್ ಕಾಲೇಜಿನ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ವಿಬಿಡಿ ಸಲಹೆಗಾರರಾದ ಬಸವರಾಜ್ ಕಾಂತ ಅವರು ಸ್ವಾಗತಿಸಿದರು ಹಾಗೂ ಜಿಲ್ಲಾ ಆರೊಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ ಚವ್ಹಾಣ ವಂದನಾರ್ಪಣೆ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News