ಹೆರಿಗೆ ರಜೆಯನ್ನುವಿಸ್ತರಿಸಿರುವುದೇನೋ ಸರಿ ಆದರೆ ಅಸಂಘಟಿತ ಕ್ಷೇತ್ರಗಳಲ್ಲಿಈ ರಜೆಯ ಕಥೆ ಏನು?
‘‘ಸರಕಾರ ಖಾಸಗಿ ವಲಯದಲ್ಲಿ ಹೆರಿಗೆ ರಜೆಯನ್ನು 12ವಾರಗಳಿಂದ 26ವಾರಗಳಿಗೆ ಹೆಚ್ಚಿಸಿರುವುದೇನೋ ಸರಿ! ಆದರೆ
ಆ ಮಹಿಳೆಯರು ತಮ್ಮ ಕಾರ್ಯತಂಡದ ಭಾಗವಾಗಿ ಮುಂದುವರಿಯುವುದರ ಬಗ್ಗೆಯೂ ಕಾಳಜಿವಹಿಸಬೇಕಾಗಿದೆ’’
ಹೆರಿಗೆ ರಜೆಯನ್ನುವಿಸ್ತರಿಸಿರುವುದೇನೋ ಸರಿ ಆದರೆ ಅಸಂಘಟಿತ ಕ್ಷೇತ್ರಗಳಲ್ಲಿಈ ರಜೆಯ ಕಥೆ ಏನು?
ಖಾಸಗಿ ವಲಯಗಳಲ್ಲಿ ಕೆಲಸಮಾಡುತ್ತಿರುವ ಮಹಿಳೆಯ ಪಾಲಿಗೆ ಡಿಸೆಂಬರ್ 28 ಚೇತೋಹಾರಿಯಾದ ದಿನವಾಗಲಿದೆ. ಏಕೆಂದರೆ ಅಂದಿನಿಂದ ಈ ಮಹಿಳೆಯರ ಹೆರಿಗೆ ರಜೆಯ ಅವಧಿ 12 ವಾರಗಳಿಂದ 26 ವಾರಗಳಿಗೆ ಹೆಚ್ಚಳಗೊಳ್ಳಲಿದೆ. ಈ ಮೂಲಕ ಹೆರಿಗೆಯ ನಂತರ ತಾಯಿ ಆರು ತಿಂಗಳ ಕಾಲ ತನ್ನ ಶಿಶುವಿನೊಂದಿಗಿದ್ದು ಮೊಲೆಹಾಲು ಉಣಿಸುವ ಮೂಲಕ ತಾಯಿ-ಮಗುವಿನ ಆರೋಗ್ಯಪೂರ್ಣ ಭವಿಷ್ಯಕ್ಕೆ ಸಹಕಾರಿಯಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಯಾದ ಮೇನೆಕಾ ಗಾಂಧಿಯವರು ಈ ಪ್ರಸ್ತಾಪವನ್ನು ಮಂಡಿಸಿದ್ದಾರೆ.
ಇದು 1961ರ ಹೆರಿಗೆ ಅನುಕೂಲತೆಗಳ ಕಾಯ್ದೆಯ ಮೇಲೆ ಈ ತಿದ್ದುಪಡಿ ಸಹಜವಾಗಿಯೇ ಪರಿಣಾಮ ಬೀರುತ್ತದೆ.ಇದು ಮಹಿಳೆಯರಿಗೆ ಹೆರಿಗೆ ಅವಧಿಯಲ್ಲಿ ಅತಿಹೆಚ್ಚು ರಜೆಯನ್ನು ನೀಡುವ ಪ್ರಪಂಚದ 16ದೇಶಗಳ ಪೈಕಿ ಭಾರತವನ್ನು ಉನ್ನತ ಸ್ಥಾನದಲ್ಲಿ ಕೂರಿಸುತ್ತದೆ.ದರಿಂದಾಗಿ ಖಾಸಗಿ ವಲಯದ ಪ್ರಗತಿಶೀಲ ನೀತಿಗಳುಳ್ಳ ಕಂಪೆನಿಗಳು ತಮ್ಮಸಂಸ್ಥೆಗಳಲ್ಲಿ ಉದ್ಯೋಗಿ ಗಳನ್ನು ಆಕರ್ಷಿಸಲು ಇನ್ನೂ ಹೆಚ್ಚು ಕುಟುಂಬ ಸ್ನೇಹಿಯಾದ ಮಾನವ ಸಂಪನ್ಮೂಲ ನೀತಿಗಳನ್ನು ಆಚರಣೆಗೆ ತರಬಹುದು. ಈಗಾಗಲೇ ಫ್ಲಿಪ್‌ಕಾರ್ಟ್, ಗೊದ್ರೇಜ್, ಐಸಿಐಸಿಐ ಮತ್ತು ಆಕ್ಸೆಂಚರ್‌ನಂತಹ ಕಂಪೆನಿಗಳು 5-6ತಿಂಗಳ ಹೆರಿಗೆ ರಜೆಯನ್ನು ನೀಡುತ್ತಿವೆ.ದರೆ, ಈ ಬಗ್ಗೆ ಆರಂಭದ ಖುಷಿಯ ನಂತರ ಕೆಲವು ಕೈಗಾರಿಕಾ ವೃತ್ತಿಪರರು ಇದಕ್ಕೆ ಆಕ್ಷೇಪಣೆಯ ಧ್ವನಿಯನ್ನು ಎತ್ತಿದ್ದಾರೆ. ಅದೆಂದರೆ: ಒಬ್ಬ ಉದ್ಯೋಗಸ್ಥೆ 26 ವಾರಗಳು ಅಥವಾ ಆರೂವರೆ ತಿಂಗಳು ಸತತವಾಗಿ ತನ್ನ ಕಾರ್ಯಜವಾಬ್ದಾರಿಗಳಿಂದ ದೂರವಿರುವುದು ಅನೇಕ ಸಣ್ಣಪುಟ್ಟ ಸಾಹಸೋದ್ಯಮಗಳಲ್ಲಿ ತೀವ್ರ ಒತ್ತಡವನ್ನು ಸೃಷ್ಟಿಸುತ್ತದೆಯಲ್ಲವೇ? ಮತ್ತು ಆ ಉದ್ಯೋಗ್ಯಸ್ಥೆಗೂ ಮತ್ತೆ ಕೆಲಸದಲ್ಲಿ ಹೊಂದಿಕೊಳ್ಳಲು ಕಷ್ಟವಾಗುವುದಿಲ್ಲವೇ? ಅಲ್ಲದೆ ಇಂಥ ಯಾವ ಕಾನೂನಾತ್ಮಕ ಹೆರಿಗೆ ರಜೆಯನ್ನು ಕೇಳಲೂ ಅವಕಾಶವಿಲ್ಲದ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಪಾಡೇನು?
ಬೇಕಾಗಿದೆ: ಪಿತೃತ್ವ ರಜೆ
ಕೆಲವು ಕಂಪೆನಿಗಳು ಈ ಉದ್ದೇಶಿತ ನೀತಿಯ ಬಗ್ಗೆ ಹೆಚ್ಚು ಋಣಾತ್ಮಕವಾಗಿ ಯೋಚಿಸದೆ, ತಮ್ಮ ಮಂಡಲಿಗಳಲ್ಲಿ ಧನಾತ್ಮಕವಾಗಿಯೇ ನಿರ್ಧಾರ ತಗೆದುಕೊಂಡಿವೆ. ಮತ್ತು ಒಂದು ಕುಟುಂಬದಲ್ಲಿ ಒಬ್ಬರಿಗೆ ಆರು ತಿಂಗಳ ವೇತನ ಸಹಿತ ರಜೆ ನೀಡುವ ಬದಲು ಕುಟುಂಬದ ವಿಷಯದಲ್ಲಿ ವರ್ತನಾತ್ಮಕ ಬದಲಾವಣೆ ತರುವ ದಿಕ್ಕಿನಲ್ಲಿ ಕಂಪೆನಿಗಳು ಮತ್ತು ಸರಕಾರ ಯೋಚಿಸಬೇಕೆಂದು ಹೇಳಿವೆ.
‘‘ಪೋಷಕರು ಪೋಷಕತ್ವದ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಶಿಶುಪಾಲನಾ ರಜೆಯ ಯೋಚನಾ ಕ್ರಮದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಬೇಕಿದೆ. ಗಂಡಸರಿಗೂ ಮನೆ ಮತ್ತು ಶಿಶುಪೋಷಣೆಯ ಹೊಣೆಗಾರಿಕೆಯಲ್ಲಿ ಪಾಲಿದೆ ಎಂಬುದನ್ನು ತೋರಿಸಿಕೊಡಬೇಕಿದೆ ಎಂದು ಕುಟುಂಬ ಮತ್ತು ಶಿಶುಪಾಲನೆಯ ಹೊಣೆಗಾರಿಕೆಯಲ್ಲಿ ಹೆರಿಗೆ ರಜೆ ಇದ್ದಂತೆ ಪಿತೃತ್ವ ರಜೆ ನೀಡುವುದನ್ನು ಬೆಂಬಲಿಸುವ ಚಾಹಲ್ ಹೇಳುತ್ತಾರೆ.ರ ಅಂತಾರಾಷ್ಟ್ರೀಯ ಕೆಲಸಗಾರರ ಸಂಘಟನೆಯ ಪ್ರಕಾರ ಈಗಾಗಲೇ ಜಗತ್ತಿನ 78 ರಾಷ್ಟ್ರಗಳು ಶಿಶು ಪೋಷಣೆಯಲ್ಲಿ ತಂದೆಯ ಹೊಣೆಗಾರಿಕೆಯನ್ನು ಮನಗಂಡು ಪಿತೃತ್ವ ರಜೆಯನ್ನು ಆಚರಣೆಗೆ ತಂದಿವೆ. ಇದರಲ್ಲಿ 70 ರಾಷ್ಟ್ರಗಳು ವೇತನ ಸಹಿತ ರಜೆ ನೀಡುತ್ತಿವೆ. ಬಹುಪಾಲು ರಾಷ್ಟ್ರಗಳಲ್ಲಿ ಎರಡು ವಾರಗಳಿಗಿಂತ ಕಡಿಮೆ ಅವಧಿಯ ಪಿತೃತ್ವ ರಜೆ ನೀಡುತ್ತಿವೆ. ಸ್ವೀಡನ್‌ನ ವರದಿಯ ಪ್ರಕಾರ ಅಲ್ಲಿ ನೀಡಲಾಗುವ 16ತಿಂಗಳ ಪೋಷಕರ ರಜೆಯಲ್ಲಿ ಎರಡು ತಿಂಗಳು ರಜೆಯನ್ನು ಪಿತೃತ್ವರಜೆಯನ್ನಾಗಿ ಪಡೆಯಬಹುದಾಗಿದೆ. ಇದರ ಆಧಾರದಲ್ಲಿ ಹೇಳುವುದೇನೆಂದರೆ ಪ್ರತೀ ತಿಂಗಳು ಕೆಲವು ದಿನ ತಂದೆ ಪಿತೃತ್ವ ರಜೆಯನ್ನು ಪಡೆಯುವುದರಿಂದ ನಾಲ್ಕು ವರ್ಷಗಳ ನಂತರ ತಾಯಿಯ ಆದಾಯ ಶೇ. 6.7 ಹೆಚ್ಚಳವಾಗುತ್ತದೆ.ಪಿತೃತ್ವ ರಜೆಯನ್ನು ಜಾರಿಗೊಳಿಸುವ ಮೂಲಕ ಕನಿಷ್ಠ ಒಂದು ಆರೋಗ್ಯಕರ ಪರಿಸರವ್ಯೆಹವನ್ನು ಸೃಷ್ಟಿಸಲು ಮತ್ತು ಪೋಷಕರ ರಜೆಯನ್ನು ಸಾರ್ಥಕಗೊಳಿಸಲು ಸಹಾಯವಾಗುತ್ತದೆ. ಈ ಪರಿಸರವ್ಯೆಹದಲ್ಲಿ ಒಂದಷ್ಟು ಉತ್ತಮ ಶಿಶುಪಾಲನಾ ಕೇಂದ್ರಗಳು ಮತ್ತು ಅಂತಹ ಶಿಶು ಪೋಷಕ ಪ್ರಮಾಣ ಪತ್ರ ಹೊಂದುವ ಸಾಮಾಜಿಕ ಭದ್ರತೆಯ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಚಾಹಲ್ ಹೇಳುತ್ತಾರೆ. ಲಕ್ಷಾಂತರ ಜನ ಹೊರಗಿದ್ದಾರೆ:
ಈಗ ಮಂಡಿಸಲ್ಪಟ್ಟಿರುವ ಮೇನಕಾ ಗಾಂಧಿಯವರ ಪ್ರಸ್ತಾಪವು ಖಾಸಗಿ ವಲಯದ ಉದ್ಯೋಗಿಗಳಿಗೆ ಇರುವ 12 ವಾರಗಳ ರಜೆಯನ್ನು 26 ವಾರಗಳಿಗೆ ವಿಸ್ತರಿಸುತ್ತದೆ. ಆದರೆ ಈಗಿರುವ ಹೆರಿಗೆ ರಜೆ ಕಾಯ್ದೆ ಸಾರ್ವಜನಿಕ ವಲಯದಲ್ಲಿ 12 ವಾರ ಮಾತ್ರವಿದ್ದು, ಇದು ಹೆರಿಗೆ ಪೂರ್ವದಲ್ಲಿ ಆರು ವಾರಗಳು ಮತ್ತು ನಂತರದಲ್ಲಿ ಆರು ವಾರಗಳನ್ನು ಬಳಸಬಹುದಾಗಿದೆ.
""C
ಆದರೆ ‘‘ಸಾರ್ವಜನಿಕ ವಲಯದ ಕೇಂದ್ರ ಸರಕಾರಿ ನೌಕರರು ಸಹ ಆರು ತಿಂಗಳ ಹೆರಿಗೆ ರಜೆಯನ್ನು ಪಡೆಯಬಹುದಾಗಿದೆ ಎಂದು ದಿಲ್ಲಿಯ ಆರೋಗ್ಯ ಹಕ್ಕುಗಳ ಕಾರ್ಯಕರ್ತೆ ದೀಪಾ ಸಿನ್ಹಾ ಹೇಳುತ್ತಾರೆ.ದೆಲ್ಲಾ ಸರಿ, ಆದರೆ ಇಲ್ಲಿ ಮನೆ ಕೆಲಸದವರು, ಮಹಿಳಾ ಕೃಷಿ ಕಾರ್ಮಿಕರು ಮತ್ತು ಕಟ್ಟಡ ಕೆಲಸಗಾರರೇ ಮೊದಲಾದ, ನಿಜಕ್ಕೂ ಈ ಸೌಲಭ್ಯದ ಅಗತ್ಯವಿರುವ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಖ್ಯಾತ ಸ್ತ್ರೀಯರು ಈ ಸೌಲಭ್ಯದಿಂದ ಹೊರಗಿದ್ದಾರೆ. 2010ರಲ್ಲಿ ಕೇಂದ್ರ ಸರಕಾರವು ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆಯಡಿಯಲ್ಲಿ ಇವರನ್ನೂ ಸೇರಿಸುವ ಪ್ರಯತ್ನ ಮಾಡಿದೆ. ಯೋಜನೆಯು ಈಗ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿದ್ದು ಇದು ಆರು ವಾರಗಳ ಹೆರಿಗೆ ರಜೆ ನೀಡುವುದನ್ನು ಅನುಮೋದಿಸುತ್ತದೆ ಮತ್ತು ಷರತ್ತಿಗೊಳಪಟ್ಟು ಮೊದಲ ಎರಡು ಮಕ್ಕಳಿಗೆ ಮಾತ್ರ ಗರ್ಭಿಣಿಯ ಮತ್ತು ಹಾಲೂಡಿಸುವ ಅವಧಿಯಲ್ಲಿ 6,000 ರೂ.ಗಳನ್ನು ನೀಡುವ ಕಾರ್ಯಕ್ರಮ ಈ ಯೋಜನೆಯಲ್ಲಿದೆ. ಈ ನಗದು ಪರಿಹಾರಕ್ಕೆ ಅರ್ಹರಾಗಬೇಕಾದರೆ ಆ ಹೆಣ್ಣು ಮಗಳು ತಾನು ಗರ್ಭಿಣಿಯಾದಾಗ ಮತ್ತು ಪ್ರಸವವಾದ ನಂತರ ಅದನ್ನು ಸ್ಥಳೀಯ ಅಂಗನವಾಡಿಯಲ್ಲಿ ನೋಂದಾಯಿಸಬೇಕು. ಮೊದಲ ಆರು ತಿಂಗಳು ಶಿಶು ಪೋಷಣೆ ಅದರಲ್ಲೂ ಮುಖ್ಯವಾಗಿ ಮೊಲೆಹಾಲೂಡಿಸುವ ಸಮಾಲೋಚನಾ ಸಭೆಗಳಿಗೆ ಆಕೆ ಹಾಜರಾಗಬೇಕಾಗುತ್ತದೆ.ಳೆದ ವರ್ಷ ಈ ಯೋಜನೆಯನ್ನು ಪ್ರಾಯೋಗಿಕವಾಗಿ ದೇಶದ 58 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಯಿತು, ಆದರೆ ಇದರಲ್ಲಿ ತುಂಬಾ ವಿಳಂಬವಾಗುತ್ತದೆ. ಹೀಗಾಗಿ 2015ರ ಎಪ್ರಿಲ್‌ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನೇಕ ಅಂಶಗಳನ್ನು ಜಾರಿಗೊಳಿಸದಿರುವ ಬಗ್ಗೆ ಮತ್ತು ಅರ್ಹ ತಾಯಂದಿರಿಗೆ ನಗದು ಪರಿಹಾರ ನೀಡುವಲ್ಲಿ ಮಾಡುತ್ತಿರುವ ವಿಳಂಬಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.ಲ್ಲಿರುವ ಅವಕಾಶಗಳಲ್ಲಿ ತುಂಬಾ ತೊಂದರೆಗಳಿವೆ. ಅವರು ಕೊಡುವ 6,000 ರೂ. ತರ್ಕವಿಲ್ಲದ್ದು ಮತ್ತು ಅವಳ ಆವಧಿಯ ದುಡಿಮೆಗೆ ಹೋಲಿಸಿದರೆ ಅದು ಯಾವುದಕ್ಕೂ ಸಾಲುವುದಿಲ್ಲ. ಅತ್ತ ನೋಡಿದರೆ ಖಾಸಗಿ ವಲಯದ ಕೆಲಸಗಾರರಿಗೆ 6ತಿಂಗಳ ರಜೆ! ಇತ್ತ ಈ ಅಸಂಘಟಿತ ಜನಕ್ಕೆ ಆರು ವಾರಗಳ ರಜೆ!! ಹಾಗೆ ನೋಡಿದರೆ ಈ ಕೃಷಿ ಮತ್ತು ಕಟ್ಟಡ ನಿರ್ಮಾಣದಲ್ಲಿ ದುಡಿಯುವ ಹೆಂಗಸರಿಗೆ ಹೆಚ್ಚಿನ ಬಿಡುವು ಬೇಕಾಗುತ್ತದೆ ಎಂದು ಸಿನ್ಹಾ ಹೇಳುತ್ತಾರೆ.
ತಾಳಿಕೊಳ್ಳಬಹುದಾದ ಗೈರುಹಾಜರಿಯೇ?
‘‘ಮಹಿಳೆಯರಿಗೆ 26 ವಾರಗಳ ಸಂಬಳ ಸಹಿತ ರಜೆ ಕೊಡುವುದೇನೋ ಅದ್ಭುತ! ಈ ದಿಟ್ಟನಿಲುವು ಮಹಿಳಾ ವಲಯಕ್ಕೆ ಒಳ್ಳೆಯ ಸಂದೇಶವನ್ನೇ ನೀಡಿದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಈ ಆರು ತಿಂಗಳು ಒಬ್ಬರ ವೃತ್ತಿ ಬದುಕಿನಲ್ಲಿ ತುಂಬಾ ದೀರ್ಘವಾದ ಅವಧಿ ಎಂದು ಮಹಿಳಾ ಸ್ನೇಹಿ ಕಂಪೆನಿಗಳಲ್ಲಿ ಮಹಿಳೆಯರಿಗೆ ಉದ್ಯೋಗ ಕೊಡಿಸುವ ಕಾರ್ಯದಲ್ಲಿ ನಿರತವಾಗಿರುವ ಶಿರೋಸ್.ಇನ್ ವೇದಿಕೆಯ ಸಂಸ್ಥಾಪಕಿಯಾದ ಶಾಯರಿ ಚಾಹಲ್ ಹೇಳುತ್ತಾರೆ. ‘‘ಈಗ ನೀಡಲಾಗುತ್ತಿರುವ ಮೂರು ತಿಂಗಳ ರಜೆ ಅವಧಿ ನಂತರ ತನ್ನ ವೃತ್ತಿ ಕ್ಷೇತ್ರಕ್ಕೆ ಹಿಂದಿರುಗಿದ ಮಹಿಳೆ ಮತ್ತೆ ಅಲ್ಲಿಗೆ ಹೊಂದಿಕೊಳ್ಳುವಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಇದು ಆಕೆಯ ವೃತ್ತಿ ಬದುಕಿನ ನಕಾಶೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಭಾರತದಲ್ಲಿ ಶೇ. 48ರಷ್ಟು ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಂದ ಮಧ್ಯಾವಧಿಯಲ್ಲೇ ವೃತ್ತಿಯಿಂದ ಹೊರಹೋಗುತ್ತಿದ್ದಾರೆ. ಈ ಹೆರಿಗೆ ರಜೆಯಿಂದ ಹಿಂದಿರುಗಿದ ಮಹಿಳೆಯರು ತಮ್ಮ ತಾಯ್ತನದ ಜವಾಬ್ದಾರಿಗಳನ್ನು ಪೂರೈಸಲು (ಮಗುವಿನ ಬಗ್ಗೆ ಕಾಳಜಿ ವಹಿಸಲು) ಮತ್ತೆ ಮತ್ತೆ ರಜೆ ಪಡೆಯಬೇಕಾಗುತ್ತದೆ. ಇದರಿಂದಾಗಿ ಭಡ್ತಿಯೇ ಮೊದಲಾದ ಅನೇಕ ಸೌಲಭ್ಯಗಳಿಂದ ಇಂತಹವರು ದೂರವಾಗುತ್ತಿರುವುದು ಸದ್ಯದ ಪರಿಸ್ಥಿತಿ.
ವ್ಯಕ್ತಿ ಆಧಾರಿತ ಜವಾಬ್ಧಾರಿಗಳನ್ನು ಹೊತ್ತಿರುವ ಅನೇಕ ಉದ್ಯೋಗಗಳಲ್ಲಿ ಆಗಿನ 14 ವಾರಗಳ ಹೆರಿಗೆ ರಜೆಯಿಂದ ಹಿಂದಿರುಗಿದ ಮಹಿಳೆಯರು ಸಹ ಮತ್ತೆ ಗ್ರಾಹಕರೊಂದಿಗೆ ಆ ಸಂಬಂಧವನ್ನು ಮರುಸ್ಥಾಪಿಸಲಾಗದ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಇಂತಹವರನ್ನು ಮರಳಿ ಕರೆದುಕೊಳ್ಳಲು ಕಂಪೆನಿಗಳು ಸಹ ಹಿಂಜರಿಯುತ್ತಿವೆ.
‘‘ಒಬ್ಬ ಉದ್ಯೋಗಿಯ ಆರು ತಿಂಗಳ ಗೈರುಹಾಜರಿಯಲ್ಲಿ ಅದೇ ಕೆಲಸವನ್ನು ಇನ್ನೊಬ್ಬ ಉದ್ಯೋಗಿ ಮಾಡಬಹುದು ಎಂಬುದು ಅವರ ಅರಿವಿಗೆ ಬಂದಮೇಲೆ ಆ ಹಳೆಯ ಉದ್ಯೋಗಿಯೇ ಏಕೆ ಬೇಕು? ಎಂದು ಯೋಚಿಸುವ ಸಾಧ್ಯತೆ ಇರುತ್ತದೆಯಲ್ಲವೇ? ಕಡಿಮೆ ಉದ್ಯೋಗಿಗಳಿರುವ ಸಣ್ಣ ಕಂಪೆನಿಗಳಿಗೆ ಹೀಗೆ ಅನಿಸಿದರೆ ಅದು ತಪ್ಪೇನಲ್ಲ!! ಹೀಗೆಂದು, ಹೆಸರು ಹೇಳಲಿಚ್ಛಿಸದ ದಿಲ್ಲಿ ಮೂಲಕ ಮಾನವ ಸಂಪನ್ಮೂಲ ವೃತ್ತಿಪರರೊಬ್ಬರು ಹೇಳುತ್ತಾರೆ.