ಮಹಿಳೆಯರು ಹೆಚ್ಚಾಗಿ ಆಲೂಗಡ್ಡೆ ತಿಂದರೆ?
ಮಹಿಳೆಯರು ಆಲೂಗಡ್ಡೆಯನ್ನು ಹೆಚ್ಚಾಗಿ ತಿಂದರೆ ಅವರು ಗರ್ಭ ಧರಿಸಿದ ವೇಳೆಯಲ್ಲಿ ಮಧುಮೇಹ ಬಾಧಿಸುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
ಆದ್ದರಿಂದ ಮಹಿಳೆಯರು ತಮ್ಮ ಆಹಾರದ ಮೆನುವಲ್ಲಿ ಆಲೂಗಡ್ಡೆಯನ್ನು ತೊರೆದು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ, ಸೊಪ್ಪು, ಧಾನ್ಯಗಳನ್ನು ಸೇವಿಸಿದರೆ ಗರ್ಭಿಣಿಯರಾದಾಗ ಬರುವ ಮಧುಮೇಹವನ್ನು ತಡೆಯಬಹುದು.
ಗರ್ಭ ಧರಿಸಿದಾಗ ಬರುವ ಮಧುಮೇಹ, ಗರ್ಭಿಣಿಯರಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಉಂಟಾಗುತ್ತದೆ. ಇದು ಭವಿಷ್ಯದಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಅಮೆರಿಕದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಹಾಗೂ ಹಾರ್ವರ್ಡ್ ಯುನಿವರ್ಸಿಟಿಯ ಸಂಶೋಧಕರು ಈ ಬಗೆಗಿನ ಅಧ್ಯಯನಕ್ಕೆ ನೇತೃತ್ವ ನೀಡಿದ್ದಾರೆ.
1991-2001ರ ನಡುವೆ 15,000 ಮಹಿಳೆಯರಲ್ಲಿ ನಡೆಸಿದ ಅಧ್ಯಯನದ ಹಿನ್ನೆಲೆಯಲ್ಲಿ ಅಚ್ಚರಿಯ ವರದಿಯೊಂದು ಬಂದಿದೆ. ಆದೇನಪ್ಪಾಂತದ್ರೆ ಅಧ್ಯಯನಕ್ಕೆ ಒಳಪಡಿಸಿದ ಮಹಿಳೆಯರ ಆಹಾರ ಕ್ರಮದಲ್ಲಿ ನಿಗಾ ಇಡಲಾಗಿತ್ತು. ಇದೇ ವೇಳೆ ಆಲೂಗಡ್ಡೆ ಹೆಚ್ಚಾಗಿ ತಿಂದ ಮಹಿಳೆಯರಲ್ಲಿ ಇತರರಿಗೆ ಹೋಲಿಸಿದಾಗ ಅವರು ಗರ್ಭಧರಿಸಿದ ಸಂದರ್ಭದಲ್ಲಿ ಮಧುಮೇಹ ಬಾಧಿಸುವುದು ಕಂಡುಬಂತು.
ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಈ ಬಗ್ಗೆ ಅಧ್ಯಯನದ ವಿವರಗಳನ್ನು ಪ್ರಕಟಿಸಲಾಗಿದೆ.
ಕೃಪೆ: ಮನೋರಮಾ ಆನ್‌ಲೈನ್