ದಿಲ್ಲಿ ದರ್ಬಾರ್
ವಿಭಿನ್ನ ಆಚರಣೆ
ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮದಿನವಾದ ಜನವರಿ 23ರಂದು ಬೋಸ್ ಸಂಬಂಧಿಕರೆಲ್ಲ ದಿಲ್ಲಿಯ ರಾಷ್ಟ್ರೀಯ ಸಂಗ್ರಹಾಲಯಕ್ಕೆ ದೌಡಾಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಜತೆಗೆ ಬೋಸ್ ಸಂಬಂಧಿ ಕಡತಗಳನ್ನು ಬಿಡುಗಡೆ ಮಾಡುವ ಸಂ್ರಮ. ಇಲ್ಲಿಂದ ಕೆಲವೇ ಕಿಲೋಮೀಟರ್ ದೂರದ ಕರೋಲ್‌ಬಾಗ್‌ನಲ್ಲಿ ಯಾವ ಸಂಬಂಧಿಗಳೂ ಇಲ್ಲದೇ ಇನ್ನೊಂದು ಸಮಾರಂಭ ನಡೆಯುತ್ತಿತ್ತು.; ಬೋಸ್ ಹುಟ್ಟುಹಾಕಿದ ಆಲ್ ಇಂಡಿಯಾ ಪಾರ್ವರ್ಡ್‌ಬ್ಲಾಕ್‌ನ ಹೊಸ ಕೇಂದ್ರ ಕಚೇರಿ ನೇತಾಜಿ ಭವನದ ಉದ್ಘಾಟನೆ. ಎಡಪಕ್ಷಗಳ ನೇತಾರರಾದ ಸೀತಾರಾಂ ಯಚೂರಿ, ಪ್ರಕಾಶ್ ಕಾರಟ್ ಸೇರಿ ಬಹಳಷ್ಟು ಮಂದಿ ನೆರೆದಿದ್ದರು. ಎನ್‌ಡಿಎ ಸರಕಾರ ಬೋಸ್ ಅವರನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬ ಬಗ್ಗೆ ಮಾತನಾಡಿದರು. ಅಂತೆಯೇ ನೇತಾಜಿ ಸಾವಿನ ಬಗೆಗಿನ ಪಿತೂರಿ ಸಿದ್ಧಾಂತವನ್ನು ಹೇಗೆ ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಆದರೆ ನಂತರ ನಿರ್ದಿಷ್ಟವಾಗಿ ಕಡತಗಳಲ್ಲಿ ಯಾವ ಪಿತೂರಿಯ ಅಂಶ ಕಂಡುಬರಲಿಲ್ಲ.
ಬಿಜೆಪಿ ಬಾಬಾ ಉತ್ಪನ್ನ
ಬಾಬಾ ರಾಮ್‌ದೇವ್ ಬಿಡುಗಡೆ ಮಾಡಿದ ಉತ್ಪನ್ನಗಳಿಗೆ ತಡಕಾಡಲು ದಿಲ್ಲಿಯಲ್ಲಿ ಕಿರಾಣಿ ಅಂಗಡಿಗಳಿಗೆ ಅಲೆಯಬೇಕಿಲ್ಲ. ಬದಲಾಗಿ ಅಶೋಕ ರಸ್ತೆಯ ನಂಬರ್ 11ರತ್ತ ಮುಖ ಮಾಡಿದರೆ ಸಾಕು. ಅಲ್ಲಿ ರಾಮ್‌ದೇವ್ ಜೇನು, ನೂಡಲ್, ಬಿಸ್ಕೆಟ್ ಹಾಗೂ ಚಹಾವನ್ನು ಬಿಜೆಪಿ ಸ್ವಯಂಸೇವಕರು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ. ಬಿಜೆಪಿ ಕಚೇರಿಯ ಹೊರಗೆ ಇಂಥ ಸರಕು ತುಂಬಿದ ಎರಡು ಲಾರಿಗಳು ನಿಂತಿರುತ್ತವೆ. ಸಂದರ್ಶಕರಿಗೆ ಪ್ರಚಾರ ಹಾಗೂ ಮಾರಾಟ ತಂಡ ಸ್ಯಾಂಪಲ್‌ಗಳನ್ನು ನೀಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪತ್ರಕರ್ತರಿಗೆ ಇದೊಂದು ಪ್ರಹಸನ. ಸ್ವತಃ ಘೋಷಿಸಿಕೊಂಡಂತೆ ರಾಮ್‌ದೇವ್ ಅವರು ಮೋದಿ ಭಕ್ತರಾಗಿರುವುದರಿಂದ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಲವು ಭಕ್ತರನ್ನು ಸೆಳೆಯಬಹುದು. ಖಂಡಿತವಾಗಿಯೂ ಸ್ಮಾರ್ಟ್ ವ್ಯಾಪಾರ ನಡೆ.
ಬಿಜೆಪಿ ಅಪ್ಪಿಕೊಳ್ಳದ ಅಮ್ಮ
ಬಿಜೆಪಿ ಹೇಗೆ ಮಿತ್ರರನ್ನು ಕಳೆದುಕೊಳ್ಳುತ್ತಿದೆ ಹಾಗೂ ಹೇಗೆ ಹೊಸಬರ ಗೆಳೆತನ ಸಂಪಾದಿಸಲು ಸಾಧ್ಯವಾಗುತ್ತಿಲ್ಲ ಎಂಬ ಚರ್ಚೆಯಲ್ಲಿ ರಾಜಧಾನಿ ನಿರತವಾಗಿದೆ. ಆಲ್ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ ಜತೆಗಿನ ಮೈತ್ರಿ ನಿರೀಕ್ಷೆಯ ಬಲೂನಿಗೆ ಅಮ್ಮಾ ಸೂಜಿ ಚುಚ್ಚಿದ್ದಾರೆ. ಅರುಣ್ ಜೇಟ್ಲಿ, ಅನಂತ ಕುಮಾರ್, ಸದಾನಂದಗೌಡ ಹೀಗೆ ಗುಪ್ತ ಸಂಧಾನಕಾರರು ಬರಿಗೈಯಲ್ಲಿ ವಾಪಸಾಗಿದ್ದಾರೆ. ಜಿಎಸ್‌ಟಿ ವಿಚಾರಕ್ಕಾಗಲಿ, ಚುನಾವಣಾ ಮೈತ್ರಿ ವಿಷಯದಲ್ಲಾಗಲಿ ಅಮ್ಮಾ ಸೊಪ್ಪುಹಾಕಿಲ್ಲ. ಇನ್ನೊಂದೆಡೆ ಕಾಂಗ್ರೆಸ್, ಡಿಎಂಕೆ ಜತೆಗೆ ಬೆಸುಗೆಗೆ ಮುಂದಾಗಿದೆ. ಇದರಿಂದ ಬಿಜೆಪಿಗೆ ರಾಜ್ಯದಲ್ಲಿ ದೊಡ್ಡ ಪಕ್ಷದ ಮೈತ್ರಿ ಸಾಧ್ಯತೆ ಕ್ಷೀಣಿಸಿದೆ. ಬಹುಶಃ ಅಮ್ಮನ ಹೃದಯ ಕರಗಿಸಲು ಚಿಂತನ ಬೈಠಕ್‌ನಿಂದ ಸಾಧ್ಯವಾಗಬಹುದೇನೋ?
ಸ್ವಚ್ಛಗಂಗೆಗೆ ಟೊಂಕ ಕಟ್ಟಿದ ಸಾಧ್ವಿ
ಉಮಾಭಾರತಿ ಹೆಚ್ಚು ಕ್ರಿಯಾಶೀಲರಾದಂತೆ ಕಾಣುತ್ತಿದೆ. ತೀರಾ ಮಲಿನವಾಗಿರುವ ಪವಿತ್ರ ನದಿಯ ಸ್ವಚ್ಛತೆಗೆ ಟೊಂಕ ಕಟ್ಟಿದ್ದಾರೆ. ರಾಷ್ಟ್ರೀಯ ಗಂಗಾ ನದಿ ಕಣಿವೆ ಪ್ರಾಧಿಕಾರದ ಸದಸ್ಯರೂ ಆಗಿರುವ ಜಲಸಂಪನ್ಮೂಲ ಸಚಿವೆ, ಕಚೇರಿ ಅವಧಿಯನ್ನೂ ಮೀರಿದ ಮ್ಯಾರಥಾನ್ ಸಭೆಗಳಿಗೆ ಖುದ್ದಾಗಿ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಕೆಲ ಬಾಬೂಗಳು ಕಚೇರಿಯಲ್ಲಿ ಹೆಚ್ಚು ಅವಧಿ ಕಳೆಯಲು ಸಿದ್ಧವಿರುವುದರಿಂದ ಈ ಸನ್ಯಾಸಿನಿ ಸಚಿವೆಗೆ ಈ ವಿಶಿಷ್ಟ ಯೋಚನೆ ಬಂದಿದೆ. ಕೆಲ ಪ್ರಮುಖ ಅಧಿಕಾರಿಗಳ ನಿವಾಸಗಳಿಗೂ ತೆರಳಿ ಗಂಗಾಸ್ವಚ್ಛತೆ ರಾಷ್ಟ್ರದ ಆದ್ಯತೆ ಎನ್ನುವುದನ್ನು ಅಧಿಕಾರಿ ಪತ್ನಿ/ಪತಿಗೆ ಮನವರಿಕೆ ಮಾಡುವ ರೂಢಿಯನ್ನೂ ಬೆಳೆಸಿಕೊಂಡಿದ್ದಾರೆ. ಕಠಿಣ ಪರಿಶ್ರಮದ ಪ್ರತಿಫಲವನ್ನು ಉಲ್ಲೇಖಿಸಲೂ ಸಾಧ್ವಿ ಮರೆಯುತ್ತಿಲ್ಲ. ಅದು ಪವಿತ್ರ ಆಶೀರ್ವಾದ! ಅಧಿಕಾರಿಗಳಿಗೆ ಬೇಕೇ?
ನೇರಾ ನೇರ
ರಾಜಕೀಯ ಕುಶಾಗ್ರಮತಿಯಾಗಿ ರಾಹುಲ್ ಇನ್ನೂ ಬದಲಾಗಿಲ್ಲ. ಆದರೆ ಕಾಂಗ್ರೆಸ್ ಉಪಾಧ್ಯಕ್ಷರ ಇಮೇಜ್ ಬದಲಾಗುತ್ತಿದೆ. ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಇತ್ತೀಚೆಗೆ ರಾಹುಲ್ ಅವರನ್ನು ಭೇಟಿ ಮಾಡಿ ತಮ್ಮ ಹೊಸ ‘ಅದರ್ ಸೈಡ್ ಆಫ್ ವೌಂಟೇನ್’ ಕೃತಿಯ ಪ್ರತಿ ನೀಡಿದರು. ತಕ್ಷಣ ರಾಹುಲ್, ‘‘ಇದನ್ನು ಸಂಪೂರ್ಣವಾಗಿ ನೀವೇ ಬರೆದದ್ದೇ’’ ಎಂದು ಪ್ರಶ್ನಿಸಿದರು. ಆಕ್ಸ್ ಫರ್ಡ್ ಪದವೀಧರ, ಖ್ಯಾತ ವಕೀಲ ಹೌದೆಂಬಂತೆ ತಲೆಯಾಡಿಸಿದರು. ಈ ಕೃತಿ ಬರೆಯಲು ರಾಜಕಾರಣಿ- ಪತ್ರಕರ್ತೆ ಪತ್ನಿಯ ಸಹಾಯ ಪಡೆದಿದ್ದ ಈ ಕಾಂಗ್ರೆಸ್ ನಾಯಕ, ರಾಹುಲ್ ಪ್ರಶ್ನೆಯ ಗೂಡಾರ್ಥದ ಬಗ್ಗೆ ಅಚ್ಚರಿಪಟ್ಟರು.