ಹಬ್ಬ
ಹಳ್ಳಿಯಿಂದ ಮಗನ ನೋಡಲೆಂದು ಅಮ್ಮ ನಗರಕ್ಕೆ ಬಂದಿದ್ದಳು.
‘‘ಅಮ್ಮನನ್ನು ಫುಡ್ ಫೆಸ್ಟಿವಲ್‌ಗೆ ಕರೆದುಕೊಂಡು ಹೋಗೋಣ’’ ಮಗ ತನ್ನ ಪತ್ನಿಗೆ ಹೇಳಿದ.
‘‘ಹಾಗೆಂದರೆ ಏನಪ್ಪ?’’ ತಾಯಿ ಮಗನಲ್ಲಿ ಕೇಳಿದಳು.
‘‘ಆಹಾರದ ಹಬ್ಬ ಅಮ್ಮ. ಬಗೆ ಬಗೆಯ ಆಹಾರಗಳನ್ನು ಮಾಡಿಟ್ಟಿರುತ್ತಾರೆ ಅಮ್ಮ, ನಮಗೆ ಬೇಕಾದುದನ್ನು ತಿನ್ನಬಹುದು’’ ಮಗ ಹೇಳಿದ.
ಫುಡ್ ಫೆಸ್ಟಿವಲ್ ಮುಗಿಸಿ ಮನೆಗೆ ಬಂದ ಮಗ ಕೇಳಿದ ‘‘ಹೇಗಿತ್ತಮ್ಮ ಆಹಾರದ ಹಬ್ಬ?’’
‘‘ನಮ್ಮ ಕಾಲದಲ್ಲಿ ಹಸಿವಾದಾಗ ಆಹಾರ ಸಿಕ್ಕಿದರೆ ಅದೇ ಹಬ್ಬ. ಈಗ, ಆಹಾರವನ್ನು ಚೆಲ್ಲಾಡುವುದೇ ಹಬ್ಬ’’ ತಾಯಿ ನಿಟ್ಟುಸಿರಿಟ್ಟು ಹೇಳಿದರು.
-ಮಗು