ಯಾದಗಿರಿ | ಪಹಲ್ಗಾಮ್ ಭಯೋತ್ಪಾದಕರ ದಾಳಿ ಖಂಡಿಸಿ ವೀರಶೈವ ಲಿಂಗಾಯತ ಸಮಿತಿಯಿಂದ ಪ್ರತಿಭಟನೆ

ಸುರಪುರ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಕಳೆದ ಮಂಗಳವಾರ ನಡೆದ ಉಗ್ರರ ಭಯೋತ್ಪಾದಕರ ಖಂಡಿಸಿ ನಗರದ ತಹಶೀಲ್ದಾರ್ ಕಚೇರಿ ಮುಂದೆ ತಾಲೂಕು ವೀರಶೈವ ಲಿಂಗಾಯತ ಸಮಿತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ.ಸುರೇಶ ಸಜ್ಜನ್ ಮಾತನಾಡಿ, ಪ್ರವಾಸಕ್ಕೆಂದು ದೇಶದ ವಿವಿಧ ರಾಜ್ಯಗಳಿಂದ ಜಮ್ಮು ಕಾಶ್ಮೀರ ರಾಜ್ಯದ ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಜನ ಅಮಾಯಕರನ್ನು ಹತ್ಯೆಗೈದ ಘಟನೆಯನ್ನು ತಾಲೂಕು ವೀರಶೈವ ಲಿಂಗಾಯತ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದರು.
ನಂತರ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಪ್ರಕಾಶ ಅಂಗಡಿ ಕನ್ನೆಳ್ಳಿ, ಸೂಗುರೇಶ ವಾರದ, ವಿರೇಶ ಪಂಚಾಂಗಮಠ, ಜಗದೀಶ ಪಾಟೀಲ, ಶರಣಬಸವ ಹೂಗಾರ, ರವಿ ಪಾಟೀಲ, ಶಿವನಗೌಡ ಬಿರಾದಾರ್ ಸೂಗೂರು, ಸಿದ್ದನಗೌಡ ಹೆಬ್ಬಾಳ, ಜಗದೀಶ ತಂಬಾಕೆ, ಪ್ರಕಾಶ ಬಣಗಾರ, ಸೂಗುರೇಶ ಸಜ್ಜನ್ ಇತರರಿದ್ದರು.