ಫೋಕಸ್
ಕ್ಯಾಲಿಕಟ್ ಹೋದರೆ ಝೈನಬಿ ನೂರ್ ಅಮ್ಮನ ಊಟದ ಮನೆಗೆ ಖಂಡಿತ ಹೋಗಿ

ಕ್ಯಾಲಿಕಟ್: ಕ್ಯಾಲಿಕಟ್ಗೆ ಹೋದರೆ ಅಲ್ಲಿನ ಬೀಚ್ ಸಮೀಪವೇ ಇರುವ ಝೈನಬಿ ನೂರ್ ಅಮ್ಮನವರ ‘ಝೈನ್ಸ್’ ಹೊಟೇಲ್ಗೆ ಹೋಗಲು ಮರೆಯದಿರಿ.
ನಿಮಗೆ ಸಾಂಪ್ರದಾಯಿಕ ಕೇರಳ ಅಡುಗೆ ಇಷ್ಟ ಎಂದಾದರೆ ನೀವು ಮಿಸ್ ಮಾಡಲೇಬಾರದ ವಿಶಿಷ್ಟ ಹೋಟೆಲ್ ಇದು. ಅಪ್ಪಟ ಕೇರಳ ರುಚಿಯ ಮಟನ್, ಚಿಕನ್, ಫಿಶ್, ಪ್ರಾನ್ಸ್ (ಸಿಗಡಿ) ಬಿರಿಯಾನಿಗಳು, ಪ್ರಾನ್ಸ್ ಚಿಲ್ಲಿ, ಸ್ಕ್ವಿಡ್ (ಬಂಡಾಸ್) ಫ್ರೈಗಳನ್ನು ನೀವು ವಾಹ್ ವಾಹ್ ಎನ್ನುತ್ತಾ ಸವಿಯುವುದು ಖಚಿತ. ಇವುಗಳ ಬಳಿಕ ಮೊಟ್ಟೆ, ಕೊಬ್ಬರಿ, ಕೊಬ್ಬರಿ ಎಣ್ಣೆ ಇತ್ಯಾದಿಗಳಿಂದ ತಯಾರಿಸಿದ ವೈವಿಧ್ಯಮಯ ಸಿಹಿ ತಿನಿಸುಗಳು ನಿಮ್ಮ ರುಚಿಯ ದಾಹ ಇಂಗಿಸುತ್ತವೆ.
ಈ ಹೋಟೆಲ್ ನಡೆಸುತ್ತಿರುವ ಝೈನಬಿ ನೂರ್, ಹಲವಾರು ವರ್ಷಗಳಿಂದ ಅದೇ ವಿಶಿಷ್ಟ ರುಚಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಕೃತಕ ರುಚಿ ಅಲಂಕಾರಗಳಿಗೆ ಝೈನಬಿ ಅಮ್ಮನ ಹೋಟೆಲ್ನಲ್ಲಿ ಅವಕಾಶವಿಲ್ಲ. ಹಲವಾರು ಖ್ಯಾತ ಟಿವಿ ವಾಹಿನಿಗಳು, ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಝೈನ್ಸ್ ಹೋಟೆಲ್ನ ರುಚಿಯನ್ನು ಪರಿಚಯಿಸಲಾಗಿದೆ. ಈ ಹೋಟೆಲ್, ಹೈವೇ ಆನ್ ಮೈ ಪ್ಲೇಟ್ (ಎನ್ಡಿಟಿವಿ ಗುಡ್ ಟೈಮ್ಸ್)ನ 2008ನೆ ಸಾಲಿನ ‘ ಬೆಸ್ಟ್ ಅಥೆಂಟಿಕ್ ಇಂಡಿಯನ್ ಢಾಬಾ ’ ಪ್ರಶಸ್ತಿಗೆ ಪಾತ್ರವಾಗಿದೆ.
ಇನ್ನು ಕ್ಯಾಲಿಕಟ್ಗೆ ಹೋದರೆ ಝೈನ್ಸ್ಗೆ ಹೋಗದೆ ಇರಬೇಡಿ!
....................................................................................

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ