Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬಾಬರಿ ಮಸೀದಿ ಧ್ವಂಸ ಪೇಜಾವರ ಶ್ರೀಗಳ...

ಬಾಬರಿ ಮಸೀದಿ ಧ್ವಂಸ ಪೇಜಾವರ ಶ್ರೀಗಳ ಹೊಣೆಗಾರಿಕೆ

ಜಿ.ರಾಜಶೇಖರಜಿ.ರಾಜಶೇಖರ20 Jan 2016 11:10 PM IST
share
ಬಾಬರಿ ಮಸೀದಿ ಧ್ವಂಸ ಪೇಜಾವರ ಶ್ರೀಗಳ ಹೊಣೆಗಾರಿಕೆ

ಪ್ರಿಯರೆ,
1) ಪತ್ರಿಕೆಯ ತಾ: 18-01-2016ರ ಸಂಚಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಸಂದರ್ಶನದಲ್ಲಿ ಪೇಜಾವರ ಶ್ರೀಗಳು, ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ಕುರಿತು ಪ್ರಸ್ತಾಪಿಸುತ್ತಾ ‘‘ಮಸೀದಿಯನ್ನು ಇಟ್ಟುಕೊಂಡೇ ಮಂದಿರ ಮಾಡಬೇಕು ಎಂಬುದು ತಮ್ಮ ಅಭಿಪ್ರಾಯವಾಗಿತ್ತು’’ ಎಂದು ಹೇಳಿದ್ದಾರೆ. 1992 ಡಿಸೆಂಬರ್ 6ರ ಹಗಲು, ಬಾಬರಿ ಮಸೀದಿ ಉರುಳುತ್ತಿದ್ದಾಗ, ಪೇಜಾವರ ಶ್ರೀಗಳು ಸ್ಥಳದಲ್ಲಿ ಹಾಜರಿದ್ದರು. ಶ್ರೀಗಳು ಕಳೆದ ಹಲವು ದಶಕಗಳಿಂದ ಈ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದ ವಿಹಿಂಪ ನೇತಾರರಲ್ಲಿ ಒಬ್ಬರಾಗಿದ್ದು, ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದ ರಾಮಜನ್ಮಭೂಮಿ ಚಳವಳಿಯನ್ನು ಮುನ್ನಡೆಸಿದವರಲ್ಲಿಯೂ ಪ್ರಮುಖರು. ಸಹಜವಾಗಿಯೇ 1992ರ ಡಿಸೆಂಬರ್ 6ರಂದು, ವಿಹಿಂಪ ಮತ್ತು ಅದರ ಸಹ ಸಂಘಟನೆಯಾದ ಬಿಜೆಪಿಯ ಹೆಚ್ಚಿನ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು, ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಎದುರು ಹಾಜರಿದ್ದರು. ಬಾಬರಿ ಮಸೀದಿ ಧ್ವಂಸ ಸಾವಿರಾರು ಜನ ಭಾಗವಹಿಸಿದ ಒಂದು ಚಳವಳಿಯ ಕಾರ್ಯಕ್ರಮವಾಗಿದ್ದು, ಆ ಚಳವಳಿಯ ನಾಯಕರಾಗಿರುವ ಪೇಜಾವರ ಶ್ರೀಗಳು ಆ ದುರ್ಘಟನೆಗೆ ತಮ್ಮ ಸಾಮೂಹಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾರರು. ಬಾಬರಿ ಮಸೀದಿಯ ಧ್ವಂಸಕ್ಕೆ ಪೇಜಾವರ ಶ್ರೀಗಳು ಮಾತ್ರ ಹೊಣೆಗಾರರು ಎಂಬುದು ಯಾರ ಆಪಾದನೆಯೂ ಅಲ್ಲ. ಆ ಘಟನೆಗೆ ಕಾರಣವಾದ ವಿಹಿಂಪದ ನಾಯಕವರೇಣ್ಯರಲ್ಲಿ ಪೇಜಾವರ ಶ್ರೀಗಳೂ ಒಬ್ಬರಾಗಿರುವುದರಿಂದ ಘಟನೆಗೆ ಅವರು ಖಂಡಿತ ಉತ್ತರದಾಯಿಗಳಾಗುತ್ತಾರೆ.
 2) ಬಾಬರಿ ಮಸೀದಿ ಧ್ವಂಸ, ದೇಶದಲ್ಲಿ ಮುಸ್ಲಿಮರ ಮೇಲೆ ಹಿಂದುತ್ವವಾದಿಗಳ ಸಂಘಟಿತ ಹಿಂಸಾಚಾರದ ಒಂದು ಸುದೀರ್ಘ ಸರಣಿಯನ್ನೇ ಪ್ರಾರಂಭಿಸಿತು. 1992-93ರ ಮುಂಬೈ ಶಹರದ ಕೋಮು ಹಿಂಸೆಯಿಂದ ಗುಜರಾತ್ 2002ರ ವರೆಗೆ ಮತ್ತು ಆನಂತರವೂ ಮುಂದುವರಿದ ಹಿಂಸಾಕಾಂಡದಲ್ಲಿ ಮುಸ್ಲಿಮ್ ಸಮುದಾಯ ಅತಿ ಹೆಚ್ಚು ಸಾವು ನೋವು ಅನುಭವಿಸಿದೆ. ಹಾಗಾಗಿ ಬಾಬರಿ ಮಸೀದಿ ಧ್ವಂಸ ಒಂದು ಬಿಡಿ ಘಟನೆ ಅಲ್ಲ; ಅದು ಒಂದು ರಾಜಕೀಯ ಪ್ರಕ್ರಿಯೆ. ಅದು ಈಗಲೂ ನಿಲುಗಡೆಗೆ ಬಂದಿಲ್ಲ. ಹಿಂದುತ್ವವಾದಿಗಳ ದ್ವೇಷಕ್ಕೆ ಮುಸ್ಲಿಮರು ಮಾತ್ರ ಬಲಿಯಾಗುತ್ತಿರುವುದೂ ಅಲ್ಲ. 2008ರಲ್ಲಿ ಒರಿಸ್ಸಾದ ಬಡಪಾಯಿ ಆದಿವಾಸಿ ಕ್ರೈಸ್ತರ ಮೇಲೆ, ಹಿಂದುತ್ವವಾದಿಗಳು ಭಾರೀ ಪ್ರಮಾಣದ ಸಂಘಟಿತ ಹಿಂಸಾಚಾರ ನಡೆಸಿದರು. ಮತಾಂತರದ ಆರೋಪ ಹೊರಿಸಿ, ಕ್ರೈಸ್ತರನ್ನು ಸಾರಾಸಗಟಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವರ ದ್ವೇಷದ ರಾಜಕೀಯ ಈಗಲೂ ಮುಂದುವರಿದಿದೆ. ಮುಸ್ಲಿಮರು ಮತ್ತು ಕ್ರೈಸ್ತರ ಜೊತೆಗೆ, ಹಿಂದುಗಳಲ್ಲೇ, ವಿಹಿಂಪ, ಆರೆಸ್ಸೆಸ್, ಬಿಜೆಪಿ ಮತ್ತಿತರ ಸಂಘಪರಿವಾರದ ಚಟುವಟಿಕೆಗಳನ್ನು ಪ್ರಜಾಸತ್ತಾತ್ಮಕವಾಗಿ ವಿರೋಧಿಸುವ ಕಲಾವಿದರು, ಲೇಖಕರು ಮತ್ತು ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹ ಹಿಂದುತ್ವವಾದಿಗಳ ಅಪಪ್ರಚಾರ ಮತ್ತು ಒಮ್ಮಾಮ್ಮೆ ನೇರ ಹಿಂಸೆಗೂ ಗುರಿಯಾಗುತ್ತಿದ್ದಾರೆ. ಈ ರಾಜಕೀಯ ಪ್ರಕ್ರಿಯೆ, ಯಾರೊಬ್ಬನ ವೈಯಕ್ತಿಕ ಸಂಕಲ್ಪದಿಂದಲೂ ಶುರುವಿಟ್ಟುಕೊಂಡದ್ದಲ್ಲ. ಇದು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಸಹಭಾಗಿ ಸಂಘಟನೆಗಳ ರಾಜಕೀಯ ಕಾರ್ಯಕ್ರಮವಾಗಿದ್ದು, ಆ ಸಂಘಟನೆಗಳ ನಾಯಕರು, ಆ ಕಾರ್ಯಕ್ರಮದ ಒಳಿತು ಕೆಡುಕಿಗಳಿಗೆಲ್ಲ ಬಾಧ್ಯರಾಗಿರುತ್ತಾರೆ. ಹಾಗಾಗಿ ಬಾಬರಿ ಮಸೀದಿ ಧ್ವಂಸದಲ್ಲಿ ತಮ್ಮ ಪಾತ್ರದ ಕುರಿತು ಪೇಜಾವರ ಶ್ರೀಗಳು ನೀಡುವ ವಿವರಣೆಯನ್ನು ಒಪ್ಪಲಾಗದು.
3) ತಮ್ಮ ಸಂದರ್ಶನದಲ್ಲಿ ಪೇಜಾವರ ಶ್ರೀಗಳು ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತುಗಳ ಬಗ್ಗೆ ಹೇಳಿದ್ದಾರೆ. ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಅವರು ಈ ಮಾತನ್ನು ಹೇಳಿದ್ದುಂಟು. ‘ಮುಸ್ಲಿಮರ ತುಷ್ಟೀಕರಣ’ದ ಬಗ್ಗೆಯೂ ಅವರು ಪದೇ ಪದೇ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೇಶದಲ್ಲಿ ಅಲ್ಪಸಂಖ್ಯಾತರು- ಅದರಲ್ಲೂ ವಿಶೇಷವಾಗಿ ಮುಸ್ಲಿಮರು, ಶಿಕ್ಷಣ, ಉದ್ಯೋಗ, ಮತ್ತಿತರ ಎಲ್ಲ ಆರ್ಥಿಕ, ಸಾಮಾಜಿಕ ಅವಕಾಶಗಳಿಂದಲೂ ವಂಚಿತರಾಗಿರುವುದು ನಮಗೆಲ್ಲರಿಗೂ ಅನುಭವಕ್ಕೆ ಬಂದಿರುವ ಸತ್ಯ. ಸಾಚಾರ್ ಸಮಿತಿಯ ಮುಸ್ಲಿಮರ ಸ್ಥಿತಿಗತಿಗಳ ಅಧಿಕೃತ ವರದಿ ಕೂಡಾ ಅದನ್ನೇ ದೃಢಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೆ ಅದರಲ್ಲೂ ‘ತುಷ್ಟೀಕೃತ’ ಮುಸ್ಲಿಮರಿಗೆ ಸಿಗುವ ವಿಶೇಷ ಸವಲತ್ತುಗಳು ಯಾವುವು ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಬೇಕು.
4) ಪಂಕ್ತಿಭೇದಕ್ಕೆ ಸಂಬಂಧಿಸಿ ಪೇಜಾವರ ಶ್ರೀಗಳು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಕೂಡ ಪ್ರಗತಿಶೀಲರಿಗೆ ಭಿನ್ನ ಮತವಿದೆ. ಉಡುಪಿಯ ಕೃಷ್ಣ ಮಠದಲ್ಲಿ ಈಗಲೂ ಅಪರೋಕ್ಷವಾಗಿ ಊಟದಲ್ಲಿ ಪಂಕ್ತಿಭೇದ ಚಾಲ್ತಿಯಲ್ಲಿದೆ. ಅಲ್ಲಿ ಬ್ರಾಹ್ಮಣರಿಗೆ ಮಾತ್ರ ಮೀಸಲಾದ ಒಂದು ಪಂಕ್ತಿಯ ಏರ್ಪಾಡು ಇದ್ದು ಜೊತೆಗೆ ಬ್ರಾಹ್ಮಣರೂ ಸೇರಿದಂತೆ ಸಕಲ ಜಾತಿಯವರಿಗೂ ಒಟ್ಟಿಗೇ ಊಟ ಬಡಿಸುವ ವ್ಯವಸ್ಥೆಯೂ ಇದೆ. ಅಂದರೆ ಊಟದ ಮಟ್ಟಿಗೆ ಉಡುಪಿಯ ಕೃಷ್ಣ ಮಠದಲ್ಲಿ ‘ಎಲ್ಲರೂ ಸಮಾನರು; ಕೆಲವರು ಹೆಚ್ಚು ಸಮಾನರು’. ಮಠ ಒಂದು ಸಾರ್ವಜನಿಕ ಸ್ಥಳವಾಗಿದ್ದು ಅಲ್ಲಿ ಯಾವುದೇ ತರಹದ ತಾರತಮ್ಯವು ಸಂವಿಧಾನ ವಿರೋಧಿಯಾಗುತ್ತದೆ. ಉಡುಪಿಯ ಕೃಷ್ಣಮಠ ರಾಷ್ಟ್ರೀಯ ಖ್ಯಾತಿ ಪಡೆದಿದ್ದು ಪಂಕ್ತಿಭೇದವನ್ನು ತೊಡೆದು ಹಾಕುವುದರಲ್ಲೂ ಇತರ ದೇವಾಲಯಗಳಿಗೆ ಮೇಲ್ಪಂಕ್ತಿ ಹಾಕಿ ಕೊಡಬೇಕು.

share
ಜಿ.ರಾಜಶೇಖರ
ಜಿ.ರಾಜಶೇಖರ
Next Story
X