ಇದು ಬಿಜೆಪಿಯ ಬಿರುಕಿನ ಕೈಗನ್ನಡಿಯೇ?
ರವಿವಾರದಂದು ಅಮಿತ್ ಶಾ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದಾಗ ಭಾರತೀಯ ಜನತಾ ಪಕ್ಷವು ಒಗ್ಗಟ್ಟಿನ ವೈಭವದ ಪ್ರದರ್ಶನ ನೀಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ, ಅದರ ಆಂತರಿಕ ಬಿರುಕುಗಳನ್ನು ಸಮಾರಂಭದಲ್ಲಿ ಮರೆಮಾಚುವುದು ಕಷ್ಟವಾಯಿತು.
ಬಿಜೆಪಿ ಅಧ್ಯಕ್ಷರನ್ನು ಅಭಿನಂದಿಸುವ ಸಮಾರಂಭಕ್ಕೆ ಬರಲು ಸಾಧ್ಯವಾಗದಿರುವವರಲ್ಲಿ ಪ್ರಮುಖ ಹೆಸರುಗಳೆಂದರೆ ಎಲ್. ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯವರದ್ದು, ಆದರೆ ಅದು ನಿರೀಕ್ಷಿತ. ಎಷ್ಟಾದರೂ ಎರಡು ವರ್ಷಗಳ ಹಿಂದೆ ಪಕ್ಷದ ಹೊಸ ನಾಯಕತ್ವದಿಂದ ಮೂಲೆಗುಂಪಾಗಿಸಲ್ಪಟ್ಟ ನಂತರ ಈ ಇಬ್ಬರು ಹಿರಿಯ ನಾಯಕರು ಅಸಮಾಧಾನ ಗೊಂಡು ವೌನಕ್ಕೆ ಜಾರಿದ್ದರು.
ಆದರೆ ಸಮಾರಂಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರ ಗೈರು ಅತ್ಯಂತ ಆಶ್ವರ್ಯಕರವಾಗಿತ್ತು, ಮುಖ್ಯವಾಗಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳುವಿಕೆಗೆ ಪ್ರಾತಿನಿಧ್ಯ ನೀಡಿದ್ದಾಗ. ಕೇವಲ ನಗರದಿಂದ ಹೊರಗಿದ್ದವರು ಮಾತ್ರ ಗೈರಾಗಿದ್ದರು; ಪ್ರಧಾನ ಮಂತ್ರಿಯವರು ಫ್ರಾನ್ಸ್ನ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಅವರನ್ನು ಸ್ವಾಗತಿಸಲು ಚಂಡೀಗಡಕ್ಕೆ ತೆರಳಿದ್ದರು ಮತ್ತು ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಹರೈನ್ನಲ್ಲಿದ್ದರು.
ಬಿಜೆಪಿಯ ವಕ್ತಾರ ಜೇಟ್ಲಿಯವರು ‘‘ಸ್ವಿಝರ್ಲ್ಯಾಂಡ್ನಿಂದ ಆಗಮಿಸುತ್ತಿದ್ದ ವಿಮಾನವು ವಿಳಂಬ ವಾದ ಕಾರಣ ಸಮಾರಂಭದಲ್ಲಿ ಹಾಜರಾಗಲು ಸಾಧ್ಯವಾಗಿಲ್ಲ’’ ಎಂದು ವಿವರಣೆ ನೀಡಿದರೂ, ಪಕ್ಷದ ಮುಖ್ಯಕಚೇರಿಯಲ್ಲಿ ಸಮಾರಂಭ ಆರಂಭವಾಗುವುದಕ್ಕೂ ಮುನ್ನ ಜೇಟ್ಲಿಯವರು ದಿಲ್ಲಿ ತಲುಪಿಯಾಗಿತ್ತು ಎಂದು ತಿಳಿದಿದೆ. ಜೇಟ್ಲಿಯವರು ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಡಾವೋಸ್ಗೆ ತೆರಳಿದ್ದರು.
ಅಹಿತಕರ ಸಂಬಂಧ
ಜೇಟ್ಲಿಯವರ ಬಳಿ ಬಿಜೆಪಿ ಅಧ್ಯಕ್ಷನ ಚುನಾವಣೆಯ ಸಮಯದಲ್ಲಿ ತಮ್ಮ ಗೈರನ್ನು ವಿವರಿಸಲು ಸಿದ್ಧ ಉತ್ತರವಿದ್ದರೂ, ಈ ಘಟನೆ ಪಕ್ಷದ ಆಂತರಿಕ ಸಂಬಂಧದ ಮೇಲೆ ಬೆಳಕು ಹರಿಸಿತ್ತು.
ಶಾ ಮತ್ತು ಜೇಟ್ಲಿ ಅಹಿತಕರ ಸಂಬಂಧವನ್ನು ಹೊಂದಿದ್ದಾರೆ. ಇದೆಲ್ಲವೂ ಆರಂಭವಾಗಿದ್ದು ಕಳೆದ ವರ್ಷದ ದಿಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, ಆಗ ಅಸಂತುಷ್ಟರಾಗಿದ್ದ ಶಾರನ್ನು ಬದಿಗೆ ಸರಿಸಿ ಪಕ್ಷದ ಚುನಾವಣಾ ಅಭಿಯಾನದ ಜವಾಬ್ದಾರಿಯನ್ನು ಜೇಟ್ಲಿಗೆ ನೀಡಲಾಯಿತು. ಅಲ್ಲಿಯವರೆಗೂ ಅಭಿಯಾನವನ್ನು ನೋಡಿಕೊಳ್ಳುತ್ತಿದ್ದ ಶಾಗೆ ಈ ಕೊನೆಯ ಕ್ಷಣದ ಬದಲಾವಣೆ ವಿಶ್ವಾಸ-ರಹಿತ ನಡೆಯಂತೆ ಕಂಡಿತು. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಅಭೂತಪೂರ್ವ ಗೆಲುವು ಮತ್ತು ನಂತರದಲ್ಲಿ ಮಹಾರಾಷ್ಟ್ರ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್ ವಿಧಾನಸಬಾ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಕಾರಣಕರ್ತ ಎಂದು ಪ್ರಶಂಸೆಯನ್ನು ಪಡೆದುಕೊಂಡಿದ್ದ ಬಿಜೆಪಿ ಅಧ್ಯಕ್ಷ ಈ ಬದಲಾವಣೆಯನ್ನು ಖುಷಿಯಿಂದ ಸ್ವೀಕರಿಸಲಿಲ್ಲ.
ಆದರೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿಯವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಅಮಿತ್ ಶಾರ ನಿರ್ಧಾರ ಕೈಸುಟ್ಟಾಗ ಪಕ್ಷದ ಚುನಾವಣಾ ಅಭಿಯಾನವು ಹೀನಾಯವಾಗಿ ನೆಲಕಚ್ಚುತ್ತಿದೆ ಎಂದರಿತ ಪಕ್ಷವು ಸಹಾಯಕ್ಕಾಗಿ ಜೇಟ್ಲಿ ಮೊರೆ ಹೋಯಿತು. ದಿಲ್ಲಿಯಿಂದ ಬಂದವರಾದ ಕಾರಣ ಜೇಟ್ಲಿ ಈ ಪರಿಸ್ಥಿತಿಯಿಂದ ಪಕ್ಷವನ್ನು ಮೇಲೆತ್ತುತ್ತಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸುತ್ತಾರೆ ಎಂದು ಭಾವಿಸಲಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಜೇಟ್ಲಿ ಬಿಜೆಪಿಗೆ ಮಧ್ಯಪ್ರದೇಶ, ಬಿಹಾರ ಮತ್ತು ಕರ್ನಾಟಕದಲ್ಲಿ ಸರಣಿ ಜಯಗಳನ್ನು ತಂದುಕೊಟ್ಟ ಅಸಾಧಾರಣ ಖ್ಯಾತಿಯನ್ನು ಹೊಂದಿದ್ದರು. ಆದರೆ, ಜೇಟ್ಲಿ ದಿಲ್ಲಿಯಲ್ಲಿ ತಮ್ಮ ಚಮಾತ್ಕಾರಿ ಸ್ಪರ್ಶವನ್ನು ಕಳೆದುಕೊಂಡರು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಹೇಳಹೆಸರಿಲ್ಲದಂತೆ ಸೋತಿತು. ಅವರ ವಿರೋಧಿಗಳು ಅವರ ಮತ್ತು ಅವರಿಗೆ ಪ್ರಾಮಾಣಿಕವಾಗಿದ್ದ ಬಣದ-ಕೇಂದ್ರ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್-ತಮ್ಮ ಸೇವೆಯನ್ನು ಜೇಟ್ಲಿ ತಮ್ಮ ಚುನಾವಣಾ ಅಭಿಯಾನವನ್ನು ನಿರ್ವಹಿಸಲು ಮುಡಿಪಾಗಿಟ್ಟವರ ವಿರುದ್ಧ ತಕ್ಷಣ ಅಭಿಯಾನ ಆರಂಭಿಸಿದರು.
ದಿಲ್ಲಿ ಫಲಿತಾಂಶದ ನಂತರ ಶಾ ಸ್ಪಷ್ಟವಾಗಿ ಸಮರ್ಥನೆಯ ಭಾವ ಹೊಂದಿದ್ದರು. ಬಿಹಾರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಿಗೆ ಮರು ಏಟು ನೀಡುವ ಅವಕಾಶ ಲಭಿಸಿತು. ದಿಲ್ಲಿಯನ್ನು ಗೆಲ್ಲುವಲ್ಲಿ ಜೇಟ್ಲಿಯವರ ಅಸಮರ್ಥತೆಯನ್ನು ಎತ್ತಿಹಿಡಿದು ವಿತ್ತ ಸಚಿವರಿಗೆ ಬಿಹಾರ ಚುನಾವಣಾ ಅಭಿಯಾನದಲ್ಲಿ ಯಾವುದೇ ಪಾತ್ರ ಸಿಗದಂತೆ ಅಧ್ಯಕ್ಷರು ನೋಡಿಕೊಂಡರು. ಈ ಹಿಂದೆ ಬಿಹಾರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮತ್ತು 2005 ಮತ್ತು 2010ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಫಲಿತಾಂಶಗಳನ್ನು ತಂದುಕೊಟ್ಟ ಜೇಟ್ಲಿಗೆ ಅನಿರೀಕ್ಷಿತ ಆಘಾತವಾಗಿತ್ತು. ಅಧಿಕಾರವನ್ನು ಪಡೆಯುವುದು
ಹೇಗಾದರೂ 2015ರ ಬಿಹಾರ ಚುನಾವಣೆ ಸಂಪೂರ್ಣವಾಗಿ ಶಾ ಅವರ ಪ್ರದರ್ಶನವಾಗಿತ್ತು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಮತ್ತು ಚುನಾವಣಾ ರಣತಂತ್ರವನ್ನು ರೂಪಿಸುವಲ್ಲಿ ಬಿಜೆಪಿ ಅಧ್ಯಕ್ಷರದ್ದೇ ಕೊನೆಯ ಮಾತಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಖುದ್ದು ತಮ್ಮ ಘನತೆ ಪಣದಲ್ಲಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದ ಶಾ ತಮ್ಮದೇ ತಂಡವನ್ನು ಆರಿಸಿಕೊಂಡು ಬೂತ್ ವ್ಯವಸ್ಥಾಪನೆಯಿಂದ ಹಿಡಿದು ಎಲ್ಲಾ ಸಣ್ಣಪುಟ್ಟ ಚುನಾವಣಾ ಕಾರ್ಯಗಳ ಜವಾಬ್ದಾರಿಯನ್ನೂ ಹೆಗಲ ಮೇಲೆ ಹಾಕಿಕೊಂಡರು. ದಿಲ್ಲಿ ಚುನಾವಣೆಯ ನಂತರ ಜೇಟ್ಲಿ ಉತ್ತರದಾ ಯಿಯಾಗಿದ್ದರೆ ಬಿಹಾರ ಫಲಿತಾಂಶದ ನಂತರ ಶಾ ಅಸಮಾಧಾನದ ಅನುಭವ ಪಡೆದರು. ಪರಿಣಾಮವಾಗಿ, ಅವರ ವಿರೋಧಿಗಳು ಪ್ರಮುಖ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಜೇಟ್ಲಿ ಕಾರಣ ಎಂದು ಆರೋಪಿಸಿದ್ದರಿಂದ ಬಿಜೆಪಿ ಅಧ್ಯಕ್ಷರಾಗಿ ಶಾ ಮರು ಆಯ್ಕೆಯಾಗುವುದರ ಬಗ್ಗೆ ಅನಿಶ್ಚಿತತೆ ಕಾಡಲಾರಂಭಿಸಿತು. ಪಕ್ಷದ ವರಿಷ್ಠರಾದ ಅಡ್ವಾಣಿ, ಜೋಷಿ, ಶಾಂತ ಕುಮಾರ್ ಮತ್ತು ಯಶವಂತ್ ಸಿನ್ಹಾ ಬಿಹಾರದಲ್ಲಿ ಪಕ್ಷದ ಸೋಲಿನ ನಂತರ ಶಾರ ಕಾರ್ಯಾಚರಣೆಯ ರೀತಿಯನ್ನು ಪ್ರಶ್ನಿಸಿ ಹೇಳಿಕೆಗಳನ್ನು ನೀಡಿದರು. ಬಿಜೆಪಿಯ ಹಿರಿಯ ನಾಯಕರಿಗೆ ಇತರ ಯಾರೂ ಕೂಡಾ ಬಹಿರಂಗವಾಗಿ ಬೆಂಬಲ ನೀಡದಿದ್ದರೂ ಶಾರ ಲೋಪದಿಂದ ಕೂಡಿದ್ದ ಬಿಹಾರ ಚುನಾವಣಾ ರಣತಂತ್ರ ಮತ್ತು ಮೇಲಾಗಿ ಅವರ ದುರಹಂಕಾರಿ ವರ್ತನೆಯ ಬಗ್ಗೆ ಗ್ರಹಿಸಬಹು ದಾದ ಆಕ್ರೋಶ ಪಕ್ಷದ ಒಳಗೆ ಇತ್ತು. ಈಗ ಈ ಆಕ್ರೋಶ ಬಹಿರಂಗವಾಗುವಂತೆ ಕಾಣುತ್ತಿದೆ.
ಎರಡು ವರ್ಷಗಳ ಹಿಂದೆ ಪಕ್ಷದ ಹೊಸ ನಾಯಕತ್ವದಿಂದ ಮೂಲೆಗುಂಪಾಗಿಸಲ್ಪಟ್ಟ ನಂತರ ಇಬ್ಬರು ಹಿರಿಯ ನಾಯಕರು ಅಸಮಾಧಾನಗೊಂಡು ವೌನಕ್ಕೆ ಜಾರಿದ್ದರು. ಆದರೆ ಸಮಾರಂಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರ ಗೈರು ಅತ್ಯಂತ ಆಶ್ವರ್ಯಕರವಾಗಿತ್ತು.