ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿಗಳ ರಚನೆ
ಬೆಂಗಳೂರು, ಫೆ.3: ಕರ್ನಾಟಕ ಸರಕಾರ ಸಾಂಸ್ಕೃತಿಕ, ಸಾಹಿತ್ಯ ಹಾಗೂ ನಾಡು ನುಡಿಗೆ ಅತ್ಯುತ್ತಮ ಕೊಡುಗೆ ನೀಡಿದ ಗಣ್ಯರಿಗೆ 2015ನೆ ಸಾಲಿಗೆ ನೀಡಲಾಗುವ ಪ್ರಶಸ್ತಿ ಗಳಿಗೆ ಆಯ್ಕೆ ಮಾಡಲು ಆಯ್ಕೆ ಸಮಿತಿಗಳನ್ನು ರಚಿಸಿದೆ.
ಬಸವ ರಾಷ್ಟ್ರೀಯ ಪ್ರಶಸ್ತಿ: ಬೀದರ್‌ನ ಸಿದ್ದರಾಮ ಬೆಲ್ದಾಳ ಶರಣರು- ಅಧ್ಯಕ್ಷರು, ಅಥಣಿಯ ಬಿ.ಎಲ್. ಪಾಟೀಲ್, ಕಲಬುರಗಿಯ ಡಾ. ಜಯಶ್ರೀ ದಂಡೆ, ಬೆಂಗಳೂರಿನ ಡಾ.ಸಿ.ವೀರಣ್ಣ, ಧಾರವಾಡದ ಡಾ.ವೀರಣ್ಣ ರಾಜೂರು, ಉಡುಪಿಯ ಕಾಂತಾವರದ ಡಾ.ನಾ. ಮೊಗಸಾಲೆ ಸದಸ್ಯರಾಗಿದ್ದಾರೆ. ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ: ಬೆಂಗಳೂರಿನ ರಾಜಶೇಖರ ಮನ್ಸೂರ್- ಅಧ್ಯಕ್ಷರು, ಉತ್ತರ ಕನ್ನಡದ ಗಣಪತಿ ಭಟ್ ಹಸಣಗಿ, ಕಲಬುರಗಿಯ ಫಕಿರೇಶ್ ಕಣ, ಧಾರವಾಡದ ಶೇಖ್ ಅಬ್ದುಲ್ ಖಾಜಿ, ಬೆಂಗಳೂರಿನ ಮೈಸೂರು ಸುಬ್ರಹ್ಮಣ್ಯ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷರು ಸದಸ್ಯರಾಗಿದ್ದಾರೆ.
ಜಾನಪದ ಶ್ರೀ ಪ್ರಶಸ್ತಿ: ಮೈಸೂರಿನ ಹಿ.ಶಿ.ರಾಮಚಂದ್ರೇ ಗೌಡ- ಅಧ್ಯಕ್ಷರು, ಶಿವಮೊಗ್ಗದ ಬಸವರಾಜ ನೆಲ್ಲಿಸರ, ಬೆಂಗಳೂರಿನ ಡಾ.ಚಕ್ಕೆರೆ ಶಿವಶಂಕರ್, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶ್ರೀಪಾದ ಶೆಟ್ಟಿ, ಕಲಬುರಗಿಯ ಶಕುಂತಲಾ ದೇವಲಾ ನಾಯಕ್, ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.
ಶಾಂತಲಾ ನಾಟ್ಯ ಪ್ರಶಸ್ತಿ: ತುಮಕೂರಿನ ಕೆ.ಎಂ.ರಾಮ ನ್-ಅಧ್ಯಕ್ಷರು, ಬಳ್ಳಾರಿಯ ಜಿಲಾನಿ ಬಾಷಾ, ಶಿವಮೊಗ್ಗದ ಗೀತಾದಾತಾರ್, ಮೈಸೂರಿನ ಶಾಂತಲಾ ವಟ್ಟಂ, ಬೆಂಗಳೂರಿನ ಡಾ. ಚೂಡಾಮಣಿ ನಂದಗೋಪಾಲ್ ಸದಸ್ಯರಾಗಿರುತ್ತಾರೆ.
ರಂಗಭೂಮಿ ವಿಭಾಗ ಪ್ರಶಸ್ತಿ: ಬಳ್ಳಾರಿಯ ರಂಗ ಸುಭದ್ರಮ್ಮ ಮನ್ಸೂರ್- ಅಧ್ಯಕ್ಷರು, ಡಾ.ಕೆ.ವಿ.ಅಕ್ಷರ, ಮಾಲತಿ ಸುಧೀರ್, ಗದಗದ ಫಕೀರಪ್ಪ, ಇಳಕಲ್‌ನ ಮಾಹಾಂತೇಶ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರು, ರಂಗಾಯಣ ನಿರ್ದೇಶಕರು ಸದಸ್ಯರಾಗಿರುತ್ತಾರೆ.
ಲಲಿತಕಲಾ ವಿಭಾಗದ ಪ್ರಶಸ್ತಿ: ಬಳ್ಳಾರಿ ಜಿಲ್ಲೆಯ ಸಂಡೂರಿನ ವಿ.ಟಿ.ಕಾಳೆ- ಅಧ್ಯಕ್ಷರು ಚಿತ್ರ ಕಲಾವಿದ ಹುಬ್ಬಳ್ಳಿಯ ಸಿ.ಡಿ. ಜಟ್ಟಣ್ಣನವರ್, ಮಂಗಳೂರಿನ ಗಣೇಶ್ ಸೋಮಾಯಾಜಿ, ಶಿಲ್ಪ ಕಲಾವಿದ ಕಲಬುರಗಿಯ ಚಂದ್ರಶೇಖರ್ ವೈ.ಶಿಲ್ಪಿ, ಬೆಂಗಳೂರಿನ ನಾಗಪ್ಪ, ಕರ್ನಾಟಕ, ಶಿಲ್ಪಕಲಾ ಅಕಾಡಮಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.
ಸಂಗೀತ ವಿಭಾಗದ ಪ್ರಶಸ್ತಿ: ಬೆಂಗಳೂರಿನ ಆರ್.ಕೆ.ಪದ್ಮನಾಭ- ಅಧ್ಯಕ್ಷರು, ಬೆಂಗಳೂರಿನ ಎಂ.ಎಸ್. ಶೀಲಾ, ಮೈಸೂರಿನ ಡಾ. ಆರ್.ಎನ್. ಶ್ರೀಲತಾ, ಧಾರವಾಡದ ಜಯದೇವ್ ಜಂಗಮ ಶೆಟ್ಟಿ, ದಕ್ಷಿಣ ಕನ್ನಡದ ಪುತ್ತೂರು ನರಸಿಂಹ ನಾಯಕ್, ಜಯಪುರದ ಲತಾ ಜಹಗೀರದಾರ್, ಬೆಂಗಳೂರಿನ ಎ.ವಿ. ಪ್ರಸನ್ನ, ಕೋಲಾರದ ರೇಣುಕಾ ರಾಮರಾವ್, ಬೆಂಗಳೂರಿನ ತಿರುಮಲೆ ಶ್ರೀನಿವಾಸ್, ಕಲಬುರಗಿಯ ರೇವಯ್ಯ ವಸ್ತ್ರದ ಮಠ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.
ಎಲ್ಲ ಏಳು ಆಯ್ಕೆ ಸಮಿತಿಗಳಿಗೆ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.