ತೆಲಂಗಾಣದ ಮೀಸಲಾತಿ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಮೂಲೆಗುಂಪು ಮಾಡುತ್ತಿದೆಯೇ?

ಬಿಜೆಪಿ ಈಗ ಹಿಂದುಳಿದ ವರ್ಗಗಳಿಂದ ಅಪಾರ ಒತ್ತಡವನ್ನು ಎದುರಿಸುತ್ತಿದೆ. ಇದು ಹಲವು ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿರುವ ಸಂದಿಗ್ಧ ಮತದಾರರ ನೆಲೆಯಾಗಿರುವುದರಿಂದ ಮಸೂದೆಗಳನ್ನು ದೃಢೀಕರಿಸಲು ಬಿಜೆಪಿಗೆ ಒತ್ತಡವಿದೆ. ಆದರೂ, 2023ರಲ್ಲಿ ಸರ್ವೋಚ್ಚ ನ್ಯಾಯಾಲಯ ಬಿಹಾರದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 65ರಷ್ಟು ಮೀಸಲಾತಿ ನೀಡಿರುವುದನ್ನು ರದ್ದುಗೊಳಿಸಿದ ಪಾಟ್ನಾ ಉಚ್ಚ ನ್ಯಾಯಾಲಯದ ಆದೇಶವನ್ನು ತಡೆ ಹಿಡಿಯಲು ನಿರಾಕರಿಸಿದೆ. ಆದ್ದರಿಂದ ಅವುಗಳನ್ನು ಬೆಂಬಲಿಸುವುದರಿಂದ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿಯ ಮುಂದೆ ಉಳಿದಿರುವ ಏಕೈಕ ಆಯ್ಕೆ ಎಂದರೆ ಶೇ.50ರ ಮಿತಿಯನ್ನು ಉಲ್ಲಂಘಿಸಲು ಸಾಂವಿಧಾನಿಕ ತಿದ್ದುಪಡಿ ಒಂದೇ. ಇದನ್ನು ಪಕ್ಷವು ಯಾವಾಗಲೂ ವಿರೋಧಿಸಿ ಕೊಂಡೇ ಬಂದಿದೆ.
ಮುಂಬರುವ ವರ್ಷಗಳಲ್ಲಿ ದೇಶದ ಚುನಾವಣೆ ಚಿತ್ರಣವನ್ನು ರೂಪಿಸಬಹುದಾದ ರಾಜಕೀಯ ಚಳವಳಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರಕಾರವು ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 42ರಷ್ಟು ಮೀಸಲಾತಿಯನ್ನು ಹೆಚ್ಚಿಸಲು ಎರಡು ಮಸೂದೆಗಳನ್ನು ಅಂಗೀಕರಿಸಿತು.
ಡಿಸೆಂಬರ್ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ತೆಲಂಗಾಣ ಜನರಿಗೆ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಇದು ಒಂದಾಗಿತ್ತು. ತೆಲಂಗಾಣ ವಿಧಾನಸಭೆಯು ಮಾರ್ಚ್ 17ರಂದು ವಿಧಾನಸಭೆಯಲ್ಲಿ ತೆಲಂಗಾಣ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು(ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ರಾಜ್ಯದ ಅಡಿಯಲ್ಲಿ ಬರುವ ಸೇವೆಗಳ ಹುದ್ದೆಗಳಿಗೆ ನೇಮಕಾತಿ) ಮಸೂದೆ, 2025 ಮತ್ತು ತೆಲಂಗಾಣ ಹಿಂದುಳಿದವರು( ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ) ಮಸೂದೆ-2025 ಅನ್ನು ಅಂಗೀಕರಿಸುವುದರೊಂದಿಗೆ ಕಾಂಗ್ರೆಸ್ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿತು. ರಾಜ್ಯ ಸರಕಾರದ ಜಾತಿ ಸಮೀಕ್ಷೆಯ ಪ್ರಕಾರ ಹಿಂದುಳಿದ ವರ್ಗವು ರಾಜ್ಯದ ಜನಸಂಖ್ಯೆಯ ಶೇ. 56.33ರಷ್ಟಿದೆ ಎಂದು ಕಂಡುಕೊಂಡ ಒಂದು ತಿಂಗಳ ನಂತರ ಈ ಕಾಯ್ದೆಗಳು ಜಾರಿಗೆ ಬಂದಿವೆ.
ಈ ಮಸೂದೆಗಳನ್ನು ಈಗ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರಕಾರ ಅನುಮೋದಿಸಬೇಕಾಗುತ್ತದೆ. ಇದರ ಅರ್ಥ ರೇವಂತ್ ರೆಡ್ಡಿ ಸರಕಾರವು ಚೆಂಡನ್ನು ಪರಿಣಾಮಕಾರಿಯಾಗಿ ಕೇಂದ್ರದ ಅಂಗಳಕ್ಕೆ ಎಸೆದಿದೆ. ತೆಲಂಗಾಣದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿದ ತುರ್ತು ಮತ್ತು ಮಸೂದೆಗಳು ವಿಧಾನಸಭೆಯಲ್ಲಿ ರೂಪುಗೊಂಡ ಕಾರಣ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರದಿಂದ ನಿರಂತರವಾಗಿ ಒತ್ತಾಯಿಸುತ್ತಿರುವ ಜಾತಿ ಜನಗಣತಿಯ ಬಗ್ಗೆ ಬಿಜೆಪಿ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ.
ಈ ಮಸೂದೆಗಳು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ. 42ಕ್ಕಿಂತ ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಒಟ್ಟು ಮೀಸಲಾತಿಯನ್ನು ಶೇ. 60ಕ್ಕಿಂತ ಹೆಚ್ಚಿಸುವುದಾಗಿದೆ. ಇದರರ್ಥ ಅವು ಸರ್ವೋಚ್ಚ ನ್ಯಾಯಾಲಯ ನಿಗದಿಗೊಳಿಸಿರುವ ಮೀಸಲಾತಿ ಮೇಲಿನ ಶೇ. 50ರ ಗರಿಷ್ಠ ಮಿತಿಯನ್ನು ಉಲ್ಲಂಘಿಸುವವು.
ಬಿಜೆಪಿ ರಾಷ್ಟ್ರೀಯ ನಾಯಕತ್ವವು ತನ್ನ ನಿಲುವನ್ನು ಸ್ಪಷ್ಟ ಪಡಿಸದಿದ್ದರೂ ತೆಲಂಗಾಣ ಬಿಜೆಪಿ ಘಟಕವು ವಿಧಾನಸಭೆಯಲ್ಲಿ ಮಸೂದೆಗಳನ್ನು ಬೆಂಬಲಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಬಿಜೆಪಿ ಈಗ ಹಿಂದುಳಿದ ವರ್ಗಗಳಿಂದ ಅಪಾರ ಒತ್ತಡವನ್ನು ಎದುರಿಸುತ್ತಿದೆ. ಇದು ಹಲವು ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿರುವ ಸಂದಿಗ್ಧ ಮತದಾರರ ನೆಲೆಯಾಗಿರುವುದರಿಂದ ಮಸೂದೆಗಳನ್ನು ದೃಢೀಕರಿಸಲು ಬಿಜೆಪಿಗೆ ಒತ್ತಡವಿದೆ. ಆದರೂ, 2023ರಲ್ಲಿ ಸರ್ವೋಚ್ಚ ನ್ಯಾಯಾಲಯ ಬಿಹಾರದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 65ರಷ್ಟು ಮೀಸಲಾತಿ ನೀಡಿರುವುದನ್ನು ರದ್ದುಗೊಳಿಸಿದ ಪಾಟ್ನಾ ಉಚ್ಚ ನ್ಯಾಯಾಲಯದ ಆದೇಶವನ್ನು ತಡೆ ಹಿಡಿಯಲು ನಿರಾಕರಿಸಿದೆ. ಆದ್ದರಿಂದ ಅವುಗಳನ್ನು ಬೆಂಬಲಿಸುವುದರಿಂದ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿಯ ಮುಂದೆ ಉಳಿದಿರುವ ಏಕೈಕ ಆಯ್ಕೆ ಎಂದರೆ ಶೇ.50ರ ಮಿತಿಯನ್ನು ಉಲ್ಲಂಘಿಸಲು ಸಾಂವಿಧಾನಿಕ ತಿದ್ದುಪಡಿ ಒಂದೇ. ಇದನ್ನು ಪಕ್ಷವು ಯಾವಾಗಲೂ ವಿರೋಧಿಸಿಕೊಂಡೇ ಬಂದಿದೆ. ಚುನಾವಣಾ ವಾಸ್ತವಗಳ ವಿರುದ್ಧ ಈ ಮಸೂದೆಗಳು ಸೈದ್ಧಾಂತಿಕ ನಿಲುವನ್ನು ಪರೀಕ್ಷಿಸುತ್ತವೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯ ಬೇಡಿಕೆಯು ಈ ಪ್ರಸಂಗಕ್ಕೆ ಮತ್ತೊಂದು ಪದರವನ್ನು ಸೇರಿಸುತ್ತದೆ. ರಾಹುಲ್ ಗಾಂಧಿಯವರು ಜಾತಿ ಜನಗಣತಿ ಮತ್ತು ಅನುಪಾತದ ಮೀಸಲಾತಿಗಾಗಿ ಮನವಿ ಮಾಡುತ್ತಿರುವುದು ಜನಪ್ರಿಯತೆಯನ್ನು ಗಳಿಸುತ್ತಿದೆ. ಹಿಂದುಳಿದ ವರ್ಗಗಳ ಪಕ್ಷಗಳು ಬಲಗೊಳ್ಳುತ್ತಿರುವ ಉತ್ತರ ಪ್ರದೇಶ ಮತ್ತು ಬಿಹಾರದಂತಹ ದೊಡ್ಡ ರಾಜ್ಯಗಳಲ್ಲಿನ ಜನಸಂಖ್ಯಾ ಶಾಸ್ತ್ರವನ್ನು ಗಮನಿಸಿದರೆ ಬಿಜೆಪಿ ತನ್ನ ನಿಲುವುಗಳನ್ನು ಸ್ಪಷ್ಟ ಪಡಿಸುವುದು ಮುಖ್ಯವಾಗಿದೆ.
ರೇವಂತ್ ರೆಡ್ಡಿ ಸರಕಾರವು ಈ ಮಸೂದೆಯನ್ನು ಒಂದು ಕಾರ್ಯತಂತ್ರದ ಚಮತ್ಕಾರ ಎಂದು ಭಾವಿಸಿದ್ದು ಇದು ದೇಶಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳ ಗಮನ ಸೆಳೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣವನ್ನು ಪ್ರತಿಪಾದಿಸುವ ಮೂಲಕ ರೇವಂತ್ ರೆಡ್ಡಿ ರಾಜ್ಯದಲ್ಲಿ ಈ ಸಮುದಾಯಗಳಿಂದ ಕಾಂಗ್ರೆಸ್‌ಗೆ ಬೆಂಬಲವನ್ನು ಗಟ್ಟಿಗೊಳಿಸಿದ್ದಾರೆ. ಅದೇ ಸಮಯದಲ್ಲಿ ಬಿಜೆಪಿ ಈ ವಿಷಯದಲ್ಲಿ ಎಡವುತ್ತಿರುವುದರಿಂದ ಅವರು ಪಕ್ಷವನ್ನು ‘ಹಿಂದುಳಿದ ವರ್ಗಗಳ’ ವಿರೋಧಿ ಎಂದು ಬಿಂಬಿಸಬಹುದು.
ಏತನ್ಮಧ್ಯೆ, ತೆಲಂಗಾಣದ ಪ್ರಮುಖ ವಿರೋಧ ಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕೂಡ ಮಸೂದೆಗಳಿಂದಾಗಿ ಮೂಲೆಗೆ ತಳ್ಳಲ್ಪಟ್ಟಿದೆ. ಐದು ವರ್ಷಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಿದಾಗ ಕಾನೂನು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ. 34ರಿಂದ ಕೆಳಗಿಳಿಸಿದವರು ಬಿಆರ್‌ಎಸ್ ಸರಕಾರದ ಮುಖ್ಯಮಂತ್ರಿಯಾಗಿದ್ದ ಕೆ. ಚಂದ್ರಶೇಖರ ರಾವ್. ಮಸೂದೆಗಳನ್ನು ಬೆಂಬಲಿಸದೆ ಕಳೆದ ಹತ್ತು ವರ್ಷಗಳಿಂದ ತನ್ನೊಂದಿಗೆ ನಿಂತಿರುವ ಹಿಂದುಳಿದ ವರ್ಗಗಳ ಸಮುದಾಯಗಳನ್ನು ದೂರವಿಡುವ ಅಪಾಯವನ್ನು ಬಿಆರ್‌ಎಸ್ ಎದುರಿಸುತ್ತಿದೆ.
ಕೆ. ಚಂದ್ರಶೇಖರ ರಾವ್ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ತಳಮಟ್ಟದಲ್ಲಿ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ವಿಧಾನಪರಿಷತ್ ಸದಸ್ಯೆ ಕೆ. ಕವಿತಾ ಅವರು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಕೋಟಾ ನೀಡುವಂತೆ ಒತ್ತಾಯಿಸುವ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡರು. ಅವರು ತಮ್ಮ ಸಾಮಾಜಿಕ ಘಟಕವಾದ ತೆಲಂಗಾಣ ಜಾಗೃತಿ ಮೂಲಕ ಸಭೆಗಳನ್ನು ನಡೆಸುತ್ತಿದ್ದರೂ ಸಹ, ಬಿಆರ್‌ಎಸ್ ಪಕ್ಷದೊಳಗೆ ಈ ಉದ್ದೇಶದ ಪ್ರತಿಪಾದಕರಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ಉನ್ನತ ಅಧಿಕಾರಿಗಳಿಗೆ ಸೂಚಿಸಿರುವಂತೆ ತೋರುತ್ತದೆ.
ಮಸೂದೆಗಳು ಕಾನೂನು ಅಡಚಣೆಗಳನ್ನು ಎದುರಿಸಿದರೂ ಕಾಂಗ್ರೆಸ್ ಹಿಂದುಳಿದ ವರ್ಗಗಳಲ್ಲಿ ತನ್ನ ಹಿಂದಿನ ಮತದಾರ ನೆಲೆಯನ್ನು ಮರಳಿ ಪಡೆಯಬಹುದು. ಸಮುದಾಯದ ವಿಶ್ವಾಸವನ್ನು ಕಳೆದುಕೊಳ್ಳದಂತೆ ಬಿಜೆಪಿ ಈ ಅಪಾಯ ತುಂಬಿದ ಕ್ಷೇತ್ರವನ್ನು ಎಚ್ಚರಿಕೆಯಿಂದ ನ್ಯಾವಿಗೇಟ್ ಮಾಡಬೇಕಾಗುತ್ತದೆ.
ಕೃಪೆ: ದಿ ಹಿಂದೂ