ತಾರತಮ್ಯಧೋರಣೆಯ ವಿರುದ್ಧ ಧ್ವನಿಯೆತ್ತಿದ ಫೇಸ್ ಬುಕ್ ಸ್ಥಾಪಕ ಝ್ಯೂಕರ್
ಮುಸ್ಲಿಮರ ಹಕ್ಕುಗಳ ರಕ್ಷಣೆಗೆ ಮುಂದಾಗಿರುವ ಫೇಸ್ ಬುಕ್ ಸ್ಥಾಪಕ ಝ್ಯೂಕರ್‌ಬರ್ಗ್ ಬೇರೆಯವರು ಮಾಡಿದ ತಪ್ಪಿಗೆ ಮುಸ್ಲಿಮರನ್ನು ಶಿಕ್ಷಿಸಬಾರದು ಎಂದು ಹೇಳಿದ್ದಾರೆ.
ಪ್ಯಾರಿಸ್ ಸೇರಿದಂತೆ ಜಗತ್ತಿನ ಇತರ ಕಡೆಗಳಲ್ಲಿ ಉಗ್ರಗಾಮಿಗಳ ದಾಳಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು '' ಇದಕ್ಕಾಗಿ ಮುಸ್ಲಿಮ್ ಸಮುದಾಯ ತಾರತಮ್ಯಕ್ಕೆ ಒಳಗಾಗಬಾರದು'' ಎಂದು ಅವರು ಹೇಳಿದ್ದಾರೆ.
ಮುಸ್ಲಿಮರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಬೇಕೆಂದು ರಿಪಬ್ಲಿಕನ್ ಪಕ್ಷದ ಉಮೇದುವಾರ ಡೋನಾಲ್ಡ್ ಟ್ರಂಪ್ ಹೇಳಿಕೆಯ ಹಿನ್ನೆಲೆಯಲ್ಲಿ ಝ್ಯೂಕರ್‌ಬರ್ಗ್ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
''ಯಹೂದಿಯಾಗಿರುವ ನನಗೆ ಯಾವುದೇ ಸಮುದಾಯದ ವಿರುದ್ಧ ದಾಳಿ ನಡೆಯುವಾಗ ಎದ್ದು ನಿಂತು ಹೋರಾಡಬೇಕೆಂದು ಹೆತ್ತವರು ಕಲಿಸಿದ್ದಾರೆ. ಈ ಹೊತ್ತು ನಿಮ್ಮ ವಿರುದ್ಧ ದಾಳಿ ನಡೆಯದಿದ್ದರೂ, ಸ್ವಾತಂತ್ರದ ಮೇಲೆ ದಾಳಿ ನಡೆದರೆ ಅದರ ಪರಿಣಾಮ ಎಲ್ಲರ ಮೇಲೂ ಆಗುತ್ತದೆ '' ಎಂದು ಅವರು ಅಭಿಪ್ರಾಯಪಟ್ಟರು..
'' ನೀವು ಮುಸ್ಲಿಂ ಸಮುದಾಯವರಾಗಿದ್ದರೆ ನಿಮಗೆ ಯಾವಾಗಲೂ ಇಲ್ಲಿ ಸ್ವಾಗತವಿದೆ. ನಾವು ನಿಮ್ಮ ಹಕ್ಕುಗಳ ರಕ್ಷಣೆಗೆ ಕೈ ಜೋಡಿಸುತ್ತೇವೆ. ಶಾಂತಿ ಮತ್ತು ಸುಭದ್ರತೆಯ ವಾತಾವರಣ ನಿರ್ಮಿಸಲು ನಿಮ್ಮಾಂದಿಗೆ ನಾವಿದ್ದೇವೆ . ಫೇಸ್ ಬುಕ್‌ನ ನಾಯಕನಾಗಿ ಈ ವಿಚಾರ ಹೇಳಿರುವೆ'' ಎಂದು ಝ್ಯೂಕರ್‌ಬರ್ಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
I want to add my voice in support of Muslims in our community and around the world.After the Paris attacks and hate...
Posted by Mark Zuckerberg on Wednesday, 9 December 2015