ಹಾಜಿ ಜಿ.ಪಿ. ಮುಹಮ್ಮದ್
ಮಂಗಳೂರು, ಜ.27: ಅಡ್ಡೂರು ನಿವಾಸಿ, ಉದ್ಯಮಿ, ರಾಜಕೀಯ ಮುಖಂಡ ಹಾಜಿ ಜಿ.ಪಿ ಮುಹಮ್ಮದ್ ಬುಧವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಆರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಸುಮಾರು 10 ಗಂಟೆಗೆ ನಿಧನ ಹೊಂದಿದರು.
ಅವರು ಗುರುಪುರ ಗ್ರಾಪಂನ ಮಾಜಿ ಸದಸ್ಯ, ವಕ್ಫ್ ಬೋರ್ಡ್ನ ಮಾಜಿ ಸದಸ್ಯ, ಹಾಲಿ ಗುರುಪುರ ಬ್ಲಾಕ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಹಲವು ವರ್ಷಗಳಿಂದ ಅಡ್ಡೂರು ಜುಮಾ ಮಸೀದಿಯ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ ಇವರು, ಪ್ರಸ್ತುತ ಸಮಿತಿಯ ಮತ್ತು ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಸಲಹೆಗಾರರಾಗಿದ್ದರು. ಅಡ್ಡೂರಿನ ಸಹರಾ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಮೃತರ ಮಯ್ಯತ್ ನಮಾಝ್ ಗುರುವಾರ ಲುಹರ್ ನಮಾಝ್ನ ಮುನ್ನ ಅಡ್ಡೂರು ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.