varthabharthi


ಫೋಕಸ್

‘ಟ್ಯಾಲೆಂಟ್’ ಸೇವಾ ಉತ್ಸವದಲ್ಲಿ ಗಮನಸೆಳೆದ ಸುಧಾರತ್ನಾ

ವಾರ್ತಾ ಭಾರತಿ : 16 Jan, 2016

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವ ಕಾರ್ಯಕ್ರಮ ‘ಸೇವಾ ಉತ್ಸವ-2016’ ಅಂಗವಾಗಿ ಇಂದು ಮಂಗಳೂರಿನ ಪುರಭವನದಲ್ಲಿ ನಡೆದ ವಿಕಲಚೇತನರಿಗೆ ಸ್ಫೂರ್ತಿ ನೀಡುವ ‘ಸ್ವಾಭಿಮಾನ್’ ಕಾರ್ಯಕ್ರಮದಲ್ಲಿ ವಿಶೇಷ ಗಮನಸೆಳೆದವರು ಸುಧಾರತ್ನಾ ಕೆ.ಎಸ್.
ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯ ಸಮೀಪ ವಿಕಲಚೇತನರಾಗಿರುವ ಸುಧಾರತ್ನಾ ಕುಂಚ ಕೈಗೆತ್ತಿಕೊಂಡು ಚಿತ್ರ ಬಿಡಿಸಲಾರಂಭಿಸಿದರು. ನೋಡನೋಡುತ್ತಿದ್ದಂತೆಯೇ ರಮಣೀಯ ಪ್ರಕೃತಿಯ ಸೊಬಗನ್ನು ಕ್ಯಾನ್ವಾಸ್‌ನಲ್ಲಿ ಬಿಡಿಸಿದರು. ಅದನ್ನು ಬಣ್ಣಗಳಿಂದ ತುಂಬಿದರು. ವಿಶೇಷವೆಂದರ ಅವರ ಕೈಗಳಿಗೆ ಸಮಸ್ಯೆಯಿದೆ. ಅವರು ಕೈಗಳು ಭಾಗಶಃ ಸ್ವಾಧೀನವನ್ನು ಕಳೆದುಕೊಂಡಿವೆ. ಆದರೆ ಅವರ ಸಾಧನೆ ಇದು ಅಡ್ಡಿಯಾಗಿಲ್ಲ. ಅವರ ಕೈಯಲ್ಲಿ ಅರಳಿದ ಆ ಸುಂದರ ಪ್ರಕೃತಿಯ ಚಿತ್ರವನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಓರ್ವರ ಒಂದು ಸಾವಿರ ರೂ. ಖರೀದಿಸಿದರು.
ಸುಧರತ್ನಾ ಕೆ.ಎಸ್. ಅವರು ವಾಮಂಜೂರಿನ ಮಂಗಳಜ್ಯೋತಿ ಸಮಗ್ರ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)