ಟೋಕಿಯೊ ನಡಿಗೆ ಸೈಕಲ್ ಸವಾರಿ ಕಡೆಗೆ
ಜಪಾನ್ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಪರ್ಕಕ್ಕಾಗಿ ಸೈಕಲ್‌ಗಳ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಜಪಾನ್‌ನ ಬಹುತೇಕ ಎಲ್ಲ ನಗರಗಳು ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿದ್ದು, ಮೆಟ್ರೊ ರೈಲು, ವಿದ್ಯುತ್ ವಾಹನ (ಟ್ರಾಮ್), ಮೋನೊರೈಲು, ನಾವೆಗಳು ಹಾಗೂ ಇತರ ವೈವಿಧ್ಯಮಯ ಸಾರಿಗೆ ಸಾಧನಗಳನ್ನು ಸೇರಿದ ಅತ್ಯಂತ ದಕ್ಷ ಸಾರಿಗೆ ಸೇವೆ ಇದೆ. ಇಂಥ ಮೆಟ್ರೊ ನಿಲ್ದಾಣಗಳಿಂದ ಜನರು ತಮ್ಮ ಮನೆಗಳಿಗೆ ಪ್ರಯಾಣಿಸಲು ಬೈಕ್‌ಗಳನ್ನು ಬಳಕೆ ಮಾಡುವಂತೆ ಜಪಾನ್ ಉತ್ತೇಜಿಸುತ್ತಿದೆ.
ಟೋಕಿಯೊ ನಗರಾಡಳಿತ ಇದೀಗ ಸೈಕಲ್‌ಸವಾರಿಗೆ ಮೂಲ ಸೌಕರ್ಯವನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿದೆ. 2020ರ ಟೋಕಿಯೊ ಒಲಿಂಪಿಕ್ಸ್ ಒಳಗಾಗಿ ಸೈಕಲ್‌ಗಳನ್ನು ಜನಪ್ರಿಯ ಸಾರಿಗೆ ಸಾಧನವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯನ್ನು ದೇಶ ಹೊಂದಿದೆ. ಕಳೆದ ವರ್ಷದ ವರೆಗೂ ಟೋಕಿಯೊದಲ್ಲಿ 120 ಕಿಲೋಮೀಟರ್‌ನಷ್ಟು ಸೈಕಲ್ ಸವಾರಿ ಲೇನ್‌ಗಳಿದ್ದವು. ಇದೀಗ ಇಂಥ ಬೈಕಿಂಗ್ ಲೇನ್‌ಗಳನ್ನು ದ್ವಿಗುಣಗೊಳಿಸುವ ಕಾರ್ಯ ವೇಗ ಪಡೆದಿದೆ. ಆದರೆ ಇವೆಲ್ಲವೂ ಸರಾಗವಾಗಿಲ್ಲ. ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನಿರ್ವಹಿಸುವ ರಸ್ತೆಗಳಿಂದ ಅಲ್ಲಲ್ಲಿ ಬೇರ್ಪಡುತ್ತವೆ. (ಇಲ್ಲಿ ರಸ್ತೆಗಳು ಸ್ಥಳೀಯ ಸಂಸ್ಥೆಗಳ ಅಥವಾ ಜಿಲ್ಲಾಡಳಿತದ ಒಡೆತನದಲ್ಲಿಲ್ಲ).
ಟೋಕಿಯೊದಲ್ಲಿ ದೈನಂದಿನ ಪ್ರಯಾಣಿಕರ ಪೈಕಿ ಶೇಕಡ 14ರಷ್ಟು ಮಂದಿ ಸೈಕಲ್ ಸವಾರಿ ಮಾಡುತ್ತಾರೆ. ನಗರದ ಜನಸಂಖ್ಯೆ ಸುಮಾರು 38 ದಶಲಕ್ಷ ಇದ್ದು, ಪಾಶ್ಚಿಮಾತ್ಯ ಮಾನದಂಡಗಳಿಗೆ ಅನುಗುಣವಾಗಿ, ಟೋಕಿಯೊ ಜನದಟ್ಟಣೆಯ ಹಾಗೂ ಇತರ ಪ್ರದೇಶಗಳಿಗೆ ಹೋಲಿಸಿದರೆ ಚಿಕ್ಕ ಸಂಚಾರ ಸ್ಥಳಾವಕಾಶ ಹೊಂದಿದೆ. ದಿನಕ್ಕೆ ಸುಮಾರು 20 ದಶಲಕ್ಷ ಮಂದಿ ಮೆಟ್ರೊ ರೈಲು ವ್ಯವಸ್ಥೆ ಬಳಸಿಕೊಳ್ಳುತ್ತಾರೆ. ಈ ಪೈಕಿ ಶೇಕಡ 20ರಷ್ಟು ಮಂದಿ ಮೆಟ್ರೊ ಸುರಂಗ ನಿಲ್ದಾಣಗಳಿಂದ ಮನೆಗಳಿಗೆ ತೆರಳಲು ಸೈಕಲ್ ತುಳಿಯುತ್ತಾರೆ. ನಗರದಲ್ಲಿ ಕಾರುಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲದ ಕಾರಣ ಉಳಿದ ಶೇಕಡ 80ರಷ್ಟು ಮಂದಿ ನಡೆದುಕೊಂಡೇ ಮನೆಗಳಿಗೆ ಹೋಗುತ್ತಾರೆ.
ರೈಲಿನಿಂದ ಸೈಕಲ್ ಸಾರಿಗೆ ಕಡೆೆ
ಇಡೀ ವಿಶ್ವದಲ್ಲೇ ಅತ್ಯಂತ ವಿಸ್ತೃತ ರೈಲು ಜಾಲ ಹೊಂದಿರುವ ಹೆಗ್ಗಳಿಕೆ ಟೋಕಿಯೊ ನಗರದ್ದು. ಇಲ್ಲಿ 158 ರೈಲ್ವೆ ಲೇನ್‌ಗಳಿದ್ದು, ಒಟ್ಟು 4,714 ಕಿಲೋಮೀಟರ್ ಹಳಿಗಳಲ್ಲಿ ರೈಲು ಓಡುತ್ತದೆ. 48 ಸಂಸ್ಥೆಗಳು ರೈಲು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಹೆಸರು, ಬಣ್ಣ ಹಾಗೂ ಲೋಗೊ ಇವೆ. ಈ ಎಲ್ಲ ಹಳಿಗಳಲ್ಲಿ ಒಟ್ಟು 2,110 ರೈಲು ನಿಲ್ದಾಣಗಳಿವೆ. (ಪ್ರತಿ ಹಳಿ ಕೂಡಾ ಅದು ಸಂಪರ್ಕಿಸುವ ನಿಲ್ದಾಣವನ್ನು ಲೆಕ್ಕ ಹಾಕುವುದರಿಂದ ವಾಸ್ತವವಾಗಿ ರೈಲು ನಿಲ್ದಾಣಗಳು ಇದಕ್ಕಿಂತ ಕಡಿಮೆ). ವಿಸ್ತರಿತ ಜಾಲ ಹಾಗೂ ದಕ್ಷ ಸೇವೆಯಿಂದಾಗಿ, ಇಲ್ಲಿ ಖಾಸಗಿ ವಾಹನಗಳಿಗೆ ನಗರ ಸಂಚಾರ ವ್ಯವಸ್ಥೆಯಲ್ಲಿ ಸ್ಥಾನವಿಲ್ಲ. ಕುತೂಹಲಕಾರಿ ಅಂಶವೆಂದರೆ ಟೋಕಿಯೊ ನಗರದಲ್ಲಿ ಕಾರು ಮಾಲಕರ ಸಂಖ್ಯೆ ಇಡೀ ದೇಶದಲ್ಲೇ ಕನಿಷ್ಠ. ಜಪಾನ್‌ನಲ್ಲಿ ಸರಾಸರಿ ಕುಟುಂಬಗಳು ಹೊಂದಿರುವ ಕಾರುಗಳ ಸಂಖ್ಯೆ 1.07 ಇದ್ದರೆ, ಟೋಕಿಯೊದಲ್ಲಿ ಈ ಪ್ರಮಾಣ ಕೇವಲ 0.46. ಆದರೆ ಪ್ರತಿ ವ್ಯಕ್ತಿಗಳಿಗೆ 0.6ರಷ್ಟು ಸೈಕಲ್‌ಗಳಿವೆ. (ಅಮೆರಿಕದಲ್ಲಿ ಕುಟುಂಬಗಳು ಹೊಂದಿರುವ ಕಾರುಗಳ ಸಂಖ್ಯೆ 1.95).
ಪರಿಸರ ಪ್ರಯೋಜನ
ಭಾರತದ ಮಾನದಂಡಗಳಿಗೆ ಅನುಗುಣವಾಗಿ ಕೂಡಾ, ಹೆಚ್ಚಿನ ಮಂದಿ ಜಪಾನೀಯರು ಕಾರುಗಳನ್ನು ಹೊಂದಿದ್ದಾರೆ. ಆದರೆ ಟೋಕಿಯೊ ರಸ್ತೆಗಳಲ್ಲಿ ಕಡಿಮೆ ಕಾರುಗಳಿವೆ. ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಸಾರಿಗೆ ಸಚಿವಾಲಯ ನಗರದಲ್ಲಿ ಸೈಕಲ್‌ಗಳನ್ನು ಆದ್ಯತಾ ಸಂಚಾರ ಸಾಧನವಾಗಿ ಅಳವಡಿಸಿಕೊಂಡಿದೆ. 1964ರಲ್ಲಿ ಆರಂಭವಾದ ಜಪಾನ್ ಸೈಕಲ್ ಉತ್ತೇಜನ ಸಂಘ, ಸೈಕಲ್ ಸವಾರಿಗೆ ಹೆಚ್ಚಿನ ಒತ್ತು ನೀಡಿ, ಸೈಕಲ್‌ಗಳಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಲೇನ್‌ಗಳನ್ನು ನಿರ್ಮಿಸುವಂತೆ ಸಾರಿಗೆ ಸಚಿವಾಲಯವನ್ನು ಆಗ್ರಹಿಸುತ್ತಾ ಬಂದಿದೆ. ಇದೀಗ ನಿರ್ಮಾಣ ಸಚಿವಾಲಯ ರಸ್ತೆಯ ಸ್ಥಿತಿಯನ್ನು ಸುಧಾರಿಸಿ, ಸೈಕಲ್ ಸವಾರಿ ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಆರಾಮದಾಯಕವಾಗುವಂತೆ ಮಾಡಲು ಯೋಜನೆ ಅನುಷ್ಠಾನಗೊಳಿಸುತ್ತಿದೆ.
ಇದೀಗ ಬಾಡಿಗೆ ಸೈಕಲ್ ಸೇವೆ ಹಾಗೂ ಹಂಚಿಕೆ ಸೈಕಲ್ ಸೇವೆ ಎಲ್ಲ ಮೆಟ್ರೊ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳ ಹೊರಗೆ, ಮೋನೊ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್, ರ್ಯಾಂಪ್ ಬಳಿ ಆರಂಭವಾಗಿವೆ. ಸೈಕಲ್ ಪ್ರಯಾಣಿಕರು ನಿಗದಿತ ಸ್ಥಳಕ್ಕೆ ತುಳಿದುಕೊಂಡು ಹೋಗಲು ಅನುಕೂಲವಾಗುವಂತೆ ವೈವಿಧ್ಯಮಯ ಕಾರ್ಡ್‌ಗಳಿವೆ. ಆದ್ದರಿಂದ ಸೈಕಲ್‌ಗಳು ಯಾವ ಹಾನಿಯನ್ನೂ ಮಾಡುವುದಿಲ್ಲ. ನಡೆದುಕೊಂಡು ಹೋಗುವ ಬದಿಯಲ್ಲಿ ಸೈಕಲ್‌ಗಳನ್ನು ಓಡಿಸಲೂ ಅವಕಾಶವಿದೆ. ಮಿತ್ಸುಬಿಶಿ ಆಟೊಮೇಷನ್ ವಿಭಾಗದ ಹಿರಿಯ ತಾಂತ್ರಿಕ ವ್ಯವಸ್ಥಾಪಕ ವಿಕ್ರಮ್ ಮಟ್ಟೂ ಹೇಳುವಂತೆ, ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರು ಬಳಸುವುದನ್ನು ಹೊರತುಪಡಿಸಿ, 600 ಉದ್ಯೋಗಿಗಳ ಪೈಕಿ ಯಾರು ಕೂಡಾ ಮೆಟ್ರೊ ರೈಲು ಹಾಗೂ ಸೈಕಲ್ ಹೊರತುಪಡಿಸಿ ಬೇರೆ ವಾಹನ ಬಳಸುವುದಿಲ್ಲ. ದಿಲ್ಲಿ ಮೂಲದ ಮಟ್ಟೂ ಕಳೆದ ಆರು ತಿಂಗಳಿಂದ ಟೋಕಿಯೊದಲ್ಲಿದ್ದಾರೆ. ಪ್ರಯಾಣಿಕರು ಮೆಟ್ರೊ ರೈಲುಗಳಿಂದ ಸೈಕಲ್ ಸವಾರಿಗೆ ಬದಲಾದಾಗ, ಅವರ ಸರಾಗ ಸವಾರಿಗೆ ಯಾವ ತೊಂದರೆಯೂ ಆಗದಂತೆ ಟೋಕಿಯೊ ಮತ್ತು ಇತರ ನಗರಗಳ ಅಧಿಕಾರಿಗಳು ಸೇವೆ ಒದಗಿಸುತ್ತಾರೆ. ಇದೇ ಅಭಿಪ್ರಾಯವನ್ನು ಟೀವಾ ನಿರ್ಮಲಾ ಜುಂಕೊ ವ್ಯಕ್ತಪಡಿಸುತ್ತಾರೆ. ಕಳೆದ 18 ವರ್ಷಗಳಿಂದ ಜಪಾನ್‌ನಲ್ಲಿ ವಾಸವಾಗಿರುವ ಅವರು, ಇದುವರೆಗೆ ಒಮ್ಮೆಯೂ ಕೆಲಸಕ್ಕೆ ಹೋಗಲು ಅಥವಾ ಕೆಲಸದಿಂದ ಬರಲು ಟ್ಯಾಕ್ಸಿ ಬಾಡಿಗೆಗೆ ಪಡೆದಿಲ್ಲ ಎಂದು ಹೇಳುತ್ತಾರೆ. ನಿರ್ಮಲಾ ಅವರು ಜಪಾನ್‌ನ ಹಲವು ಕಂಪೆನಿಗಳಿಗೆ ಭಾರತದಲ್ಲಿ ವಹಿವಾಟು ನಡೆಸುವ ಸಂಬಂಧ ಸಲಹಾ ಸೇವೆ ನೀಡುತ್ತಿದ್ದಾರೆ.
ಕಾರು ದುಬಾರಿ ಆಯ್ಕೆ
ನಗರದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಕಾರು ಹಾಗೂ ಕಡ್ಡಾಯ ಪಾರ್ಕಿಂಗ್ ಜಾಗ ಖರೀದಿ ಟೋಕಿಯೊದಲ್ಲಿ ಅನಾನುಕೂಲ ಹಾಗೂ ದುಬಾರಿ. ನಗರದ ಕೇಂದ್ರಗಳಲ್ಲಿ ನಿಲುಗಡೆ ನಿಷೇಧ ಶುಲ್ಕಗಳು ಕೂಡಾ ನಿರುತ್ತೇಜಕಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, ದಕ್ಷ ಮೆಟ್ರೊ ಜಾಲಕ್ಕೆ ಸನಿಹವಾಗಿರುವುದರಿಂದ ಸಾಮಾನ್ಯ ನಗರವಾಸಿಗಳು ತಮ್ಮ ಮನೆಯಿಂದ ಮೆಟ್ರೊ ನಿಲ್ದಾಣ ತಲುಪಲು, ಅಥವಾ ದಿನಬಳಕೆಯ ಅಗತ್ಯ ವಸ್ತುಗಳ ಖರೀದಿಗೆ, ಕ್ಲಿನಿಕ್, ಪಾರ್ಕ್, ರೆಸ್ಟೋರೆಂಟ್ ಅಥವಾ ಶಿಶುವಿಹಾರಗಳಿಗೆ ಹೋಗಲು ಎರಡು ಕಿಲೋಮೀಟರ್‌ಗಿಂತ ಹೆಚ್ಚು ಸೈಕಲ್ ತುಳಿಯಬೇಕಾಗುವುದಿಲ್ಲ. ಸ್ಥಳಾವಕಾಶ ಕಡಿಮೆ ಇರುವ ನಗರ ವಾತಾವರಣದಲ್ಲಿ ಕಾರುಗಳ ಹಾನಿಕಾರಕ ಪರಿಣಾಮಗಳನ್ನು ಅರ್ಥಮಾಡಿಕೊಂಡ ಜನರು ಸೈಕಲ್ ಸವಾರಿ ಕಡೆಗೆ ಸ್ಪಷ್ಟ ಒಲವು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಭಾರತೀಯರಿಗೂ ಸಕಾಲವಲ್ಲವೇ?