ಕೃಷ್ಣಾಪುರದ ಪಾರ್ಕ್ನೊಳಗೆ ಅಪಾಯಕಾರಿ ಟ್ಯಾಂಕ್!
ಮಂಗಳೂರು, ಜ.31: ನಗರದ ಕೃಷ್ಣಾಪುರದ ಏಳನೆ ಬ್ಲಾಕ್ನಲ್ಲಿ ಮುಚ್ಚಳವಿಲ್ಲದ ಸುಮಾರು ಹತ್ತು ಅಡಿ ಆಳದ ಟ್ಯಾಂಕ್ವೊಂದು ಅಪಾಯ ವನ್ನು ಆಹ್ವಾನಿಸುತ್ತಿದೆ. ಕೃಷ್ಣಾಪುರದ ಜನವಸತಿ ಪ್ರದೇಶದಲ್ಲಿ ಜನರ ಏಕಾಂತ ನೀಗಿಸಲು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ವೊಂದು ನಿರ್ಮಾಣ ವಾಗಿದೆ. ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಇನ್ನು ಉದ್ಘಾಟನೆಗೊಳ್ಳದ ಈ ಪಾರ್ಕ್ನಲ್ಲಿ ಸಂಜೆಯಾದರೆ ಜನರು ವಿಹಾರಕ್ಕೆ ಆಗಮಿಸುತ್ತಾರೆ. ಜೊತೆಗೆ ಮಕ್ಕಳು ಇಲ್ಲಿ ಆಟವಾಡುವುದು ಸಾಮಾನ್ಯ. ಈ ಟ್ಯಾಂಕ್ನಿಂದ ಅಪಾಯ ಕೈಬೀಸಿ ಕರೆಯುತ್ತಿದ್ದರೂ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಇತ್ತ ಕಡೆ ಕಣ್ಣು ಹಾಯಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಪಾರ್ಕ್ ಒಳಗಡೆ ಇರುವ ನೀರಿನ ಟ್ಯಾಂಕ್ ಜನರ, ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಲು ಕಾದು ಕೂತಿದೆ. ಸುಮಾರು 25 ವರ್ಷಗಳ ಹಿಂದೆ ಭೂಮಿಯ ಅಡಿ ಭಾಗದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಇಲ್ಲಿ ಪಾರ್ಕ್ ನಿರ್ಮಾಣಗೊಂಡ ನಂತರ ಅಪಾಯಕಾರಿ ಪ್ರದೇಶವಾಗಿಬಿಟ್ಟಿದೆ. ಈ ಟ್ಯಾಂಕ್ನಲ್ಲಿ ನೆಲದ ಮಟ್ಟದಷ್ಟು ನೀರಿದೆ. ಟ್ಯಾಂಕ್ ಮೇಲ್ಭಾಗದಲ್ಲಿ ಕಾಂಕ್ರೀಟ್ ಮಾಡಲಾಗಿದ್ದು, ಒಂದು ಕಡೆ ಮಾತ್ರ ಅಂದಾಜು 2 ಅಡಿ ಅಗಲ, 2 ಅಡಿ ಉದ್ದದಷ್ಟು ವಿಸ್ತೀರ್ಣದ ಭಾಗವನ್ನು ಕಾಂಕ್ರೀಟ್ ಮಾಡದೆ ತೆರೆದಿಡಲಾಗಿದೆ. ಟ್ಯಾಂಕ್ನೊಳಗೆ ಸ್ವಚ್ಛತೆಗಾಗಿ ಹೋಗಲು ಏಣಿಯನ್ನು ಅಳವಡಿಸಲಾಗಿದೆ. ಆದರೆ ಸ್ವಚ್ಛತೆ ಮಾಡಿದ ನಂತರ ಇದನ್ನು ಮುಚ್ಚುವ ವ್ಯವಸ್ಥೆ ಇಲ್ಲ. ಹಾಗಾಗಿ ನೀರಿನ ಟ್ಯಾಂಕ್ನ ಒಂದು ಭಾಗ ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಪಾರ್ಕ್ಗೆ ಬರುವ ಮಕ್ಕಳು ಯಾವುದೇ ಪರಿವೆಯಿಲ್ಲದೆ ಆಟವಾಡುವುದು ಇಲ್ಲಿ ಸಾಮಾನ್ಯ. ಆದರೆ ಹೀಗೆ ಮಾಡಿದರೆ ಅಪಾಯ ಗ್ಯಾರಂಟಿ.
ಆಕಸ್ಮಿಕವಾಗಿ ಇಲ್ಲಿ ಹೆಜ್ಜೆಯಿಟ್ಟರೆ ನೀರಿನೊಳಗೆ ಬೀಳುವ ಸಾಧ್ಯತೆಯೆ ಹೆಚ್ಚು. ಜೊತೆಗೆ ಟ್ಯಾಂಕ್ ಮೇಲೆ ಮರದ ಗೆಲ್ಲುಗಳಿದ್ದು, ಮಕ್ಕಳು ಮರದ ಗೆಲ್ಲನ್ನು ಹಿಡಿದು ನೇತಾಡುವುದು ಸಾಮಾನ್ಯವಾಗಿದೆ. ಗೆಲ್ಲಿನಿಂದ ಕೈ ತಪ್ಪಿ ಕೆಳಗೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಕಳೆದೆರಡು ವರ್ಷಗಳ ಹಿಂದೆ ನಿರ್ಮಾಣ ವಾದ ಈ ಪಾರ್ಕ್ಗೆ ವ್ಯಯಿಸಿದ ವೆಚ್ಚದ ಬಗ್ಗೆಯೂ ಸಾರ್ವಜನಿಕರಲ್ಲಿ ಸಂಶಯವಿದೆ. ಪಾರ್ಕ್ ನಿರ್ಮಾಣಕ್ಕೆ ಸರಕಾರದಿಂದ 60 ಲಕ್ಷ ರೂ. ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ 60 ಲಕ್ಷ ರೂ.ವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಪಾರ್ಕ್ ನಿರ್ಮಾಣ ಪೂರ್ಣ ಗೊಂಡು ವರ್ಷಗಳೆ ಕಳೆದಿದ್ದರೂ ‘ಉದ್ಘಾಟನೆ’ ಭಾಗ್ಯ ಲಭಿಸದಿರುವುದು ವಿಪರ್ಯಾಸ.
ಮನಪಾಗೆ ಸೂಚನೆ: ಶಾಸಕ ಬಾವ
ಪಾರ್ಕ್ನೊಳಗಿನ ತೆರೆದ ಟ್ಯಾಂಕ್ನ ಮೇಲ್ಭಾಗ ಮುಚ್ಚಲು ಮಂಗಳೂರು ಮಹಾನಗರಪಾಲಿಕೆಗೆ ಸೂಚಿಸಲಾ ಗಿದ್ದು, ಇದರ ಪ್ರಕ್ರಿಯೆ ನಡೆಯು ತ್ತಿದೆ. ಪಾರ್ಕ್ ನಿರ್ಮಾಣದ ಕಾರ್ಯ ಇನ್ನು ಪೂರ್ತಿಯಾಗದ ಕಾರಣ ಪಾರ್ಕನ್ನು ಉದ್ಘಾಟನೆ ಗೊಳಿಸಲಾಗಿಲ್ಲ. ಪಾರ್ಕ್ಗೆ ಬರುವ ಜನರಿಗೆ ಅನುಕೂಲವಾಗಲು ಬೆಂಚ್ ನಿರ್ಮಾಣ ಸೇರಿ ದಂತೆ ವಿವಿಧ ಕಾಮಗಾರಿಗಳು ಬಾಕಿ ಇವೆ. ಈಗಾಗಲೆ 20 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಎನ್ಎಂಪಿಟಿಯಿಂದ 30 ಲಕ್ಷ ರೂ. ಲಭಿಸಿದೆ. ಶಾಸಕರ ನಿಧಿಯಿಂದ ಮತ್ತೆ 15 ಲಕ್ಷ ರೂ. ನೀಡಲಾಗುವುದು. ಕಾಮಗಾರಿ ಶೀಘ್ರ ಆರಂಭಿಸಿ ಎಪ್ರಿಲ್ನಲ್ಲಿ ಪೂರ್ಣಗೊಳಿಸಲಾಗುವುದು.
-ಮೊಯ್ದಿನ್ ಬಾವ, ಶಾಸಕರು
ಬಹಳ ಹಿಂದಿನ ಈ ನೀರಿನ ಟ್ಯಾಂಕ್ಗೆ ಅಪಾಯದ ಹಿನ್ನೆಲೆಯಲ್ಲಿ ಅದನ್ನು ಕಬ್ಬಿಣದ ಬಾಗಿಲು ಮಾಡಿ ಮುಚ್ಚಿ ಬೀಗವನ್ನು ಹಾಕಲಾಗಿತ್ತು. ಆದರೆ ಅದನ್ನು ಯಾರೋ ತೆಗೆದಿರಬೇಕು. ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ತೆರೆದ ಟ್ಯಾಂಕನ್ನು ಶಾಶ್ವತವಾಗಿ ಮುಚ್ಚಲಾಗುವುದು.
-ಖಾದರ್, ಜೆ.ಇ. ಮನಪಾ,
ಸುರತ್ಕಲ್ ಕಚೇರಿಅಪಾಯಕಾರಿಯಾಗಿರುವ ನೀರಿನ ಟ್ಯಾಂಕ್ಗೆ ಮುಚ್ಚಳವನ್ನು ಅಳವಡಿಸ ಬೇಕು. ಇಲ್ಲದಿದ್ದರೆ ಮಕ್ಕಳ ಪ್ರಾಣಕ್ಕೆ ಅಪಾಯವಾಗಬಹುದು. ಅದೇ ರೀತಿ ಟ್ಯಾಂಕ್ ಸ್ವಚ್ಛಗೊಳಿಸದೆ ತಿಂಗಳುಗಳೆ ಕಳೆದಿದ್ದು ಕಸ ಕಡ್ಡಿಗಳು ತುಂಬಿಕೊಂಡಿವೆ. ಈ ಬಗ್ಗೆ ಶಾಸಕರು, ಮನಪಾ ಅಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ.
-ಇಬ್ರಾಹೀಂ, ನಾಗರಿಕ ಸಮಿತಿ ಅಧ್ಯಕ್ಷ.ಟ್ಯಾಂಕ್ ಮುಚ್ಚದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದಕ್ಕಿಂತ ಮುಂಚೆಯೇ ಅದನ್ನು ಸರಿಪಡಿಸಬೇಕು. ಅದೇ ರೀತಿಯಲ್ಲಿ ಪಾರ್ಕ್ಗೆ ವ್ಯಯಿಸಿದ ಖರ್ಚು ವೆಚ್ಚದ ಬಗ್ಗೆಯೂ ಸಂಶಯವಿದೆ.
-ಅಬ್ಬಾಸ್, ಕೃಷ್ಣಾಪುರ ನಿವಾಸಿ.ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಯಾಗಬೇಕು.
-ಸಂಶುದ್ದೀನ್, ಪ್ರಧಾನ ಕಾರ್ಯದರ್ಶಿ, ನಾಗರಿಕ ಸಮಿತಿ