ಯಾದಗಿರಿ | ಶೋಷಿತರ ಒಕ್ಕೂಟದ ಕಾರ್ಯಾಧ್ಯಕ್ಷರಾಗಿ ವೆಂಕಟೇಶ ಡಿ.ಸಿ. ನೇಮಕ
Update: 2025-04-24 21:08 IST

ಸುರಪುರ : ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟಕ್ಕೆ ಸುರಪುರ ತಾಲೂಕು ಕಾರ್ಯಕ್ಷರನ್ನಾಗಿ ವೆಂಕಟೇಶ ಡಿ.ಸಿ. ಬಿಚ್ಚಗತ್ತಿಕೇರಾ ಅವರನ್ನು ನೇಮಕಗೊಳಿಸಲಾಗಿದೆ.
ನಗರದ ಟೈಲರ್ ಮಂತ್ರಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ ಭಾಗವಹಿಸಿ ನೂತನ ಕಾರ್ಯಧ್ಯಕ್ಷರನ್ನಾಗಿ ನೇಮಕಗೊಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ತಾಲೂಕು ಅಧ್ಯಕ್ಷ ನಾಗರಾಜ ದರ್ಬಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.