ವಿಕ್ಟರ್ ರೆಬೆಲ್ಲೋ
ವಿಟ್ಲ : ನಿವೃತ್ತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿಕ್ಟರ್ ರೆಬೆಲ್ಲೋ (69) ಅವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು. ಮೂಡಬಿದಿರೆ ತಾಕೋಡೆ ನಿವಾಸಿಯಾಗಿದ್ದ ವಿಕ್ಟರ್ ರೆಬೆಲ್ಲೋ ಸುಮಾರು 36 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮಂಗಳೂರಿನ ಬಂದರು, ಬಿ.ಸಿ.ರೋಡು, ಉಡುಪಿ, ಪಣಂಬೂರು, ವಿಟ್ಲ ಮತ್ತು ಉಪ್ಪಿನಂಗಡಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ನಿವೃತ್ತಿಯ ಬಳಿಕ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಮಾದಕಟ್ಟೆಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story